ಬಲು ರಮ್ಯವಾಗಿದೆ ಶ್ರೀಹರಿಯ ಮಂಚ

ರಚನೆ : ಜಗನ್ನಾಥದಾಸರು ರೂಪಾ ಮತ್ತು ದೀಪಾ ದನಿಯಲ್ಲಿ ಬಲು ರಮ್ಯವಾಗಿದೆ ಶ್ರೀಹರಿಯ ಮಂಚ ||ಪ|| ಎಲರುಣಿ ಕುಲರಾಜ ರಾಜೇಶ್ವರನ ಮಂಚ ||ಅನುಪಲ್ಲವಿ|| ಪವನತನಯ ಮಂಚ ಪಾವನತರ ಮಂಚ ಭುವನತ್ರಯವ ಪೊತ್ತ ಭಾರಿ ಮಂಚ ಕಿವಿಗಳಿಲ್ಲದ ಮಂಚ ಶ್ರೀನಿಕೇತನ ಮಂಚ ಶಿವರೂಪದಲಿ ಹಿಂದೆ ಹರಿಯನೊಲಿಸಿದ ಮಂಚ ||೧|| ನೀಲಾಂಬರವನುಟ್ಟು ನಳನಳಿಸುವ ಮಂಚ ನಾಲಿಗೆ ಎರಡುಳ್ಳ ನೈಜಮಂಚ Read More

ಚಂದ್ರಚೂಡ ಶಿವಶಂಕರ ಪಾರ್ವತಿ ರಮಣನೆ

ರಚನೆ : ಪುರಂದರದಾಸರು ವಿದ್ಯಾಭೂಷಣರ ದನಿಯಲ್ಲಿ ಚಂದ್ರಚೂಡ ಶಿವಶಂಕರ ಪಾರ್ವತಿ ರಮಣನೆ ನಿನಗೆ ನಮೋ ನಮೋ ||ಪಲ್ಲವಿ|| ಸುಂದರ ಮೃಗಧರ ಪಿನಾಕಧನುಕರ ಗಂಗಾಶಿರ ಗಜಚರ್ಮಾಂಬರಧರ ||ಅನು|| ನಂದಿವಾಹನಾನಂದದಿ೦ದ ಮೂರ್ಜಗದಿ ಮೆರೆವನು ನೀನೆ ಅಂದು ಅಮೃತಘಟದಿಂದುದಿಸಿದ ವಿಷತ೦ದು ಭುಜಿಸಿದವ ನೀನೆ ಕಂದರ್ಪನ ಕ್ರೋಧದಿ೦ದ ಕಣ್ತೆರೆದು ಕೊಂದ ಉಗ್ರನು ನೀನೆ ಇಂದಿರೇಶ ಶ್ರೀರಾಮನ ನಾಮವ ಚಂದದಿ ಪೊಗಳುವ ನೀನೆ Read More

ಆನಂದವಾದ ಮಿಠಾಯಿ – ಹೀಗೂ ಒಂದು ಹೊಳಹು

‘ನಂದತನಯ ಗೋವಿಂದನ ಭಜಿಪುದಾನಂದವಾದ ಮಿಠಾಯಿ’ ಗಾಯಕಿ ಎಂ. ಎಸ್. ಶೀಲಾರ ದನಿಯಲ್ಲಿ ಹಿಂದೆಂದೋ ಕೇಳಿದ್ದ ಈ ಹಾಡನ್ನು ಈಚೆಗೆ ಮತ್ತೊಮ್ಮೆ ಕೇಳಿದೆ. ಹಾಡನ್ನು ಕೇಳುತ್ತಿದ್ದಾಗ, ಈ ಕೀರ್ತನೆಯ ರಚನಕಾರರಾದ ಪುರಂದರದಾಸರು, ನುರಿತ ವ್ಯಾಪಾರಿಯೊಬ್ಬನು ತನ್ನ ಉತ್ಪನ್ನವನ್ನು ಪ್ರಚುರಪಡಿಸಲು, ಮಾರುಕಟ್ಟೆಯಲ್ಲಿ ಚಾಲ್ತಿಯಲ್ಲಿರುವ ಉಳಿದೆಲ್ಲಾ ಸರಕುಗಳಿಗಿಂತ ತನ್ನದನ್ನು ಹೆಚ್ಚು ಮಾರಾಟ ಮಾಡಲು ಅನುಸರಿಸುವ ತಂತ್ರವನ್ನೇ ಇಲ್ಲಿಯೂ ಅನುಸರಿಸಿದ್ದಾರಲ್ಲವೇ ಎನ್ನಿಸಿತು. Read More

ಲೊಳಲೊಟ್ಟೆ ಎಲ್ಲಾ ಲೊಳಲೊಟ್ಟೆ

ರಚನೆ : ಪುರಂದರದಾಸರು ಗಾಯಕ – ವಿದ್ಯಾಭೂಷಣ ಹಾಡು ಕೇಳಿ ಲೊಳಲೊಟ್ಟೆ ಎಲ್ಲಾ ಲೊಳಲೊಟ್ಟೆ ||ಪ|| ಆನೆ ಕುದುರೆ ಒಂಟೆ ಲೊಳಲೊಟ್ಟೆ ಸೇನೆ ಭಂಡಾರವು ಲೊಳಲೊಟ್ಟೆ ಮಾನಿನಿಯರ ಸಂಗ ಲೊಳಲೊಟ್ಟೆ ದೊಡ್ಡ ಕ್ಷೋಣೀಶನೆಂಬುದು ಲೊಳಲೊಟ್ಟೆ ||೧|| ಮುತ್ತು ಮಾಣಿಕ್ಯ ಲೊಳಲೊಟ್ಟೆ ಚಿನ್ನ ಛತ್ರ ಚಾಮರ ಧ್ವಜ ಲೊಳಲೊಟ್ಟೆ ಸುತ್ತಗಲ ಕೋಟೆ ಲೊಳಲೊಟ್ಟೆ ಮತ್ತೆ ಉತ್ತಮಪ್ರಭುತ್ವ ಲೊಳಲೊಟ್ಟೆ Read More

ಕೊಡು ಬೇಗ ದಿವ್ಯಮತಿ

ಹಾಡು ಕೇಳಿ ಕೊಡು ಬೇಗ ದಿವ್ಯಮತಿ ಸರಸ್ವತಿ ||ಪಲ್ಲವಿ|| ಮೃಡ ಹರಿ ಹಯಮುಖರೊಡೆಯಳೆ ನಿನ್ನ ಅಡಿಗಳಿಗೆರಗುವೆ ಅಮ್ಮಾ ಬ್ರಹ್ಮನ ರಾಣಿ||ಅನು ಪಲ್ಲವಿ|| ಇಂದಿರಾ ರಮಣನ ಹಿರಿಯ ಸೊಸೆಯು ನೀನು ಬಂದೆನ್ನ ವದನದಿ ನಿಂದು ನಾಮವ ನುಡಿಸೆ||೧|| ಅಖಿಲ ವಿದ್ಯಾಭಿಮಾನಿ ಅಜನ ಪಟ್ಟದ ರಾಣಿ ಸುಖವಿತ್ತು ಪಾಲಿಸೆ ಸುಜನ ಶಿರೋಮಣಿ||೨|| ಪತಿತ ಪಾವನೆ ನೀನೇ ಗತಿಯೆಂದು ನಂಬಿದೆ Read More