ಕರ್ನಾಟಕ – ಚನ್ನವೀರ ಕಣವಿ

ಕವಿ – ಚನ್ನವೀರ ಕಣವಿ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಹಸಿಗೋಡೆಯ ಹರಳಿನಂತೆ ಹುಸಿಹೋಗದ ಕನ್ನಡ ಹೊಸೆದ ಹಾಗೆ ಹುರಿಗೊಳ್ಳುವ ಗುರಿ ತಾಗುವ ಕನ್ನಡ ಕುರಿತೋದದ ಪರಿಣತಮತಿ ಅರಿತವರಿಗೆ ಹೊಂಗೊಡ ಪಡುಗಡಲಿನ ತೆರೆಗಳಂತೆ ಹೆಡೆ ಬಿಚ್ಚುತ ಮೊರೆಯುವ ಸಹ್ಯಾದ್ರಿಯ ಶಿಖರದಂತೆ ಬಾನೆತ್ತರ ಕರೆಯುವ ಗುಡಿ ಗೋಪುರ ಹೊಂಗಳಸಕೆ ಚೆಂಬೆಳಕಿನ ಕನ್ನಡ ನಮ್ಮೆಲ್ಲರ ಮೈಮನಸಿನ ಹೊಂಗನಸಿನ ಕನ್ನಡ Read More

ಉದಯವಾಗಲಿ ಚೆಲುವ ಕನ್ನಡನಾಡು

ಕವಿ –  ಹುಯಿಲಗೋಳ ನಾರಾಯಣರಾವ್ ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು ಬದುಕು ಬಲುಹಿನ ನಿಧಿಯು ಸದಭಿಮಾನದ ಗೂಡು. ರಾಜನ್ಯರಿಪು ಪರಶುರಾಮನಮ್ಮನ ನಾಡು ಆ ಜಲಧಿಯನೆ ಜಿಗಿದ ಹನುಮನುದಿಸಿದ ನಾಡು ಓಜೆಯಿಂ ಮೆರೆದರಸುಗಳ ಸಾಹಸದ ಸೂಡು ತೇಜವನು ನಮಗೀವ ವೀರವೃಂದದ ಬೀಡು. ಲೆಕ್ಕಿಗಮಿತಾಕ್ಷರರು ಬೆಳೆದು ಮೆರೆದಿಹ ನಾಡು ಜಕ್ಕಣನ ಶಿಲ್ಪಕಲೆಯಚ್ಚರಿಯ ಕರುಗೋಡು ಚೊಕ್ಕಮತಗಳ ಸಾರಿದವರಿಗಿದು ನೆಲೆವೀಡು ಬೊಕ್ಕಸದ ಕಣಜವೈ Read More

ಪುತಿನ – ಕತೆಗಾರ

ಕವನ – ಕತೆಗಾರ ಕವಿ – ಪುತಿನ ಕವನ ಸಂಕಲನ – ಹೃದಯ ವಿಹಾರಿ ವೆತೆಗಳ ಕಳೆಯುವ ಕತೆಗಾರ ನಿನ್ನ ಕಲೆಗೆ ಯಾವುದು ಭಾರ? ಆವುದು ವಿಸ್ತರ ಯಾವುದು ದುಸ್ತರ ನಿನಗೆಲೆ ಹರ್ಷದ ಹರಿಕಾರ? ಕಪಿ ಹಾರಿತು ಹೆಗ್ಗಡಲನು ಎಂಬೆ ಕಡಲನೆ ಕಡೆದರು ಬೆಟ್ಟದೊಳೆಂಬೆ ನಿನ್ನೂಹೆಯ ಹೇರಾಳವ ತುಂಬೆ ಸೃಷ್ಟಿಕರ್ತನಿಗು ಅರಿದೆಂಬೆ ಒಲುಮೆಬೇಹಿಗಾ ಮೇಘಮರಾಳ ಮುನಿಯ Read More

ಶಬರಿ

ಕವನ – ಶಬರಿ ಕವಿ – ವಿ.ಸೀತಾರಾಮಯ್ಯ ಕಾದಿರುವಳು ಶಬರಿ ರಾಮ ಬರುವನೆಂದು ತನ್ನ ಪೂಜೆಗೊಳುವನೆಂದು| ವನವನವ ಸುತ್ತಿ ಸುಳಿದು ತರುತರುವ ನಲೆದು ತಿರಿದು ಬಿರಿ ಹೂಗಳಾಯ್ದು ತಂದು ತನಿವಣ್ಗಣಾಯ್ದು ತಂದು | ಕೊಳದಲ್ಲಿ ಮುಳುಗಿ ಮಿಂದು ಬಿಳಿನಾರು ಮಡಿಯನುಟ್ಟು ತಲೆವಾಗಿಲಿಂಗೆ ಬಂದು ಹೊಸಿತಿಲಲಿ ಕಾದು ನಿಂದು | ಬಾ ರಾಮ ರಾಮ ಎಂದು ಬರುತಿಹನು Read More

ರಥಯಾತ್ರೆ

ಕವನ – ರಥಯಾತ್ರೆ ಕವಿ – ಜಿ.ಎಸ್.ಶಿವರುದ್ರಪ್ಪ ವಿಶಾಲ ಪಥದಲಿ ಜೀವನ ರಥದಲಿ ನಿನ್ನಯ ಕರುಣೆಯ ಸಾರಥ್ಯದಲಿ ನೀಲ ವಿತಾನದ ಹಂದರದಡಿಯಲಿ ಮರ್ತ್ಯದ ಮಣ್ಣಿನ ಧೂಳಿನಲಿ ಹಗಲು ಇರುಳುಗಳ ಬೆಳಕಿನಲಿ ನಡೆಯುತ್ತಿದೆ ಈ ಜೀವರಥ ವಿಶಾಲವಾಗಿದೆ ನನ್ನ ಪಥ| ನೋವು ನಲಿವುಗಳ ಸವಿದು ನೋಡಿದೆ ಬಾಳಿನ ಸುಮಧುರ ಒಲವನು ಹೀರಿದೆ ಸೃಷ್ಟಿಯ ಚೆಲುವಿಗೆ ಎದೆಯನು ನೀಡಿದೆ Read More