ಹಸುರಲ್ಲಿ ಹೋಲಿ
ಚಿತ್ರಕವನದಿಂದ ಮಕಮಲ್ಲು ಹಾಸಿನ ಮೇಲೆ ಹೂವ ರಂಗೋಲಿ ಮಾಲಿನ್ಯಕೆಡೆಯಿಲ್ಲ; ಹಸಿರ ದರಬಾರು! ಹಾದಿಹೋಕರಿಗೆಲ್ಲಾ ಪರಿಮಳದ ಹೋಲಿ ನಿಸರ್ಗವೇ ವಹಿಸಿಹುದು ಜಗದ ಕಾರುಬಾರು ದೇವನಡಿಗೂ ಅಲ್ಲ; ಹೆಣ್ಣ ಮುಡಿಗೂ ಇಲ್ಲ ಹೀಗೇಕೆ ಬಿದ್ದಿವೆ ಇಲ್ಲಿ, ಅಯ್ಯೋ ಪಾಪ! ದೇವಲೋಕದಿಂದ ಜಾರಿ ಬಿದ್ದಿಹುದಲ್ಲ ಯಾರು ಕೊಟ್ಟಿರಬಹುದು ಮುನಿದು ಶಾಪ? ಬರಡು ಬಾಳನು ಹರಸಿ ಸ್ವರ್ಗಮಾಡಿದೆ ಚೆಲುವು ಒಂದೂ ಕುಂದಿರದ Read More