ಎಲ್ಲಿರುವುದು ನಾ ಸೇರುವ ಊರು ?

ಕವಿ – ಕುವೆಂಪು ಎಲ್ಲಿರುವುದು ನಾ ಸೇರುವ ಊರು ಬಲ್ಲಿದರರಿಯದ ಯಾರೂ ಕಾಣದ ಎಲ್ಲಿಯೂ ಇರದ ಊರು ಭವಭಯವಿಲ್ಲದ ಊರಂತೆ ದಿವಿಜರು ಬಯಸುವ ಊರಂತೆ ತವರೂರಂತೆ ಬಹುದೂರಂತೆ ಕವಿಗಳು ಕಂಡಿಹ ಊರಂತೆ ಜ್ಞಾನಿಗಳಿರುವುದೇ ಆ ಊರು ಜ್ಞಾನದ ಮೇರೆಯೇ ಆ ಊರು ನಾನಿಹ ಊರು ಸಮೀಪದ ಊರು ಮೌನತೆಯಾಳುವ ತವರೂರು ಎಲ್ಲಿರುವುದು ನಾ ಸೇರುವ ಊರು Read More

ಎಲ್ಲಿ ಅರಿವಿಗಿರದೊ ಬೇಲಿ

ಕವಿ- ಎಚ್. ಎಸ್. ವೆಂಕಟೇಶಮೂರ್ತಿ ಎಲ್ಲಿ ಅರಿವಿಗಿರದೊ ಬೇಲಿ ಎಲ್ಲಿ ಇರದೋ ಭಯದ ಗಾಳಿ ಅಂಥ ನೆಲೆಯಿದೆಯೇನು ಹೇಳಿ ಸ್ವರ್ಗವನ್ನು ಅದರೆದುರು ಹೂಳಿ ಹಸಿದಂಥ ಕೂಸಿರದ ನಾಡು ಉಸಿರೆಲ್ಲ ಪರಿಮಳದ ಹಾಡು ಎಲ್ಲಿ ಬೀಸುವುದೋ ನೆಮ್ಮದಿಯ ಗಾಳಿ ಸ್ವಾತಂತ್ರ್ಯ ನಗುತಲಿದೆ ಅಲ್ಲಿ ಕಣ್ಣೋ ಹಿಗ್ಗಿನ ಗೂಡು ಮಣ್ಣೋ ಸುಗ್ಗಿಯ ಬೀಡು ದುಡಿವೆವೋ ಎಲ್ಲಿ ಕೈಯಲ್ಲಿ ಬಿಡುಗಡೆಯು Read More

ವಿಶ್ವಭಾರತಿಗೆ ಕನ್ನಡದಾರತಿ

ಕವಿ – ಚೆನ್ನವೀರ ಕಣವಿ ಹಾಡು ಕೇಳಿ ವಿಶ್ವವಿನೂತನ, ವಿದ್ಯಾಚೇತನ, ಸರ್ವಹೃದಯ ಸಂಸ್ಕಾರಿ ಜಯಭಾರತಿ, ಕರುನಾಡ ಸರಸ್ವತಿ ಗುಡಿಗೋಪುರ ಸುರಶಿಲ್ಪ ಕಲಾಕೃತಿ ಕೃಷ್ಣೆ, ತುಂಗೆ, ಕಾವೇರಿ ಪವಿತ್ರಿತ ಕ್ಷೇತ್ರ ಮನೋಹಾರಿ. ವಿಶ್ವವಿನೂತನ…………………….||೧|| ಗಂಗ, ಕದಂಬಾ, ರಾಷ್ಟ್ರಕೂಟ ಬಲ ಚಲುಕ್ಯ, ಹೊಯ್ಸಳ,ಬಲ್ಲಾಳ ಹುಕ್ಕ,ಬುಕ್ಕ,ಪುಲಕೇಶಿ, ವಿಕ್ರಮರ ಚೆನ್ನಮ್ಮಾಜಿಯ ವೀರಶ್ರೀ. ವಿಶ್ವವಿನೂತನ…………………….||೨|| ಆಚಾರ್ಯತ್ರಯ ಮತಸಂಸ್ಥಾಪನ ಬಸವಾಲ್ಲಮ ಅನುಭಾವ ನಿಕೇತನ ಶರಣ, Read More

ಹಿಂದುಗಳ ಭಾಗ್ಯವಿನ್ನೆಂದು ನೀ ತೆರೆವೆ ?

ಕವಿ : ಮಂಜೇಶ್ವರ ಗೋವಿಂದ ಪೈ (೧೮೮೩-೧೯೬೩) ಪ್ರಥಮ ಪ್ರಭಾತದಿಂದೆನಿತೊ ವರಮಿರದೆ ನೀನೊಡೆಯ ನಮ್ಮ ಭಾರತವ ಕಾದಿರುವೆ ! ಬಳಿಕೆಮ್ಮನೇಂ ಪರಾಧೀನತೆಗೆ ತೊರೆದೆ ? ಮರಳಿ ಹಿಂದುಗಳ ಭಾಗ್ಯವನೆಂದು ತೆರೆವೆ ? ವರುಷ ಹಲನೂರಾಯ್ತು, ನಮಗಿಲ್ಲ ನೋಡ ಸ್ವಾತಂತ್ರ್ಯ ! ನಮ್ಮ ದುರ್ದಶೆಯನೆಂದರಿವೆ ? ಮನುಜರಲ್ಲವೆ? ನಮಗೆ ಮನುಜತನ ಬೇಡಾ? ಅಕಟ ಹಿಂದುಗಳ ಭಾಗ್ಯವನೆಂದು ತೆರೆವೆ Read More

ಮೌರಜಮೋದೆ – ಡಿವಿಜಿ

ಕವಿ – ಡಿವಿಜಿ -ಅಂತಃಪುರ ಗೀತೆಗಳು ಗಾಯಕಿ: ರತ್ನಮಾಲಾ ಪ್ರಕಾಶ್ ಹಾಡು ಕೇಳಿ ಏನೀ ಮಹಾನಂದವೇ – ಓ ಭಾಮಿನೀ | ಏನೀ ಸಂಭ್ರಮದಂದವೇ – ಬಲ್ಚಂದವೇ ||ಪ|| ಏನೀ ನೃತ್ತಾಮೋದ – ಏನೀ ಮೌರಜನಾದ | ಏನೀ ಜೀವೋನ್ಮಾದ-ವೇನೀ ವಿನೋದ || ಅ.ಪ|| ಢಕ್ಕೆಯ ಶಿರಕೆತ್ತಿ – ತಾಳಗೋಲಿಂ ತಟ್ಟಿ | ತಕ್ಕಿಟ ಧಿಮಿಕಿಟ Read More