ಹೋಗುವೆನು ನಾ ನನ್ನ ಒಲುಮೆಯ ಗೂಡಿಗೆ

ಕವಿ: ಕುವೆಂಪು ಚಿತ್ರ :ಕಾನೂರು ಹೆಗ್ಗಡತಿ ಗಾಯಕ : ಪುತ್ತೂರು ನರಸಿಂಹ ನಾಯಕ್ ಹಾಡು ಕೇಳಿ ಹೋಗುವೆನು ನಾ……. ಹೋಗುವೆನು ನಾ ನನ್ನ ಒಲುಮೆಯ ಗೂಡಿಗೆ ಮಲೆಯ ನಾಡಿಗೆ ಮಳೆಯ ಬೀಡಿಗೆ ಸಿರಿಯ ಚೆಲುವಿನ ರೂಢಿಗೆ ಬೇಸರಾಗಿದೆ ಬಯಲು ಹೋಗುವೆ ಮಲೆಯ, ಕಣಿವೆಯ ಕಾಡಿಗೆ ಹಸಿರು ಸೊಂಪಿನ ಬಿಸಿಲು ತಂಪಿನ ಗಾನದಿಂಪಿನ ಕೂಡಿಗೆ | ಅಲ್ಲಿ Read More

ಜಡೆ – ಜಿ. ಎಸ್. ಶಿವರುದ್ರಪ್ಪ

ಕವನ – ಜಡೆ ಕವಿ – ಜಿ. ಎಸ್. ಶಿವರುದ್ರಪ್ಪ ಲಲನೆಯರ ಬೆನ್ನೆನೆಡೆ ಹಾವಿನೊಲು ಜೋಲ್ವ ಜಡೆ ಕಾಳಿಂದಿಯಂತಿಳಿದು, ಕೊರಳೆಡೆಗೆ ಕವಲೊಡೆದು ಅತ್ತಿತ್ತ ಹರಿದ ಜಡೆ! ಚೇಳ್ ಕೊಂಡಿಯಂಥ ಜಡೆ, ಮೋಟು ಜಡೆ, ಚೋಟು ಜಡೆ, ಚಿಕ್ಕವರ ಚಿನ್ನ ಜಡೆ ! ಎಣ್ಣೆ ಕಾಣದೆ ಹಿಣಿಲು ಹಿಣಿಲಾಗಿ ಹೆಣೆದ ಜಡೆ ಬೆವರಿನಲಿ ಧೂಳಿನಲಿ ನೆನೆದಂಟಿಕೊಂಡಿರುವ ಗಂಟು Read More

ಆರ್.ಎನ್.ಜೆ. ಇನ್ನಿಲ್ಲ :(

ಸೀತಾ – (1970) ಸಾಹಿತ್ಯ: ಆರ್.ಎನ್.ಜಯಗೋಪಾಲ್ ಸಂಗೀತ: ವಿಜಯಭಾಸ್ಕರ್ ಗಾಯಕಿ: ಎಸ್.ಜಾನಕಿ ಹಾಡು ಕೇಳಿ ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಲಿ ಬಂದು ನಿಂತೆ ಹೇಗೋ ಏನೋ ನನ್ನ ಮನದ ಗುಡಿಯಲಿ ಮಿಡಿದೆ ನೀನು ಪ್ರಣಯ ನಾದ ಹೃದಯ ವೀಣೆ ಅದರಲಿ ಬೆರೆತು ಹೋದೆ ಮರೆತು ನಿಂದೆ ಅದರ ಮಧುರ ಸ್ವರದಲಿ ಕಂಗಳಲ್ಲೇ Read More

ಅಮ್ಮ – ಬಿ. ಆರ್. ಲಕ್ಷ್ಮಣರಾವ್

ಕವಿ – ಬಿ. ಆರ್. ಲಕ್ಷ್ಮಣರಾವ್ ಹಾಡು ಕೇಳಿ  ಅಮ್ಮ…. ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು ಮಿಡುಕಾಡುತಿರುವೆ ನಾನು ಕಡಿಯಲೊಲ್ಲೆ ಈ ಕರುಳ ಬಳ್ಳಿ ಒಲವೂಡುತಿರುವ ತಾಯೆ ಬಿಡದ ಭುವಿಯ ಮಾಯೆ ನಿನ್ನ ರಕ್ಷೆ ಗೂಡಲ್ಲಿ ಬೆಚ್ಚಗೆ ಅಡಗಲಿ ಎಷ್ಟು ದಿನ ? ದೂಡು ಹೊರಗೆ ನನ್ನ ಓಟ ಕಲಿವೆ, ಒಳನೋಟ ಕಲಿವೆ, ನಾ Read More

ಪುಟ್ಟಿಯ ಪುಟ್ಟ ಕಂಗಳಲ್ಲಿ…. 2

ಇದ್ದಕ್ಕಿದ್ದಂತೆ ಪುಟ್ಟಿಗೆ ಧಡಕ್ಕನೆ ಎಚ್ಚರವಾಯಿತು. ನಡುಮನೆಯಲ್ಲಿ ಉರಿಯುತ್ತಿದ್ದ ದೀಪದ ಬೆಳಕು ಪುಟ್ಟಿಯ ಕೋಣೆಗೂ ಬಿದ್ದಿತ್ತು. ಹೊರಗೆ ಏನೋ ಗದ್ದಲ. ಪರಿಚಿತ, ಅಪರಿಚಿತ ಧ್ವನಿಗಳು. ಬಂದಿರುವವರು ಯಾರು? ಪಕ್ಕದ ಮನೆಯ ಮೂರ್ತಿ ಮೇಷ್ಟ್ರು? ಅಂಗಡಿಯ ಆಳು ಕೆಂಚಪ್ಪ? ಬ್ಯಾಂಕಿನ ಅಂಕಲ್? ಪುಟ್ಟಿ ತಮ್ಮ ಮನೆಗೆ ಬಂದು ಹೋಗಿ ಮಾಡುವ ಹಲವರ ಧ್ವನಿಗಳನ್ನು ನೆನಪು ಮಾಡಿಕೊಂಡಳು. ಅವರಾರೂ ಅಲ್ಲವೆನಿಸಿತು. Read More