ಅಕ್ಕಾ, ಅಕ್ರೂರ ಬಂದನಂತೆ!

ರಚನೆ : ಪುರಂದರದಾಸರು ವಿದ್ಯಾಭೂಷಣ ಅಕ್ಕಾ, ನಂದಗೋಪನ ಅರಮನೆಯ ಒಳಗೊಬ್ಬ ಅಕ್ರೂರ ಬಂದನಂತೆ ಹೊಕ್ಕು ಬಳಸುವಳಲ್ಲ, ಹುಸಿಯನಾಡುವಳಲ್ಲ ಇಕ್ಕೋ, ಬಾಗಿಲ ಮುಂದೆ ಈಗ ರಥವ ಕಂಡೆ | ಮಥುರಾ ಪಟ್ಟಣವಂತೆ, ಮಾವ ಕಂಸನಂತೆ ನದಿಯ ದಾಟಲುಬೇಕಂತೆ, ಬದಲು ಮಾತಿಲ್ಲವಂತೆ, ಏನೆಂಬೆ ಏಣಾಕ್ಷಿ ಉದಯದಿ ಪಯಣವಂತೆ, ಹೇ ಕಾಂತೆ | ಅಲ್ಲೇ ಹುಟ್ಟಿದನಂತೆ, ಅರಸಿನಳಿಯನಂತೆ, ಇಲ್ಲಿಗೆ ಬಂದನಂತೆ, Read More

ಬಂದಿದೆ ದೂರು ಬರಿದೆ ಪಾಂಡವರಿಗೆ

ರಚನೆ : ಕನಕದಾಸರು ಬಂದಿದೆ ದೂರು ಬರಿದೆ ಪಾಂಡವರಿಗೆ ಕೊಂದವರಿವರು ಕೌರವರನೆಂಬಪಕೀರ್ತಿ ||ಪಲ್ಲವಿ|| ಮುನ್ನಿನ ವೈರದಿ ಕಡುಸ್ನೇಹವ ಮಾಡಿ ಉನ್ನಂತಲೆತ್ತ ಪಗಡೆಯಾಡಿಸಿ ತನ್ನ ಕುಹಕದಿಂದ ಕುರುಬಲವನು ಕೊಂದ ಘನ್ನಘಾತುಕ ಶಕುನಿಯೋ? ಪಾಂಡವರೋ? ||೧|| ಮರಣ ತನ್ನಿಚ್ಚೆಯೊಳುಳ್ಳ ಗಾಂಗೇಯನು ಧುರದಲಿ ಷಂಡನ ನೆಪದಿಂದಲಿ ಸರಳ ಮಂಚದ ಮೇಲೆ ಮಲಗಿ ಮೊಮ್ಮಗನನ್ನು ಕೊರಳ ಕೊಯ್ದವ ಭೀಷ್ಮನೋ? ಪಾಂಡವರೋ? ||೨|| Read More

ಹ್ಯಾಂಗೆ ಮಾಡಲಯ್ಯಾ ಕೃಷ್ಣ, ಪೋಗುತಿದೆ ಆಯುಷ್ಯ

ರಚನೆ : ಗೋಪಾಲದಾಸರು ವಿದ್ಯಾಭೂಷಣ ಪುತ್ತೂರು ನರಸಿಂಹ ನಾಯಕ್ ಹ್ಯಾಂಗೆ ಮಾಡಲಯ್ಯಾ ಕೃಷ್ಣ ಪೋಗುತಿದೆ ಆಯುಷ್ಯ ಮಂಗಳಾಂಗ ಭವಭಂಗ ಬಿಡಿಸಿ ನಿನ್ನ ಡಿಂಗರಿಗನ ಮಾಡೊ ಅನಂಗಜನಕ ||ಪ|| ಏಸು ಜನುಮದ ಸುಕೃತದ ಫಲವೊ ತಾನು ಜನಿಸಲಾಗಿ ಭೂಸುರ ದೇಹದ ಜನುಮವು ಎನಗೆ ಸಂಭವಿಸಿದೆಯಾಗಿ ಮೋದತೀರ್ಥ ಮತ ಚಿಹ್ನಿತನಾಗದೆ ದೋಷಕೆ ಒಳಗಾಗಿ ಲೇಶ ಸಾಧನವ ಕಾಣದೆ ದುಸ್ಸಹವಾಸದಿಂದಲೇ Read More

ರಾಮಲಿಂಗ ಎನ್ನಂತರಂಗ

ರಚನೆ – ವಿಜಯದಾಸರು ವಿದ್ಯಾಭೂಷಣ ಲಿಂಗ ರಾಮಲಿಂಗ ಎನ್ನಂತರಂಗ ಮಂಗಳಾಂಗನೆ ಸರ್ವೋತ್ತುಂಗನೇ ||ಪಲ್ಲವಿ|| ಮಂದಾಕಿನಿಧರಗೆ ಗಂಗಾಂಬು ಮಜ್ಜನವೇ ಚಂದ್ರಮೌಳಿಗೆ ಗಂಧ ಕುಸುಮಾರ್ಪಣೆಯೇ ಇಂದು ರವಿ ನೇತ್ರನಿಗೆ ಕರ್ಪೂರದಾರತಿಯೇ ಕಂದರ್ಪ ಜಿತಗೆ ಮಿಗಿಲಾಪೇಕ್ಷೆಯೇ ||೧|| ಘನ ವಿದ್ಯಾತುರಗೆ ಮಂತ್ರ ಕಲಾಪವೇ ಧನಪತಿಯ ಸಖಗೆ ಕೈಕಾಣಿಕೆಯೇ ? ಮನೆ ರಜತ ಪರ್ವತಗೆ ಫಣಿಯ ಆಭರಣವೇ ಮನೋ ನಿಯಾಮಕಗೆ ಎನ್ನ Read More

ಕೈಲಾಸವಾಸ ಗೌರೀಶ ಈಶ

ರಚನೆ -ವಿಜಯದಾಸರು ಹಾಡು ಕೇಳಿ ಭೀಮಸೇನ ಜೋಶಿ ವಿದ್ಯಾಭೂಷಣ ಕೈಲಾಸವಾಸ ಗೌರೀಶ ಈಶ ತೈಲಧಾರೆಯಂತೆ ಮನಸು ಕೊಡೊ ಹರಿಯಲ್ಲಿ, ಶಂಭೋ || ಪಲ್ಲವಿ|| ಅಹೋರಾತ್ರಿಯಲಿ ನಾನು ಅನುಚರಾಗ್ರಣಿಯಾಗಿ ಮಹಿಯೊಳಗೆ ಚರಿಸಿದೆನೊ ಮಹದೇವನೆ ಅಹಿ ಭೂಷಣನೆ ಎನ್ನ ಅವಗುಣಗಳೆಣಿಸದಲೆ ವಿಹಿತ ಧರ್ಮದಿ ವಿಷ್ಣು ಭಕುತಿಯನು ಕೊಡೊ, ಶಂಭೋ ||೧|| ಮನಸು ಕಾರಣವಲ್ಲ ಪಾಪಪುಣ್ಯಕ್ಕೆಲ್ಲ ಅನಲಾಕ್ಷ ನಿನ್ನ ಪ್ರೇರಣೆಯಿಲ್ಲದೆ Read More