ನಿನ್ನ ಕರುಣೆಗೆ – ಚೆನ್ನವೀರ ಕಣವಿ

ನಿನ್ನ ಕರುಣೆಗೆ ನಾನು ಕೇಂದ್ರವಾಗಿ ನಿಂದಿರುವೆ ಮೌನದಲಿ ತಲೆಯ ಬಾಗಿ ಮುಗಿಲಿಂದ, ಹಗಲಿಂದ, ಇರುಳಿಂದ ಬಂದು ಮುಗಿಯದಾವುದೊ ಮಹಾದ್ಭುತವ ತಂದು, ಬದುಕು ಪೊರೆ ಪೊರೆ ಬಿಚ್ಚಿ ಹದಗೊಳಿಸಲೆಂದು ಒಳಗು ಹೊರಗೂ ತುಂಬಿ ತುಳುಕಿರುವೆ ಇಂದು. ಅಂಜುವೆನು, ಅಳುಕುವೆನು ಅಷ್ಟಿಷ್ಟಕೆಲ್ಲ ಮಂಜು ಮುಗಿಬೀಳುವುದು ಭೂಮಿ ಬಾನೆಲ್ಲ: ಹಿಂಜುವುದು ನೇಸರನ ನೂರಾರು ಕಿರಣ ಜೇಡಬಲೆ ತುಂಬೆಲ್ಲ ಮುತ್ತಿನಾಭರಣ. ಒಂದೊಂದು Read More

ಗಗನದಿ ಸಾಗಿವೆ – ಚೆನ್ನವೀರ ಕಣವಿ

ಕವನ : ಗಗನದಿ ಸಾಗಿವೆ ಕವಿ : ಚೆನ್ನವೀರ ಕಣವಿ ಗಗನದಿ ಸಾಗಿವೆ ಬಾಗಿವೆ ಮೋಡ ಹೋಗಿದೆ ನೀರನು ಸುರಿದು; ಬರುವುವು, ಬಂದೇ ಬರುವುದು ನೋಡ ತುಂಬಿಸಿ, ತುಳುಕಿಸಿ ಹರಿದು. ಇಳೆಗೂ ಬಾನಿಗು ಮಳೆ ಜೋಕಾಲಿ ತೂಗಿದೆ, ತಂಗಿದೆ ಚೆಲುವು; ಹಸುರೇ ಹಬ್ಬಿದೆ, ಹಸುರೇ ತಬ್ಬಿದೆ ಹೆಸರಿಗು ಕಾಣದು ನೆಲವು. ನಸುಕೋ, ಸಂಜೆಯೊ, ಮಿಸುಕದು ಬೆಳಕು, Read More

ಸ್ತ್ರೀ – ಜಿ.ಎಸ್.ಶಿವರುದ್ರಪ್ಪ

ಕವಿ – ಜಿ.ಎಸ್.ಶಿವರುದ್ರಪ್ಪ ಗಾಯಕ – ಸಿ. ಅಶ್ವಥ್ ಹಾಡು ಕೇಳಿ ಆಕಾಶದ ನೀಲಿಯಲ್ಲಿ ಚಂದ್ರ ತಾರೆ ತೊಟ್ಟಿಲಲ್ಲಿ ಬೆಳಕನಿಟ್ಟು ತೂಗಿದಾಕೆ ನಿನಗೆ ಬೇರೆ ಹೆಸರು ಬೇಕೆ? ಸ್ತ್ರೀ ಎಂದರೆ ಅಷ್ಟೇ ಸಾಕೆ? ಹಸುರನುಟ್ಟ ಬೆಟ್ಟಗಳಲಿ ಮೊಲೆಹಾಲಿನ ಹೊಳೆಯನಿಳಿಸಿ ಬಯಲ ಹಸುರ ನಗಿಸಿದಾಕೆ ನಿನಗೆ ಬೇರೆ ಹೆಸರು ಬೇಕೆ? ಸ್ತ್ರೀ ಎಂದರೆ ಅಷ್ಟೇ ಸಾಕೆ? ಮರ Read More

ಒಂದು ಮಣ್ಣಿನ ಜೀವ

ಕವಿ : ಎಚ್. ಎಸ್. ವೆಂಕಟೇಶಮೂರ್ತಿ ಗಾಯಕ : ಸಿ. ಅಶ್ವಥ್ ಆಲ್ಬಮ್ : ತೂಗುಮಂಚ ಹಾಡು ಕೇಳಿ ಒಂದು ಮಣ್ಣಿನ ಜೀವ ಎಂದೂ ಮಣ್ಣಿನಲ್ಲಿಯೇ ಉಳಿಯದು ಸಣ್ಣ ಸಸಿಯೇ ಬೆಳೆದು ಬೇರಿಗೆ ಪಾರಿಜಾತವ ಸುರಿವುದು ನೀರು ತುಂಬಿದ ಮಣ್ಣ ಪಾತಿಯೇ ಕಂದರಿಗೆ ಕದಲಾರತಿ ನೂರು ಗುಡಿಗಳ ದೀಪ ವೃಕ್ಷವೇ ಅಮ್ಮನೆತ್ತುವ ಆರತಿ ಹಕ್ಕಿಪಕ್ಕಿಯ ಬಣ್ಣದಕ್ಷತೆ Read More

ಶಾಲ್ಮಲಾ – ಚಂಪಾ

ಕವಿ – ಚಂದ್ರಶೇಖರ ಪಾಟೀಲ ಸಂಗೀತ – ಸಿ. ಅಶ್ವಥ್ ಗಾಯಕ – ಸಿ. ಅಶ್ವಥ್ ಹಾಡು ಕೇಳಿ ಎಲ್ಲೋ ಹುಟ್ಟಿ ಎಲ್ಲೋ ಬೆಳೆದು ಒಳಗೊಳಗೇ ಹರಿಯುವವಳು ಜೀವ ಹಿಂಡಿ ಹಿಪ್ಪೆ ಮಾಡಿ ಒಳಗೊಳಗೇ ಕೊರೆಯುವವಳು ಸದಾ…. ಗುಪ್ತಗಾಮಿನಿ ನನ್ನ ಶಾಲ್ಮಲಾ| ಹಸಿರು ಮುರಿವ ಎಲೆಗಳಲ್ಲಿ ಬಸಿರ ಬಯಕೆ ಒಸರುವವಳು ತುಟಿ ಬಿರಿಯುವ ಹೂಗಳಲ್ಲಿ ಬೆಂಕಿ Read More