ಬಾಳಗೀತ – ವಿನಾಯಕ

ಕವನ – ಬಾಳಗೀತ ಕವಿ – ವಿ.ಕೃ.ಗೋಕಾಕ (ವಿನಾಯಕ)   ಡಾ. ರಾಜ್‍ಕುಮಾರ್ ದನಿಯಲ್ಲಿ ಹಾಡು ಕೇಳಿ ಇಲ್ಲೆ ಇರು, ಅಲ್ಲಿ ಹೋಗಿ ಮಲ್ಲಿಗೆಯನು ತರುವೆನು : ನೇಹಕೆಂದು ನಲುಮೆಗೊಂದು ಗುರುತನಿರಿಸಿ ಬರುವೆನು. ಹೋದಮೇಲೆ ಸುತ್ತಬೇಕು ಏಳು ಕೋಟೆ ದ್ವಾರವು ! ಹಾದಿಯಲ್ಲಿ ತೀರದಂಥ ದುಃಖವಿಹುದಪಾರವು ! ಸಾಧಿಸುತ್ತ ಜಯಿಸುವುದೇ ಬಾಳುವುದರ ಸಾರವು ! ಇಲ್ಲಿ Read More

ರಮಾ ಸಮುದ್ರನ ಕುಮಾರಿ

ರಚನೆ : ಕಮಲೇಶ ವಿಠಲ (ರಾಜಾ ಎಸ್. ಗುರುರಾಜಾಚಾರ್) ಗಾಯಕ : ವಿದ್ಯಾಭೂಷಣ ಹಾಡು ಕೇಳಿ:- ರಮಾ ಸಮುದ್ರನ ಕುಮಾರಿ ನಿನ್ನಯ ಸಮಾನರಾರಮ್ಮ||ಪಲ್ಲವಿ|| ಸುಮಾಸ್ತ್ರನಯ್ಯನ ಎದೆಯಲಿ ಸತತವೂ ಅಭಿಮಾನದಲಿ ಮೆರೆವ ಮಹಾಮಹಿಮಳೇ ||ಅನು|| ಕನಕ ಮುಕುಟ ಮಂಡಿತ ಕುಟಿಲಾಳಕಜಾಲೇ | ಶ್ರೀ ಚಂ ದನ ಕುಂಕುಮ ಕಸ್ತೂರಿ ತಿಲಕಾಂಕಿತ ಫಾಲೇ| ಮಣಿಮಯ ಕುಂಡಲ ಶೋಭಿತ ಕರ್ಣಕಪೋಲೇ| Read More

ಅವತರಿಸು ಬಾ

ಕವಿ : ಅಂಬಿಕಾತನಯದತ್ತ ಕವನ ಸಂಕಲನ : ಹೃದಯ ಸಮುದ್ರ ೧ ಅವತರಿಸು ಬಾ ನಾರಾಯಣಾ ಎತ್ತೆನ್ನ ಮೇಲಕೆ ಚಿದ್ಘನಾ ಈ ಜೀವವಾಗಲಿ ಪಾವನಾ ೨ ಈ ಪ್ರಾಣ ತನು ಮನ ದೇವನಾ ಹಗಲಿರುಳು ಮಾಡಲಿ ಸೇವನಾ ಅಗಹುದು ಭಗವಜ್ಜೀವನಾ ೩. ಅತ್ಯಂತ ನಿರ್ಮಲ ಪ್ರೇಮವು ಅದು ಸಹಜ ಜೀವನ ಧಾಮವು ಅಲ್ಲಿರುವ ಅನ್ನವೆ ಸೋಮವು