ಅನಂತ ಪ್ರಣಯ – ಅಂಬಿಕಾತನಯದತ್ತ

ಕವಿತೆ :ಅನಂತ ಪ್ರಣಯ ಕವಿ : ಅಂಬಿಕಾತನಯದತ್ತ, ಉತ್ತರಧ್ರುವದಿಂ ದಕ್ಷಿಣ ಧ್ರುವಕೂ ಚುಂಬಕ ಗಾಳಿಯು ಬೀಸುತಿದೆ. ಸೂರ್ಯನ ಬಿಂಬಕೆ ಚಂದ್ರನ ಬಿಂಬವು ರಂಬಿಸಿ ನಗೆಯಲಿ ಮೀಸುತಿದೆ. ಭೂರಂಗಕೆ ಅಭಿಸಾರಕೆ ಕರೆಯುತ ತಿಂಗಳು ತಿಂಗಳು ನವೆಯುತಿದೆ ತುಂಬುತ ತುಳುಕುತ ತೀರುತ ತನ್ನೊಳು ತಾನೇ ಸವಿಯನು ಸವಿಯುತಿದೆ. ಭೂವನ ಕುಸುಮಿಸಿ ಪುಲಕಿಸಿ ಮರಳಿಸಿ ಕೋಟಿ ಕೋಟಿ ಸಲ ಹೊಸಯಿಸಿತು. Read More

ಬೆಳಗು – ಅಂಬಿಕಾತನಯದತ್ತ

ಕವಿತೆ :ಬೆಳಗು ಕವಿ : ಅಂಬಿಕಾತನಯದತ್ತ, (೧) ಮೂಡಲ ಮನೆಯಾ ಮುತ್ತಿನ ನೀರಿನ ಎರಕವ ಹೊಯ್ದಾ ನುಣ್ಣ-ನ್ನೆರಕsವ ಹೊಯ್ದಾ ಬಾಗಿಲು ತೆರೆದೂ ಬೆಳಕು ಹರಿದೂ ಜಗವೆಲ್ಲಾ ತೊಯ್ದಾ ಹೋಯ್ತೋ-ಜಗವೆಲ್ಲಾ ತೊಯ್ದಾ. (೨) ರತ್ನದ ರಸದಾ ಕಾರಂಜೀಯೂ ಪುಟಪುಟನೇ ಪುಟಿದು ತಾನೇ-ಪುಟಪುಟನೇ ಪುಟಿದು ಮಘಮಘಿಸುವಾ ಮುಗಿದ ಮೊಗ್ಗೀ ಪಟಪಟನೇ ಒಡೆದು ತಾನೇ-ಪಟಪಟನೇ ಒಡೆದು. (೩) ಎಲೆಗಳ ಮೇಲೇ Read More

ಬೆಣ್ಣಿಯಾಕಿ – ಆನಂದಕಂದ

ಕವಿ : ಆನಂದಕಂದ (ಬೆಟಗೇರಿ ಕೃಷ್ಣಶರ್ಮ) ಕವನ ಸಂಕಲನ : ನಲ್ವಾಡುಗಳು -ಪಲ್ಲವಿ- ನಾ ಸಂತಿಗೆ ಹೋಗಿನ್ನಿ- ಆಕಿ ತಂದಿದ್ದಳೋ ಬೆಣ್ಣಿ; ಹಿಂಡುಹೆಣ್ಣಿನಾಗಕಿಯs ಸರಿ ಒಂದು ಸವಿಸಕ್ಕರಿ ಕಣ್ಣಿ! ನಾ ಸಂತಿಗೆ ಹೋಗಿನ್ನಿ- ಆಕಿ- ತಂದಿದ್ದಳೋ ಬೆಣ್ಣಿ! ೧ ತೆನಿ ತಿರಿವಿದ ಟೋಪಿನ ಸೀರಿ-ಅದ- ರಂಚಿಗೆ ರೇಶಿಮಿ ಭಾರಿ. . . ಬಿಸಿಲು ಬಿದ್ದ ಕಡೆ Read More

ಕನ್ನಡ ದಾಸಯ್ಯ

ಕವಿ : ಸಕ್ಕರಿ ಬಾಳಾಚಾರ್ಯ (ಶಾಂತಕವಿ) – (೧೮೫೬-೧೯೩೦) ಬೇಡಲು ಕನ್ನಡ ದಾಸಯ್ಯ ಬಂದಿಹ ನೀಡಿರಮ್ಮ ; ತಡಮಾಡದಲೇ||ಪ|| ಹಾಡೊಂದನಾತನು ಹೊಸದಾಗಿ ಮಾಡಿಹ ಕೂಡಿರಿ ಕೇಳಿರಿ ಹಾಡುವೆನು||ಅನು|| ಕನ್ನಡ ಮಾತಿನ ತಂದೆತಾಯಿಗಳಿಂದ ಚೆನ್ನ ಚೆನ್ನೆಯರೆಲ್ಲ ಹುಟ್ಟಿದಿರಿ. ಕನ್ನಡ ಮಾತಿನ ಜೋಗುಳವನು ಕೇಳಿ ಕನ್ನಡ ತೊಟ್ಟಿಲೊಳಾಡಿದಿರಿ, ಕನ್ನಡ ದೇಶದೆ ದೊಡ್ಡವರಾದಿರಿ ಕನ್ನಡ ವಿದ್ಯೆಯ ಗಳಿಸಿದಿರಿ ಕನ್ನಡದಿಂದಲೆ ಸಿರಿವಂತರಾದಿರಿ Read More

ಹುಬ್ಬಳ್ಳಿಯಾಂವಾ – ಅಂಬಿಕಾತನಯದತ್ತ

ಕವಿ – ಅಂಬಿಕಾತನಯದತ್ತ ಕವನ ಸಂಕಲನ – ಸಖೀಗೀತ ಇನ್ನೂ ಯಾಕ ಬರಲಿಲ್ಲವ್ವಾ ಹುಬ್ಬಳ್ಳಿಯಾಂವಾ ವಾರದಾಗ ಮೂರು ಸರತಿ ಬಂದು ಹೋದಾಂವಾ ||ಪಲ್ಲ|| ಭಾರಿ ಜರದ ವಾರಿ ರುಮ್ಮಾಲಾ ಸುತ್ತಿಕೊಂಡಾಂವಾ ತುಂಬ ಮೀಸಿ ತೀಡಿಕೋತ ಹುಬ್ಬ ಹಾರಸಾಂವಾ ಮಾತು ಮಾತಿಗೆ ನಕ್ಕು ನಗಿಸಿ ಆಡಿಸ್ಯಾಡಾಂವಾ ಏನೊ ಅಂದರ ಏನೊ ಕಟ್ಟಿ ಹಾsಡ ಹಾಡಾಂವಾ ಇನ್ನೂ ಯಾಕ. Read More