ಡೈರಿ ಹೇಳೆ, ಮುಂದೇನೆ?

ಅಂಗಡಿಯಿಂದ ಕೊಂಡುತಂದಿದ್ದ ದಿನಸಿಯನ್ನು ಕಾರಿನಿಂದ ಒಳತಂದಿಟ್ಟು, ಕುಡಿಯಲೆಂದು ಲೋಟಕ್ಕೆ ನೀರು ತುಂಬಿಸುತ್ತಿದ್ದಾಗಲೇ ಬಾಗಿಲ ಕರೆಘಂಟೆಯ ಸದ್ದು. ಫೋನ್ ಮಾಡಿ ಮುಂಚಿತವಾಗಿ ತಿಳಿಸದೆ, ನಾವಾಗಿ ಕರೆಯದೆ, ಯಾರ ಮನೆಗೆ ಯಾರೂ ಬಾರದ ಈ ದೇಶದಲ್ಲಿ, ಇದ್ದಕ್ಕಿದ್ದಂತೆ ಬಡಿದುಕೊಳ್ಳುವ ಕರೆಘಂಟೆಯ ಸದ್ದು ನನ್ನನ್ನು ಬೆಚ್ಚಿಸುತ್ತದೆ. ಫೆಡೆಕ್ಸ್‌ನವನು ಯಾವುದೋ ಪ್ಯಾಕೇಜು ತಂದಿದ್ದು, ಸಹಿಗಾಗಿ ಕಾದಿರಬಹುದೆಂದೆಣಿಸಿ ಬಾಗಿಲಿನ ಮಾಯಾಕಿಂಡಿಯಲ್ಲಿ ಇಣುಕಿದೆ. ಸಮವಸ್ತ್ರ Read More

ನೆನಪಿನಲ್ಲೊಂದು ಚಿತ್ರ

‘ಪುಟ್ಟಣ್ಣಾ, ಇಲ್ಲೇ ಇರ್ತೀಯಾ? ಅಕ್ಕನ ಜೊತೆ ಹೋಗಿ, ಅಲ್ಲಿ…. ಕಾಣ್ತಾ ಇದೆ ನೋಡು. ಆ ಅಂಗಡಿಗೆ ಹೋಗಿ ಈಗ ಬಂದುಬಿಡ್ತೀವಿ. ಬರ್ತಾ ನಿಂಗೆ ಚಾಕಲೇಟ್ ತರ್ತೀವಿ. ಆಯ್ತಾ?’ ತಾಯಿ ನುಡಿದಾಗ ಗುಂಗುರುಗೂದಲ ಪುಟ್ಟನ ಕಣ್ಣುಗಳಲ್ಲಿ ಚಕ್ಕನೆ ಹರವಿಕೊಂಡ ಆಸೆಯ ಕಾಮನಬಿಲ್ಲು. ತನಗೆ ಸಿಗಲಿದ್ದ ಸಿಹಿತುಣುಕಿನ ಆಸೆಗೆ, ತಾಯಿ ಮತ್ತು ತನಗಿಂತ ಸ್ವಲ್ಪ ದೊಡ್ಡವಳಾದ ಅಕ್ಕನ ಜೊತೆ Read More

ಅವಳು ಬಂದಿದ್ದಳು…

ಕೈತೋಟದಲ್ಲಿ ಗಿಡಗಳ ಪಾತಿಯಲ್ಲಿ ಉದುರಿಬಿದ್ದ ಎಲೆಗಳನ್ನು ಹೆಕ್ಕುತ್ತಿದ್ದೆ. ಹಿಂದೇನೋ ಸದ್ದಾದಂತಾಗಿ ತಿರುಗಿದೆ. ಅವಳು ನಿಂತಿದ್ದಳು. ಕಣ್ಣುಗಳಲ್ಲಿ ವರ್ಷಗಳ ನಿದ್ರೆ ಬಾಕಿ ಇದ್ದಷ್ಟು ಆಯಾಸ. ಮುಖಭಾವ ಎಂದಿನಂತಿರಲಿಲ್ಲ. ಯಾವುದೋ ನಾನರಿಯದ ಸಂಕಟ ಅಲ್ಲಿದ್ದಂತಿತ್ತು. ‘ಅಂತೂ ಬಂದೆಯಾ? ಆ ದಿನ ಅದೇನೋ ಅವಸರವಿದ್ದಂತೆ ಇದ್ದಕ್ಕಿದ್ದಂತೆ ಎದ್ದು ಹೋದವಳು. ಈಗ ತಲೆ ಹಾಕುತ್ತಿದ್ದೀಯಲ್ಲ?’ ಎಂದೆ, ದೂರಿನ ದನಿಯಲ್ಲಿ. ಅವಳು ಅಸಹಾಯಕಳಂತೆ Read More

ಆದರ್ಶ ದಂಪತಿ

ಆ ಆಂಟಿ-ಅಂಕಲ್‍ಗೆ ಆದರ್ಶ ದಂಪತಿಗಳು ಅಂತಾನೇ ಅನ್ನೋದು ಎಲ್ಲಾರೂ. ಅಷ್ಟು ಹೊಂದಾಣಿಕೆ ಇಬ್ಬರಲ್ಲಿ. ಅವರ ಮುಖದಲ್ಲಿ ಸದಾ ನಗುವೇ. ಒಬ್ಬರ ಮೇಲೊಬ್ಬರು ಕೋಪಿಸಿಕೊಂಡಿದ್ದಾಗಲೀ, ಒಬ್ಬರನ್ನೊಬ್ಬರು ರೇಗಿಕೊಂಡಿದ್ದನ್ನಾಗಲೀ, ನೀನು-ತಾನು ಎಂದು ಜಗಳಾಡಿದ್ದನ್ನಾಗಲೀ ಕಂಡವರು ಇಲ್ಲವೇ ಇಲ್ಲ. ಆದರೂ ಇವಳಿಗೇಕೋ ಆ ಆದರ್ಶ ದಂಪತಿಗಳ ನಿಜ ತಿಳಿಯುವ ದುರ್ಬುದ್ಧಿ. ಇದು ದುಷ್ಟತನವೆಂದು ಗೊತ್ತಿದ್ದರೂ, ಆಂಟಿ ಮನೆ ಹೊಕ್ಕೇಬಿಟ್ಟಳು. ಆಂಟಿ Read More

ಕಾಗೆಯೊಂದು ಹಾರಿಬಂದು….

ಹೆಸರೇ ಸುನೇತ್ರ! ಆದರೆ ಅವಳ ಸುಂದರ ಕಣ್ಣುಗಳು ತುಂಬಿಕೊಂಡಿರುತ್ತಿದ್ದುದೇ ಹೆಚ್ಚು. ಈ ಬಾರಿ ಆ ಕಣ್ಣೀರಿಗೆ ಹೆಚ್ಚಿನ ಬೆಲೆಯಿತ್ತು. ಅಲ್ಲಿ, ದೂರದಲ್ಲಿ ಅವಳ ಅಪ್ಪ ತೀರಿಕೊಂಡಿದ್ದರು. ಇಲ್ಲಿ ಅವಳನ್ನು ಶವ ನೋಡಲೂ ಹೋಗದಂತೆ ನಿರ್ಬಂಧದಲ್ಲಿರಿಸಲಾಗಿತ್ತು. ಕೊನೆಗೂ ಕೊಟ್ಟ ಮನೆಯ ಕಟ್ಟುಗಳನ್ನು ಬಿಚ್ಚಿಕೊಂಡು ಹುಟ್ಟಿದ ಮನೆಗೆ ಅವಳು ಕಾಲಿಡುವಹೊತ್ತಿಗೆ ಸುನೇತ್ರಳ ಅಪ್ಪ ಮಗಳಿಗೆ ಕಾಯದೆ ಕೊನೆಯ ಮನೆ Read More