ಮರೆತೇನೆಂದರ ಮರೆಯಲಿ ಹ್ಯಾಂಗ? ಮಾವೋ-ತ್ಸೆ-ತುಂಗ

ಸಾಹಿತ್ಯ, ಸಂಗೀತ : ಡಾ. ಚಂದ್ರಶೇಖರ ಕಂಬಾರ ಕಂಬಾರರ ದನಿಯಲ್ಲಿ ಹಾಡು ಕೇಳಿ ಮರೆತೇನೆಂದರ ಮರೆಯಲಿ ಹ್ಯಾಂಗ ಮಾವೋ-ತ್ಸೆ-ತುಂಗ ಮರೆತೇನೆಂದಾರ ಮರೆಯಲಿ ಹ್ಯಾಂಗ…. ಹಾ ಪಂಚಭೂತದಾಗ ವಂಚನೆ ಕಂಡಿ ಕಣ್ಣಿನಂಚಿನಾಗ ಹೊಸ ಜಗ ಕಂಡಿ ಸೊನ್ನಿಗೆ ಆಕಾರ ಬರೆದೇನೆಂದಿ ಬಯಲಿಗೆ ಗೋಡೆ ಕಟ್ಟೇನೆಂದಿ ಸಚರಾಚರಗಳ ರಚನೆ ಮಾಡೋದಕ್ಕ ಬೇರೊಬ್ಬ ಸೂರ್ಯನ ತರತೇನೆಂದ್ಯೋ ಕಣ್ಣೀರಿನ ಹೊಳಿಗಡ್ಡ ಕಟ್ಟಿದಿ Read More

ನನ್ನ ಬಯಕೆ – ಕುವೆಂಪು

ಕವಿ – ಕುವೆಂಪು ಹಾಡು ಕೇಳಿ ಸದ್ದಿರದ ಪಸುರುಡೆಯ ಮಲೆನಾಡ ಬನಗಳಲಿ ಮೊರೆವ ತೊರೆಯೆಡೆಯಲ್ಲಿ ಗುಡಿಸಲೊಂದಿರಲಿ. ಅಲ್ಲಿ ಗಿಳಿ ಗೊರವಂಕ ಕೋಗಿಲೆಗಳಿಂಚರವು ಕಲೆಯುತಲೆಯಲೆಯಾಗಿ ತೇಲಿ ಬರುತಿರಲಿ. ಅಲ್ಲಿ ಬಳಿ ಪಸಲೆಯಲಿ ದನಗಳಂಬಾ ಎಂಬ ದನಿಯು ದನ ಕಾಯುವನ ಕೊಳಲೊಡನೆ ಬರಲಿ. ಅಲ್ಲಿ ಸಿರಿಗನ್ನಡ ಕಬ್ಬಗಳ ಹಬ್ಬಗಳು ದಿನ ದಿನವು ಸವಿಯೂಟವಿಕ್ಕುತಿರಲೆನಗೆ. ಬಾಂದಳದಿ ಹಾರಿದರು ಬುವಿಯಲ್ಲಿ ಜಾರುತಿಹ Read More

ಯುಗಾದಿಯ ಹಾಡು

ಕವಿ – ಜಿ. ಎಸ್. ಶಿವರುದ್ರಪ್ಪ ಗಾಯಕ – ಡಾ. ಶಶಿನಾಥ್ ಗೌಡ ಹಾಡು ಕೇಳಿ ಬಂದ ಚೈತ್ರದ ಹಾದಿ ತೆರೆದಿದೆ ಬಣ್ಣ-ಬೆಡಗಿನ ಮೋಡಿಗೆ ಹೊಸತು ವರ್ಷದ ಹೊಸತು ಹರ್ಷದ ಬೇವು-ಬೆಲ್ಲದ ಬೀಡಿಗೆ. ಕೊಂಬೆ ಕೊಂಬೆಯ ತುಂಬ ಪುಟಿದಿದೆ ಅಂತರಂಗದ ನಂಬಿಕೆ ಚಿಗುರು ಹೂವಿನ ಬಣ್ಣದಾರತಿ ಯಾವುದೋ ಆನಂದಕೆ! ಇದ್ದುದೆಲ್ಲವು ಬಿದ್ದುಹೋದರು ಎದ್ದು ಬಂದಿದೆ ಸಂಭ್ರಮ. Read More

ತೇನ ವಿನಾ – ಕುವೆಂಪು

ರಚನೆ : ಕುವೆಂಪು ತೇನ ವಿನಾ ತೇನ ವಿನಾ ತೃಣಮಪಿ ನ ಚಲತಿ ತೇನ ವಿನಾ ಮಮತೆಯ ಬಿಡು, ಹೇ ಮೂಢಮನಾ, ಮೂಢಮನಾ, ಹೇ ಮೂಢಮನಾ ! ರವಿಗಿಲ್ಲದ ಭಯ, ಶಶಿಗಿಲ್ಲದ ಭಯ, ತಾರಾನಿವಹಕೆ ಇರದ ಭಯ, ನಿನಗೇತಕೆ ಬಿಡು, ಅಣು ! ಶ್ರದ್ಧೆಯನಿಡು; ನಿನ್ನನೆ ನೈವೇದ್ಯವ ನೀಡು ! ತೇನ ವಿನಾ . . Read More

ಒಡೆದು ಬಿದ್ದ ಕೊಳಲು – ಗೋಪಾಲ ಕೃಷ್ಣ ಅಡಿಗ

ಒಡೆದು ಬಿದ್ದ ಕೊಳಲು ನಾನು, ನಾದ ಬರದು ನನ್ನಲಿ; ವಿನೋದವಿರದು ನನ್ನಲಿ. ಕಿವಿಯನೇಕೆ ತೆರೆಯುತಿರುವೆ? ಎದೆಯೊಳೇನ ಬಯಸುತಿರುವೆ? ದೊರೆಯದೇನೂ ನನ್ನಲಿ! ನಲ್ಲೆ ಬಂದು ತುಟಿಗೆ ಕೊಳಲ ನೊತ್ತಿ ಉಸುರ ಬಿಟ್ಟಳು; ತನ್ನ ಒಲವಿನಿಂದ್ರಧನುವ ಹರಿದು ಇಳಿದು ಬಿಟ್ಟಳು; ಬಣ್ಣ ಬಣ್ಣದೆನಿತೋ ಹಾಡ ನಿಲ್ಲಿ ಚೆಲ್ಲಿ ಕೊಟ್ಟಳು. ಹಾಡಿ ಹಾಡಿ ಬೇಸರಾಗಿ ನೆಲಕೆಸೆದಳು ಕೊಳಲನು; ಇಂದು ಮೌನದುಸುಬಿನಲ್ಲಿ Read More