ಅವ್ವ – ಪಿ.ಲಂಕೇಶ್

ಕವನ – ಅವ್ವ ಕವಿ – ಪಿ. ಲಂಕೇಶ್  ನನ್ನವ್ವ ಫಲವತ್ತಾದ ಕಪ್ಪು ನೆಲ ಅಲ್ಲಿ ಹಸಿರು ಪತ್ರದ ಹರವು, ಬಿಳಿಯ ಹೂ ಹಬ್ಬ; ಸುಟ್ಟಷ್ಟು ಕಸುವು, ನೊಂದಷ್ಟೂ ಹೂ ಹಣ್ಣು ಮಕ್ಕಳೊದ್ದರೆ ಅವಳ ಅಂಗಾಂಗ ಪುಲಕ; ಹೊತ್ತ ಬುಟ್ಟಿಯ ಇಟ್ಟು ನರಳಿ ಎವೆ ಮುಚ್ಚಿದಳು ತೆರೆಯದಂತೆ, ಪಲ್ಲ ಜೋಳವ ಎತ್ತಿ ಅಪ್ಪನ್ನ ಮೆಚ್ಚಿಸಿ ತೋಳ Read More

ಮನಸೇ ನನ್ನ ಮನಸೇ – ಬಿ.ಆರ್.ಲಕ್ಷ್ಮಣರಾವ್

ಕವಿ – ಬಿ.ಆರ್.ಲಕ್ಷ್ಮಣರಾವ್ ಸಂಗೀತ – ಸಿ.ಅಶ್ವಥ್ ಗಾಯಕ – ಸಿ.ಅಶ್ವಥ್ ಹಾಡು ಕೇಳಿ – ಮನಸೇ ನನ್ನ ಮನಸೇ ಏನಾಗಿದೆ ನಿನಗೆ? ಏಕೆ ಅವಳ ಕಹಿ ನೆನಪೇ ಜೇನಾಗಿದೆ ನಿನಗೆ? ಬೇಡವೆಂದರೂ ಏಕೆ ತರುವೆ ಕಣ್ಮುಂದೆ ಅವಳ ಚಿತ್ರ? ಬೂಟಾಟಿಕೆ ಆ ನಾಟಕ ಅವಳ ವಿವಿಧ ಪಾತ್ರ ! ಪದೆಪದೇ ಮತ್ತದೇ ಜಾಗಕ್ಕೆ ನನ್ನ Read More

ತಿಂಗಳಾಯಿತೇ? – ಕೆ.ಎಸ್.ನರಸಿಂಹಸ್ವಾಮಿ

ಕವನ – ತಿಂಗಳಾಯಿತೇ? ಕವಿ – ಕೆ.ಎಸ್.ನರಸಿಂಹಸ್ವಾಮಿ ಪಯಣಿಸುವ ವೇಳೆಯಲಿ ಬಂದು ಅಡಿಗೆರಗಿ ಮುಂದೆ ನಿಂದಳು ನನ್ನ ಕೈಹಿಡಿದ ಹುಡುಗಿ | ಇನ್ನೆಂದು ಬರುವಿರೆಂದೆನ್ನ ಕೇಳಿದಳು ಇನ್ನೊಂದು ತಿಂಗಳಿಗೆ ಎಂದು ಹೇಳಿದೆನು || ಕೆನ್ನೆ ಕೆಂಪಾಗಿರಲು ಸಂಜೆ ಮುಗಿಲಂತೆ ಕಣ್ಣಿರಲು ತಿಳಿಬಾನ ಕಿರುತಾರೆಯಂತೆ | ವೇಣಿಯಿರಲು ವಸಂತ ಪುಷ್ಪವನದಂತೆ ಮನಸು ಬಾರದು ನನಗೆ ಅಡಿಯನಿಡೆ ಮುಂದೆ Read More

ಹಸುರು – ಕುವೆಂಪು

ಕವನ – ಹಸುರು ಕವಿ   – ಕುವೆಂಪು ನವರಾತ್ರಿಯ ನವಧಾತ್ರಿಯ ಈ ಶ್ಯಾಮಲ ವನಧಿಯಲಿ ಹಸುರಾದುದೊ ಕವಿಯಾತ್ಮಂ ರಸಪಾನ ಸ್ನಾನದಲಿ ! ಹಸುರಾಗಸ, ಹಸುರು ಮುಗಿಲು ; ಹಸುರು ಗದ್ದೆಯಾ ಬಯಲು  ; ಹಸುರಿನ ಮಲೆ ; ಹಸುರು ಕಣಿವೆ ; ಹಸುರು ಸಂಜೆಯೀ ಬಿಸಿಲೂ ! ಆಶ್ವೀಜದ ಶಾಲಿವನದ ಗಿಳಿಯೆದೆ ಬಣ್ಣದ ನೋಟ ; Read More

ಸು.ರಂ.ಎಕ್ಕುಂಡಿ – ಯಾವ ಕಾಣಿಕೆ?

ಚಿತ್ರ: ಮಸಣದ ಹೂವು (೧೯೮೫) ಗಾಯಕ: ಎಸ್.ಪಿ ಬಾಲಸುಬ್ರಹ್ಮಣ್ಯಮ್ ಸಂಗೀತ: ವಿಜಯಭಾಸ್ಕರ್ ಸಾಹಿತ್ಯ: ಸು.ರಂ.ಎಕ್ಕುಂಡಿ ಹಾಡು ಕೇಳಿ ಯಾವ ಕಾಣಿಕೆ ನೀಡಲಿ ನಿನಗೆ ಓ ಎನ್ನ ಪ್ರೇಯಸಿ ಯಾವ ಕಾಣಿಕೆ ನೀಡಲಿ ನಿನಗೆ ಓ ಎನ್ನ ಪ್ರೇಯಸಿ| ಮಲೆನಾಡ ಕಣಿವೆಗಳ ಹಸಿರು ಬನದಿಂದ ನಿನಗಾಗಿ ಗಿಳಿಯೊಂದ ನಾ ತರಲಾರೆ ಸಾಗರದ ಅಲೆಗಳಲಿ ಉಯ್ಯಾಲೆ ಆಡಿರುವ ಹಂಸ Read More