ಪುಟ್ಟಿಯ ಪುಟ್ಟ ಕಂಗಳಲ್ಲಿ…. 3

ಹೇಮಂತನ ತಂದೆಯಂತಿದ್ದ ಹಿರಿಯರು ಮಾತುಕತೆಗೆ ವಿರಾಮ ಹಾಕುವವರಂತೆ ನುಡಿದರು, “ನೋಡಿ ಸ್ವಾಮಿ, ನಾವು ನಿಮಗಿಂತ ಬಡವರಿರಬಹುದು. ಹಾಗೆಂದು ನಾವೇನು ಗತಿಗೆಟ್ಟವರಲ್ಲ. ಏನೋ ಹುಡುಗ-ಹುಡುಗಿ ಇಷ್ಟಪಟ್ಟಿದ್ದಾರೆ ಅನ್ನೋ ಕಾರಣಕ್ಕೆ ನಾವು ಮಾತಾಡೋದಿಕ್ಕೆ ಬಂದಿದೀವಿ. ನಿಮ್ಮನೆ ಹೆಣ್ಣನ್ನು ನಮ್ಮನೆ ಬೆಳಗಲು ಕಳಿಸಿಕೊಡಿ ಎಂದು ಕೇಳೋದಿಕ್ಕೆ ಬಂದಿದೀವಿ. ನೀವೂ ಅಷ್ಟೆ, ಎಳೆಯರ ಪ್ರೀತಿಗೆ ಬೆಲೆಕೊಟ್ಟು ಮದುವೆಗೆ ಒಪ್ಪಿಕೊಳ್ಳಿ. ನಿಮ್ಮ ಮಗು Read More

ಇಂತಿ ನಿನ್ನ ಪ್ರೀತಿಯ – ಮಧುವನ ಕರೆದರೆ

ಚಿತ್ರ : ಇಂತಿ ನಿನ್ನ ಪ್ರೀತಿಯ (2008) ಸಾಹಿತ್ಯ : ಜಯಂತ ಕಾಯ್ಕಿಣಿ ಸಂಗೀತ : ಸಾಧು ಕೋಕಿಲ ಗಾಯಕಿ : ವಾಣಿ ಹಾಡು ಕೇಳಿ ಮಧುವನ ಕರೆದರೆ ತನುಮನ ಸೆಳೆದರೆ ಶರಣಾಗು ನೀನು…. ಆದರೆ ಬಿರುಗಾಳಿಯಲ್ಲಿ ತೇಲಿ ಹೊಸ ಘಳಿಗೆ ಬಂದಿದೆ ಕನಸೊಂದು ಮೈಯ್ಯ ಮುರಿದು ಬಾ ಬಳಿಗೆ ಎಂದಿದೆ ಶರಣಾಗು …. ಆದರೆ Read More

ಬಾ ಮಳೆಯೇ ಬಾ – ಬಿ. ಆರ್. ಲಕ್ಷ್ಮಣರಾವ್

ಕವಿ : ಬಿ. ಆರ್. ಲಕ್ಷ್ಮಣರಾವ್ ಚಿತ್ರ: ಆಕ್ಸಿಡೆಂಟ್ ಸಂಗೀತ : ರಿಕಿ ಕೆಜ್ ಗಾಯಕ : ಸೋನು ನಿಗಮ್ ಹಾಡು ಕೇಳಿ ಬಾ ಮಳೆಯೇ ಬಾ, ಅಷ್ಟು ಬಿರುಸಾಗಿ ಬಾರದಿರು ನನ್ನ ನಲ್ಲೆ ಬರಲಾಗದಂತೆ ಅವಳಿಲ್ಲಿ ಬಂದೊಡನೆ ಬಿಡದೆ ಬಿರುಸಾಗಿ ಸುರಿ ಹಿಂತಿರುಗಿ ಹೋಗದಂತೆ ಓಡು, ಕಾಲವೇ ಓಡು, ಬೇಗ ಕವಿಯಲಿ ಇರುಳು ಕಾದಿಹಳು Read More

ಹನಿಗವನ – ಡಾಲರ್ ಪವರ್!

ಡಾಲರ್ ಪವರ್! ಅಮೆರಿಕದಲ್ಲಿ ಇರುವವರೆಲ್ಲಾ ಬಹಳ ಶ್ರೀಮಂತರೆಂದುಕೊಂಡು ತೋರಿಕೆಯ ಮರ್ಯಾದೆ ನೀಡುತ್ತಿದ್ದ ಒಳಗೇ ಉರಿದುಕೊಳ್ಳುತ್ತಾ ಬಾಯುಪಚಾರ ಮಾಡುತ್ತಿದ್ದ, ಭಾರತದ ನೆಂಟರೊಬ್ಬರು ಡಾಲರ್ ಬೆಲೆ ಜರ್ರೆಂದು ಕೆಳಗಿಳಿಯುತ್ತಿರುವ ಈ ಹೊತ್ತಿನಲ್ಲಿ ಕೇಳಿದರಂತೆ ಕಿಟ್ಟಿಯನ್ನ- ಪಾಪ! ಅಮೆರಿಕದಲ್ಲಿದೀರಂತೆ, ಹೊಟ್ಟೆ-ಬಟ್ಟೆಗೇನೂ ಅಲ್ಲಿ ತಾಪತ್ರಯವಿಲ್ಲ ತಾನೇ? (‘ಸಂಗಮ’ದಲ್ಲಿ ಪ್ರಕಟವಾಗಿರುವ ಹನಿಗವನ) ಚಿತ್ರ : ಅರುಣ್ ಮೂರ್ತಿ

ದೂರ…. ಬಹುದೂರ…

ಕವಿ : ಕುವೆಂಪು ದೂರ ಬಹುದೂರ ಹೋಗುವ ಬಾರಾ ಅಲ್ಲಿ ಇಹುದೆಮ್ಮ ಊರ ತೀರ ಜಲಜಲದಲೆಗಳ ಮೇಲ್ಕುಣಿದಾಡಿ ಬಳಲಿಕೆ ತೊಳಲಿಕೆಗಳನೆಲ್ಲ ದೂಡಿ ಗೆಲುವಿನ ಉಲಿಗಳ ಹಾಡಿ ಒಲುಮೆಯ ಮಾತಾಡಿ ಹಕ್ಕಿಗಳಿಂಚರ ಕೇಳಿ ಆನಂದವ ತಾಳಿ ಹಿಮಮಣಿಕಣಗಣ ಸಿಂಚಿತ ಅಂಚಿನ ಹಸುರಿನ ತೀರದ ಮೇಲಾಡಿ ಕಿಸಲಯಕಂಪನದಿಂಪನು ನೋಡಿ ಕೂಡಿ ಆಡಿ ನೋಡಿ ಹಾಡಿ ತೇಲಿ ತೇಲಿ ಹೋಗುವ Read More