ದೂರ…. ಬಹುದೂರ…

ಕವಿ : ಕುವೆಂಪು ದೂರ ಬಹುದೂರ ಹೋಗುವ ಬಾರಾ ಅಲ್ಲಿ ಇಹುದೆಮ್ಮ ಊರ ತೀರ ಜಲಜಲದಲೆಗಳ ಮೇಲ್ಕುಣಿದಾಡಿ ಬಳಲಿಕೆ ತೊಳಲಿಕೆಗಳನೆಲ್ಲ ದೂಡಿ ಗೆಲುವಿನ ಉಲಿಗಳ ಹಾಡಿ ಒಲುಮೆಯ ಮಾತಾಡಿ ಹಕ್ಕಿಗಳಿಂಚರ ಕೇಳಿ ಆನಂದವ ತಾಳಿ ಹಿಮಮಣಿಕಣಗಣ ಸಿಂಚಿತ ಅಂಚಿನ ಹಸುರಿನ ತೀರದ ಮೇಲಾಡಿ ಕಿಸಲಯಕಂಪನದಿಂಪನು ನೋಡಿ ಕೂಡಿ ಆಡಿ ನೋಡಿ ಹಾಡಿ ತೇಲಿ ತೇಲಿ ಹೋಗುವ Read More

ನಿರಂತರ – ಬಿ. ಆರ್. ಲಕ್ಷ್ಮಣರಾವ್

ಕವಿ: ಬಿ. ಆರ್. ಲಕ್ಷ್ಮಣರಾವ್ ಕವನ ಸಂಕಲನ : ಸುಬ್ಬಾಭಟ್ಟರ ಮಗಳು ಪ್ರೇಮಕಥೆಗಳಿಗೆ ಕೊನೆಯುಂಟೆ ರಾಧಾ ಮಾಧವರಿರೊ ತನಕ? ಪ್ರೇಮ ಪ್ರವಾಹಕೆ ಯಾವ ತಡೆ ಜಾತಿ ಅಂತಸ್ತು ಧನ ಕನಕ? ಪ್ರಕೃತಿಯಂತೆಯೇ ಪ್ರೇಮ ಸಹ ನಿತ್ಯ ವಿನೂತನ; ಹೊಸ ಹೊಸ ಬಣ್ಣ, ಹೊಸ ಬಿನ್ನಾಣ ಅದಮ್ಯ ಚೇತನ. ಕೆಲವರ ಪ್ರೇಮ ಹುಚ್ಚುಹೊಳೆ, ಕೆಲವರಿಗೋ ಅದು ಮುಳ್ಳು Read More

ಎದೆಯು ಮರಳಿ ತೊಳಲುತಿದೆ – ಎಂ. ಗೋಪಾಲಕೃಷ್ಣ ಅಡಿಗ

ಕವಿ : ಎಂ. ಗೋಪಾಲಕೃಷ್ಣ ಅಡಿಗ ಸಂಗೀತ : ಮೈಸೂರು ಅನಂತಸ್ವಾಮಿ ಗಾಯಕಿ : ರತ್ನಮಾಲಾ ಪ್ರಕಾಶ್ ಹಾಡು ಕೇಳಿ ಎದೆಯು ಮರಳಿ ತೊಳಲುತಿದೆ ದೊರೆಯದುದನೆ ಹುಡುಕುತಿದೆ ಅತ್ತ ಇತ್ತ ದಿಕ್ಕುಗೆಟ್ಟು ಬಳ್ಳಿ ಬಾಳು ಚಾಚುತಿದೆ ತನ್ನ ಕುಡಿಯನು ಸಿಗಲಾರದ ಆಸರಕೆ ಕಾದ ಕಾವ ಬೇಸರಕೆ ಮಿಡುಕಿ ದುಡುಕಲೆಳಸುತಿದೆ ತನ್ನ ಗಡಿಯನು ಎದೆಯು ಮರಳಿ ತೊಳಲುತಿದೆ…. Read More

ಯಾತಕವ್ವಾ ಹುಬ್ಬಳ್ಳಿ-ಧಾರ್‍ವಾಡ! – ಆನಂದಕಂದ

ಕವಿ : ಆನಂದಕಂದ (ಬೆಟಗೇರಿ ಕೃಷ್ಣಶರ್ಮ) ಕವನ ಸಂಕಲನ : ನಲ್ವಾಡುಗಳು -ಪಲ್ಲವಿ- ನಮ್ಮ ಹಳ್ಳಿಯೂರಽ ನಮಗ ಪಾಡಽ- ಯಾತಕವ್ವಾ ಹುಬ್ಬಳ್ಳಿ-ಧಾರ್‍ವಾಡಽ! ೧ ಊರಮುಂದ ತಿಳಿನೀರಿನ ಹಳ್ಳಽ- ಬೇವು ಮಾವು ಹುಲಗಲ ಮರಚೆಳ್ಳಽ- ದಂಡಿಗುಂಟ ನೋಡು ನೆಳ್ಳಽ ನೆಳ್ಳಽ- ನೀರ ತರುವಾಗ ಗೆಣತ್ಯಾರ ಜೋಡಽ. . . ಯಾತಕವ್ವಾ ಹುಬ್ಬಳ್ಳಿ-ಧಾರ್‍ವಾಡಽ— ೨ ನಮ್ಮ ಹಳ್ಳ ಕಾಶಿಯ Read More

ಗಮಗಮಾ ಗಮಾಡಸ್ತಾsವ ಮಲ್ಲಿಗಿ – ಅಂಬಿಕಾತನಯದತ್ತ

ಕವಿ – ಅಂಬಿಕಾತನಯದತ್ತ ಕವನ ಸಂಕಲನ – ಗಂಗಾವತರಣ ಗಾಯಕರು – ವಿಶ್ವೇಶ್, ಅಶ್ವಿನಿ ಆಲ್ಬಮ್ – ಘಮಘಮ ಹಾಡು ಕೇಳಿ ಗಮಗಮಾ ಗಮಾಡಸ್ತಾsವs ಮಲ್ಲಿಗಿ | ನೀ ಹೊರಟಿದ್ದೀಗ ಎಲ್ಲಿಗಿ? ತುಳುಕ್ಯಾಡತಾವ ತೂಕಡಿಕಿ ಎವಿ ಅಪ್ಪತಾವ ಕಣ್ಣ ದುಡುಕಿ ಕನಸು ತೇಲಿ ಬರತಾವ ಹುಡುಕಿ|| ನೀ ಹೊರಟಿದ್ದೀಗ ಎಲ್ಲಿಗಿ ? ಚಿಕ್ಕಿ ತೋರಸ್ತಾವ ಚಾಚಿ Read More