ಮರೆತೇನೆಂದರ ಮರೆಯಲಿ ಹ್ಯಾಂಗ?

೯/೧೧ – ದುರಂತಕ್ಕೆ ಇಂದಿಗೆ ಐದು ವರ್ಷವಾದರೂ, ಅಂದಿನ ಆಘಾತ ಮಾತ್ರ ಈಗಲೂ ನಿನ್ನೆ ನಡೆದ ಘಟನೆಯಂತೆಯೇ ನೆನಪಿದೆ.  ಆಗ ನಾವಿದ್ದಿದ್ದು ನ್ಯೂಜೆರ್ಸಿಯಲ್ಲಿ. ಶ್ರೀನಿಯ ಕೆಲಸವಿದ್ದಿದ್ದು ನ್ಯೂಯಾರ್ಕಿನಲ್ಲಿ. ವಿಶ್ವವಾಣಿಜ್ಯಕೇಂದ್ರದ ಸಮೀಪದ ಕಟ್ಟಡವೊಂದರಲ್ಲಿ.  ಆದಿನ ಎಂದಿನಂತೆ ಕೆಲಸಕ್ಕೆ ಹೊರಟು ನಿಂತಿದ್ದಾಗಲೇ ಟೀವಿಯಲ್ಲಿ ಈ ದುರಂತ ವಾರ್ತೆ ಪ್ರಸಾರವಾಗತೊಡಗಿತ್ತು. ಬೆಳಗಿನ ರೈಲಿನಲ್ಲಿ ಹೊರಟವರೆಲ್ಲ ನ್ಯೂಯಾರ್ಕ್ ನಗರವನ್ನು ಸೇರಿ, ಒಬ್ಬೊಬ್ಬರೂ ಬೂದಿ Read More

ಅವನಿಗೊ೦ದು ಪ್ರಶ್ನೆ?

ಮೇಲೆ ಮೇಲೆ ನಾನು ನುಡಿದ ಮಾತುಗಳನೇ ನ೦ಬಿಬಿಟ್ಟೆ ಹೃದಯದೊಳಗೆ ಇರುವ ಭಾವ ಹೊಕ್ಕು ನೋಡಲಿಲ್ಲವೇತಕೆ? ನಿನ್ನ ಮಾತುಗಳನೆ ನಾನು ನನ್ನವೆ೦ದು ನುಡಿಯುತ್ತಿದ್ದೆ ನನ್ನ ಎದೆಯ ರಾಗಗಳಿಗೆ ನೀನು ಕಿವುಡನಾದೆ ಏತಕೆ? ನಿನ್ನದೊ೦ದು ಸವಿ ಮಾತಿನಿ೦ದ ನನ್ನ ದು:ಖ ಕಳೆಯುತಿತ್ತು ಒ೦ದು ಮಾತೂ ಆಡದ೦ತೆ ಹಾಗೆ ಮೂಕನಾದೆಯೇತಕೇ? ನಿನ್ನ ಚಲನವಲನದಿ೦ದ ನಾನು ಸಕಲವನ್ನು ಅರಿಯುತಿದ್ದೆ ನಾನು ಹೇಳಿಕೊಳ್ಳದ೦ತ Read More

ಒಸಾಮಾ ಎಲ್ಲಿದ್ದಾನು?

ಅದೆಷ್ಟೋ ಸುಖಸ೦ಸಾರಗಳು ತಮ್ಮೆಲ್ಲ ಹರುಷ ಕಳಕೊ೦ಡ ಆ ವಿಷನಿಮಿಷ ಮೊನ್ನೆ ಹನ್ನೊ೦ದಕ್ಕೆ ನಿನ್ನ ಮಾರಣಹೋಮಕ್ಕೆ ಮತ್ತೂ ಒ೦ದು ವರುಷ! ಹುಡುಕಿದ್ದೂ ಅಯ್ತು ನಿನ್ನ ಸೂಜಿ ಕಳಕೊ೦ಡವರೆಲ್ಲ ಹುಲ್ಲ ಬಣವೆಗಳಲ್ಲಿ; ಗಡ್ಡಗಡರಿದ ಬೆ೦ಕಿ ಅರಿಸುವ ಆತುರದಿ ಬಾವಿ ತೋಡುವ ವೇಗದಲ್ಲಿ ಅಫಘಾನದ ಹಿಮದ ಪದರ ಪದರಗಳಲ್ಲಿ ಬೆಟ್ಟ ಗುಡ್ಡಗಳಲ್ಲಿ, ಕಾಡು ಮೇಡುಗಳಲ್ಲಿ ನೆಲಹೊಕ್ಕು ಬಿಲದಲ್ಲಿ ಸ೦ದುಗೊ೦ದುಗಳಲ್ಲಿ ಮಸೀದಿಯನೂ Read More

ಅಳಿಸಿ ಬರೆದ ಕವನ

ಹೀಗನ್ನಿಸುತ್ತದೆ – ನೂರು ಪದಗಳ ಹುಡುಕಿ ಎದೆಯ ಭಾವವ ತಡಕಿ ಒಮ್ಮೆ ಬರೆದು ಮುಗಿಸಿದ ಕವನ ಯಾಕೋ ಸರಿ ಎನಿಸಿದಾಗ ಮತ್ತೆ ಅಳಿಸಿ ಬರೆಯುವಂತೆ: ಎಲ್ಲಿಂದಲೋ ಹೊರಟು ಎಲ್ಲೋ ತಲುಪಲು ಬಯಸಿ ಇನ್ನೆಲ್ಲೋ ಬಂದು ನಿಂತ ಈ ಬದುಕನ್ನು ಮತ್ತೆ ಹೊಸದಾಗಿ ಆರಂಭಿಸುವಂತಿದ್ದರೆ? ಉಹುಂ, ಹಾಗಾಗಲಾರದು – ಅಳಿಸಿ ಬರೆದ ಕವನ ನಿಜವಾಗಿರಲ್ಲ ಅಳಿಸಿ ಹೋಗಿದೆ Read More

ಹನಿಗವನಗಳು

“ಮಯೂ(yU)ರ”ದಲ್ಲಿ ಪ್ರಕಟಿತ ಹನಿಗವನಗಳು ತಿದ್ದುಪಡಿ ಮಗು, ಸರಿಯಾಗಿ ಓದಿ ನೋಡು- ಈ ಪ್ರಪಂಚದಲ್ಲಿರುವ ವಿಸ್ಮಯಗಳು ಏಳೇ ಏಳಲ್ಲ ನಿನ್ನನ್ನೂ ಸೇರಿಸಿಕೊಂಡು ಅಂತಹ ಆನಂದದ ಅದ್ಭುತಗಳು ಎಂಟಿರಬೇಕು! *** ಕೋರಿಕೆ ನಲ್ಲಾ, ನನ್ನ ಅಂತರಂಗದ ಮೃದಂಗವಾದನಕ್ಕೆ ನೀನು ತಲೆದೂಗಿ ದನಿಗೂಡದಿದ್ದರೂ ಬೇಡ, ಕಿವುಡಾಗದಿದ್ದರೆ ಸಾಕು *** ಹೋಲಿಕೆ ಅವನಿಗೆ ನಮ್ಮಿಬ್ಬರ ಪ್ರೀತಿಗೊಂದು ಸುಂದರ ಹೋಲಿಕೆ ಕೊಡು ನೋಡೋಣ Read More