ಬಾರೊ ಸಾಧನಕೇರಿಗೆ – ಅಂಬಿಕಾತನಯದತ್ತ

ಕವಿ – ಅಂಬಿಕಾತನಯದತ್ತ ಗಾಯಕಿ – ಎಂ.ಡಿ.ಪಲ್ಲವಿ ಸಂಗೀತ – ಪ್ರವೀಣ್ ಗೋಡ್ಕಿಂಡಿ ಹಾಡು ಕೇಳಿ  ಬಾರೊ ಸಾಧನಕೇರಿಗೆ ಮರಳಿ ನಿನ್ನೀ ಊರಿಗೆ ಮಳೆಯು ಎಳೆಯುವ ತೇರಿಗೆ ಹಸಿರು ಏರಿದೆ ಏರಿಗೆ ಹಸಿರು ಸೇರಿದೆ ಊರಿಗೆ ಹಸಿರು ಚಾಚಿದೆ ದಾರಿಗೆ ನಂದನದ ತುಣುಕೊಂದು ಬಿದ್ದಿದೆ ನೋಟ ಸೇರದು ಯಾರಿಗೆ? ಮಲೆಯ ಮೊಗವೆ ಹೊರಳಿದೆ ಕೋಕಿಲಕೆ ಸವಿ Read More

ಲಘುವಾಗೆಲೆ ಮನ – ಪುತಿನ

ಕವಿ – ಪುತಿನ ಗಾಯಕ – ಡಾ.ರಾಜ್‍ಕುಮಾರ್ ಸಂಗೀತ – ಸಿ.ಅಶ್ವಥ್ ಲಘುವಾಗೆಲೆ ಮನ ಗೆಲವಾಗೆಲೆ ಮನ ಹಾರು ನನ್ನ ಬಿಟ್ಟು ಹಾರಿ ಹರಿಯ ಮುಟ್ಟು ನನಗಂಟಲು ನೀನಾಗುವೆ ಕಷ್ಮಲ ನನ್ನ ತೊರೆಯೆ ನೀ ನಿರ್ಮಲ ನಿಷ್ಕಳ ಹರಿಯೊ ನನ್ನ ಬಿಟ್ಟು ಮುಂಬರಿದು ಹರಿಯ ಮುಟ್ಟು ನೀಲದಾಗಸದ ಹರಹೊಳು ಹಾರುತ ಅಂಚೆಯಂತೆ ಮುಗಿಲಂಚನು ಸೇರುತ ಕ್ಷೀರಾಬ್ಧಿಶಾಯಿ Read More

ಬಾಗಿಲೊಳು ಕೈ ಮುಗಿದು – ಕುವೆಂಪು

ಕವಿ – ಕುವೆಂಪು ಹಾಡು ಕೇಳಿ – ೧. ಶಿವಮೊಗ್ಗ ಸುಬ್ಬಣ್ಣ  ೨. ರತ್ನಮಾಲಾ ಪ್ರಕಾಶ್  ಬಾಗಿಲೊಳು ಕೈಮುಗಿದು ಒಳಗೆ ಬಾ ಯಾತ್ರಿಕನೆ ಶಿಲೆಯಲ್ಲವೀ ಗುಡಿಯು ಕಲೆಯ ಬಲೆಯು ಕಂಬನಿಯ ಮಾಲೆಯನು ಎದೆಯ ಬಟ್ಟಲೊಳಿಟ್ಟು ಧನ್ಯತೆಯ ಕುಸುಮಗಳ ಅರ್ಪಿಸಿಲ್ಲಿ ಘಂಟೆಗಳ ದನಿಯಿಲ್ಲ ಜಾಗಟೆಗಳಿಲ್ಲಿಲ್ಲ ಕರ್ಪೂರದಾರತಿಯ ಜ್ಯೋತಿಯಿಲ್ಲ ಭಗವಂತನಾನಂದ ರೂಪುಗೊಂಡಿಹುದಿಲ್ಲಿ ರಸಿಕತೆಯ ಕಡಲುಕ್ಕಿ ಹರಿವುದಿಲ್ಲಿ ಸರಸದಿಂದುಲಿಯುತಿದೆ ಶಿಲೆಯು ರಾಮಾಯಣವನಿಲ್ಲಿ ಬಾದರಾಯಣನಂತೆ ಭಾರತವ ಹಾಡುತಿಹುದಿಲ್ಲಿ Read More

ಹಚ್ಚೇವು ಕನ್ನಡದ ದೀಪ – ಡಿ.ಎಸ್.ಕರ್ಕಿ

ಕವಿ –  ಡಿ.ಎಸ್.ಕರ್ಕಿ ಹಾಡು ಕೇಳಿ ಹಚ್ಚೇವು ಕನ್ನಡದ ದೀಪ ಕರುನಾಡದೀಪ ಸಿರಿನುಡಿಯದೀಪ ಒಲವೆತ್ತಿ ತೋರುವಾ ದೀಪ ಹಚ್ಚೇವು ಕನ್ನಡದ ದೀಪ|| ಬಹುದಿನಗಳಿಂದ ಮೈಮರೆವೆಯಿಂದ ಕೂಡಿರುವ ಕೊಳೆಯ ಕೊಚ್ಚೇವು ಎಲ್ಲೆಲ್ಲಿ ಕನ್ನಡದ ಕಂಪು ಸೂಸಲು ಅಲ್ಲಲ್ಲಿ ಕರಣ ಚಾಚೇವು ನಡು ನಾಡೆ ಇರಲಿ, ಗಡಿನಾಡೆ ಇರಲಿ ಕನ್ನಡದ ಕಳೆಯ ಕೆಚ್ಚೇವು ಮರತೇವು ಮರವ ತೆರೆದೇವು ಮನವ Read More

ಸುಪ್ತದೀಪ್ತಿಯವರ ಎರಡು ಕವನಗಳು

ವಾಯುವಿಹಾರ – ಸುಪ್ತದೀಪ್ತಿ  ಬರಹೇಳಿದ್ದ ದುಷ್ಯಂತ. ಮರದ ಕೆಳಗೆ ಕಾದಳು, ಕಾದೇ ಕಾದಳು ಇವಳು. ಬೆರಳಲ್ಲಿ ಉಂಗುರ, ಬಾನಲ್ಲಿ ಚಂದಿರ. ರಥವಿಲ್ಲದ ಕುದುರೆಯಲ್ಲಿ ಟಕಟಕಿಸುತ್ತ ಬಂದ ನಲ್ಲ ಹತ್ತು – ಎಂದ. ಹಿಂದೆ-ಮುಂದೆ ನೋಡದೆ, ಕಣ್ವ-ಗೌತಮಿಯರ ನೆನೆಯದೆ, ಬೆನ್ನಿಗಂಟಿದಳು, ಕಣ್ಣು ಮುಚ್ಚಿದಳು. ಗಾಳಿಯ ಸುಗಂಧ ಇವನದೇ. ಕುದುರೆಯ ವೇಗ ಮನಸಿನದೇ. ಎಚ್ಚರಾದಾಗ- ಉಂಗುರ ಮೀನಿನೊಳಗಿತ್ತು. ಮುದಿ Read More