ಇಷ್ಟುಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ…

ಕವಿ – ಎಚ್. ಎಸ್. ವೆಂಕಟೇಶಮೂರ್ತಿ ಗಾಯಕಿ – ಪಲ್ಲವಿ ಅರುಣ್ ಹಾಡು ಕೇಳಿ ಇಷ್ಟುಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ ಅರಿತೆವೇನು ನಾವು ನಮ್ಮ ಅಂತರಾಳವ? ಕಡಲ ಮೇಲೆ ಸಾವಿರಾರು ಮೈಲಿ ಸಾಗಿಯೂ ನೀರಿನಾಳ ತಿಳಿಯಿತೇನು ಹಾಯಿದೋಣಿಗೆ? ಸದಾಕಾಲ ತಬ್ಬುವಂತೆ ಮೇಲೆ ಬಾಗಿಯೂ ಮಣ್ಣ ಮುತ್ತು ದೊರಕಿತೇನು ನೀಲಿ ಬಾನಿಗೆ? ಸಾವಿರಾರು ಮುಖದ ಚೆಲುವ ಹಿಡಿದು Read More

ಬಾ ಸವಿತಾ! – ಮಾಸ್ತಿ ವೆಂಕಟೇಶ ಅಯ್ಯಂಗಾರ್

ರಚನೆ : ಮಾಸ್ತಿ ವೆಂಕಟೇಶ ಅಯ್ಯಂಗಾರ್ (ಶ್ರೀನಿವಾಸ) ಬಾ ಸವಿತಾ ಬಾ ಸವಿತಾ ಒಳಗಿನ ಕಣ್ಣನು ಮುಚ್ಚಿಸಿವೊಮ್ಮೆ ತಿಳಿವಿಗೆ ಬಣ್ಣವ ಹಚ್ಚಿಸಿವೊಮ್ಮೆ ಒಳಿತಲ್ಲದುದೆ ಒಳಿತೆಂಬುದರ ಚಳಕವೆಲ್ಲಕೆ ವಿನಾಶವ ತಾ ಬಾ ಸವಿತಾ ಬಾ ಸವಿತಾ ಬಾ ಸವಿತಾ ನೆಲೆಯಿಂದ ಹೊರಟು ಅಲೆ ಅಲೆ ಅಲೆ ಅಲೆ ಛಲ ತೊಟ್ಟ ಮಲ್ಲ, ವಾಹಿನಿ ಬಾ ನಿಲವಿಲ್ಲಾ ಜಗದಿ Read More

ಗೆಳೆಯನೊಬ್ಬನಿಗೆ ಬರೆದ ಕಾಗದ – ಜಿ. ಎಸ್. ಶಿವರುದ್ರಪ್ಪ

ಬಾಳ ಪಯಣದಲಿ ಹಿರಿಯ ಗುರಿಯ ಕಡೆ ನಡೆಯುತಿರಲು ನಾನು ಯಾವ ಜನ್ಮದಲಿ ಗೈದ ಸುಕೃತವೊ ಮಿಲನವಾದೆ ನೀನು. ತಾಯಿ ಮೊದಲ ಗುರು, ತಂದೆ ರಕ್ಷಕನು ಮಿತ್ರ ಎರಡು ಹೌದು, ಎಂಬ ಹಿರಿನುಡಿಯ ನಿನ್ನ ವಾಣಿಯಲಿ ಕೇಳಿ ನಲಿದೆನಿಂದು ಬಾಳ ಹಾದಿಯಲಿ ಪಯಣಕರ್ಮದಲಿ ನೀನು ಮುಂದೆ ಮುಂದೆ. ನಾನಿನ್ನು ಹಿಂದೆ ; ಬಾಹ್ಯದೃಷ್ಟಿಯಲಿ ನಾವೆಲ್ಲರಿಲ್ಲಿ ಒಂದೆ! ಸಹೃದಯ Read More

ನೀ ಬಂದು ನಿಂದಿಲ್ಲಿ ದೀಪ ಹಚ್ಚಾ

ಕವಿ : ಎಸ್ ವಿ ಪರಮೇಶ್ವರ ಭಟ್ಟ ಸಂಗೀತ : ಮೈಸೂರು ಅನಂತಸ್ವಾಮಿ ಗಾಯಕಿ : ಸುನೀತ ಅನಂತಸ್ವಾಮಿ ಪ್ರೀತಿಯ ಕರೆಕೇಳಿ ಆತ್ಮನ ಮೊರೆಕೇಳಿ ನೀ ಬಂದು ನಿಂದಿಲ್ಲಿ ದೀಪ ಹಚ್ಚಾ ನಲ್ಲ ನೀ ಬಂದಂದು ಕಣ್ಣಾರೆ ಕಂಡಂದು ಮನೆಯೆಲ್ಲ ಹೊಳೆದಂತೆ ದೀಪ ಹಚ್ಚಾ ಬಾಳ ಮುಂಬೆಳಗುರಿದು ಹಗರಣದ ಬೈಗಿಳಿದು ಕಪ್ಪೇರಿ ಬಂದಿತು ದೀಪ ಹಚ್ಚಾ Read More

ಕನ್ನಡವೆಂದರೆ….

ಕವಿ – ಕೆ. ಎಸ್ ನಿಸಾರ್ ಅಹಮದ್ ಕನ್ನಡವೆಂದರೆ ಬರಿ ನುಡಿಯಲ್ಲ, ಹಿರಿದಿದೆ ಅದರರ್ಥ ; ಜಲವೆಂದರೆ ಕೇವಲ ನೀರಲ್ಲ. ಅದು ಪಾವನ ತೀರ್ಥ. ಕನ್ನಡವೆಂದರೆ ಬರಿ ನಾಡಲ್ಲ ; ಭೂಪಟ, ಗೆರೆ, ಚುಕ್ಕೆ ; ಮರವೆಂದರೆ ಬರಿ ಕಟ್ಟಿಗೆಯೆ? ಶ್ರೀಗಂಧದ ಚಕ್ಕೆ. ಕನ್ನಡ ಬರಿ ಕರ್ನಾಟಕವಲ್ಲ ಅಸೀಮ, ಅದು ಅದಿಗಂತ ; ದೇವರು ಕೇವಲ Read More