ನನ್ನ ದೇಹದ ಬೂದಿ – ದಿನಕರ ದೇಸಾಯಿ

ಕವನ – ನನ್ನ ದೇಹದ ಬೂದಿ ಕವಿ – ದಿನಕರ ದೇಸಾಯಿ ನನ್ನ ದೇಹದ ಬೂದಿ-ಗಾಳಿಯಲಿ ತೂರಿ ಬಿಡಿ  ಹೋಗಿ ಬೀಳಲಿ ಬತ್ತ ಬೆಳೆಯುವಲ್ಲಿ ; ಬೂದಿ-ಗೊಬ್ಬರದಿಂದ ತೆನೆಯೊಂದು ನೆಗೆದು ಬರೆ  ಧನ್ಯವಾಯಿತು ಹುಟ್ಟು ಸಾವಿನಲ್ಲಿ ನನ್ನ ದೇಹದ ಬೂದಿ-ಹೊಳೆಯಲ್ಲಿ ಹರಿಯಬಿಡಿ  ತೇಲಿ ಬೀಳಲಿ ಮೀನ ಹಿಡಿಯುವಲ್ಲಿ ; ಮುಷ್ಟಿಬೂದಿಯ ತಿಂದು ಪುಷ್ಟವಾಗಲು ಮೀನು  ಧನ್ಯವಾಯಿತು Read More

ಬೀchi ಬಂದರು ದಾರಿ ಬಿಡಿ!

  ಈ ವಾರಾಂತ್ಯದ ವಿನೋದಕ್ಕೆ ಆಗಮಿಸಿರುವ ಮುಖ್ಯ ಅತಿಥಿ ಬೀchi.  ಇದನ್ನೋದಿ ,  ಅರ್ಥಕೋಶಕ್ಕಿಂತ ಅನರ್ಥಕೋಶವೇ ಹೆಚ್ಚು ಇಷ್ಟವಾಗುವ ಅಪಾಯವೂ ಇದೆ,ಎಚ್ಚರಿಕೆ! 🙂 ಅನರ್ಥ – ಅಪಾರ್ಥಗಳು : (ಬೀchi – ತಿಂಮ ರಸಾಯನದಿಂದ) ಗಣಪತಿ – ಕಾಲಾರು ತಲೆ ಮೂರು ತ್ರೈಮೂರ್ತಿಯಲ್ಲ, ಬಾಲಂಗಳೆರಡು ಕಿವಿ ನಾಲ್ಕು ಮೃಗವಲ್ಲ, ನಾಲಿಗೆಯು ನಾಲ್ಕುಂಟು ವಿಪರೀತವಲ್ಲ, ಸರ್ಪವನ್ನು ಧರಿಸಿ ಮೂಷಿಕದ ಮೇಲಿರುವ ಗಣಪತಿ. Read More

ಅನುಪಮ – ಒಲುಮೆ ಪೂಜೆ

ಚಿತ್ರ : ಅನುಪಮ (೧೯೮೧) ಸಾಹಿತ್ಯ: ದೊಡ್ಡರಂಗೇಗೌಡ ಸಂಗೀತ: ಅಶ್ವಥ್-ವೈದಿ ಹಾಡು ಕೇಳಿ – ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ  ಕೊಳಲು – ಪ್ರವೀಣ್ ಗೋಡ್ಕಿಂಡಿ  ಒಲುಮೆ ಪೂಜೆಗೆಂದೇ ಕರೆಯ ಕೇಳಿ ಬಂದೆ ರಾಗ ತಾನ ಪ್ರೇಮಗಾನ ಸಂಜೀವನಾ ಮಮತೆ ಮೀಟಿ ಮಿಲನ ಕಂಡೆ ನಿನ್ನ ಸ್ನೇಹ ಸೌಭಾಗ್ಯ ಮಿಂದೆ ಹರಯ ತೂಗಿ ಸನಿಹ ಬಂದೆ ಎಲ್ಲಾ ಪ್ರೀತಿ ಸಮ್ಮೋಹ Read More

ಪರಸಂಗದ ಗೆಂಡೆತಿಮ್ಮ – ನಿನ್ನ ರೂಪು

ಚಿತ್ರ : ಪರಸಂಗದ ಗೆಂಡೆತಿಮ್ಮ(೧೯೭೮) ಸಾಹಿತ್ಯ: ದೊಡ್ಡರಂಗೇಗೌಡ ಸಂಗೀತ: ರಾಜನ್-ನಾಗೇಂದ್ರ ಗಾಯಕಿ: ಎಸ್.ಜಾನಕಿ  ಹಾಡು ಕೇಳಿ ನಿನ್ನಾ ರೂಪು ಎದೆಯ ಕಲಕಿ ಕಣ್ಣು ಮಿಂದಾಗ ನಿನ್ನಾ ನೋಟ ಕೂಡಿದಾಗ ಕಂಡೆ ಅನುರಾಗ ಮನಸಿನ ಚಿಲುಮೆಯಾಗೆ ಮುಗಿಯದಾಸೆ ಚಿಮ್ಮೈತೆ ಹೃದಯದ ಕುಲುಮೆಯಾಗೆ ನೂರು ಬಯಕೆ ಸಿಡಿದೈತೆ ನಿನ್ನ ಕಾಣುವ ಬಾವ ಬೆಳೆದು ನನ್ನ ಕನಸು ಕಡೆದೈತೆ ತೆರೆಯದ Read More

ಕಾಸರಗೋಡು-೭೭ – ವೇಣುಗೋಪಾಲ ಕಾಸರಗೋಡು

ಕವನ – ಕಾಸರಗೋಡು-೭೭ ಕವಿ – ವೇಣುಗೋಪಾಲ ಕಾಸರಗೋಡು ಕಂಡ ಕಂಡ ದೈವ ದೇವರುಗಳಿಗೆ ಅನ್ಯಥಾ ಶರಣಂ ನಾಸ್ತಿ ಪ್ರಭೋ ನೀವೆ ಗತಿ ಎಂದು ಉದ್ದಂಡ ಬಿದ್ದೆವು ಚೆಂಡೆ ಕಾಸರಕನ ಗೋಳಿ ಅಶ್ವಥ್ಥ ಬಣ್ಣ ತೊಗಲುಗಳ ಗಣಿಸದೇ ಸುತ್ತು ಬಂದೆವು ಹರಕೆ ಹೊತ್ತೆವು ಆಯಾ ಕ್ಷೇತ್ರಕ್ಕೆ ಆಯಕಟ್ಟಿನ ನೈವೇದ್ಯ ನೀಡಿದೆವು ದಿವ್ಯ ಅಶರೀರ ವಾಣಿಗಳ ನಂಬಿದೆವು Read More