ರಮಾ ಸಮುದ್ರನ ಕುಮಾರಿ

ರಚನೆ : ಕಮಲೇಶ ವಿಠಲ (ರಾಜಾ ಎಸ್. ಗುರುರಾಜಾಚಾರ್) ಗಾಯಕ : ವಿದ್ಯಾಭೂಷಣ ಹಾಡು ಕೇಳಿ:- ರಮಾ ಸಮುದ್ರನ ಕುಮಾರಿ ನಿನ್ನಯ ಸಮಾನರಾರಮ್ಮ||ಪಲ್ಲವಿ|| ಸುಮಾಸ್ತ್ರನಯ್ಯನ ಎದೆಯಲಿ ಸತತವೂ ಅಭಿಮಾನದಲಿ ಮೆರೆವ ಮಹಾಮಹಿಮಳೇ ||ಅನು|| ಕನಕ ಮುಕುಟ ಮಂಡಿತ ಕುಟಿಲಾಳಕಜಾಲೇ | ಶ್ರೀ ಚಂ ದನ ಕುಂಕುಮ ಕಸ್ತೂರಿ ತಿಲಕಾಂಕಿತ ಫಾಲೇ| ಮಣಿಮಯ ಕುಂಡಲ ಶೋಭಿತ ಕರ್ಣಕಪೋಲೇ| Read More

ಅವತರಿಸು ಬಾ

ಕವಿ : ಅಂಬಿಕಾತನಯದತ್ತ ಕವನ ಸಂಕಲನ : ಹೃದಯ ಸಮುದ್ರ ೧ ಅವತರಿಸು ಬಾ ನಾರಾಯಣಾ ಎತ್ತೆನ್ನ ಮೇಲಕೆ ಚಿದ್ಘನಾ ಈ ಜೀವವಾಗಲಿ ಪಾವನಾ ೨ ಈ ಪ್ರಾಣ ತನು ಮನ ದೇವನಾ ಹಗಲಿರುಳು ಮಾಡಲಿ ಸೇವನಾ ಅಗಹುದು ಭಗವಜ್ಜೀವನಾ ೩. ಅತ್ಯಂತ ನಿರ್ಮಲ ಪ್ರೇಮವು ಅದು ಸಹಜ ಜೀವನ ಧಾಮವು ಅಲ್ಲಿರುವ ಅನ್ನವೆ ಸೋಮವು

ಒಲ್ಲನೋ ಹರಿ ಕೊಳ್ಳನೋ

ಒಲ್ಲನೋ ಹರಿ ಕೊಳ್ಳನೋ ||ಪ|| ಎಲ್ಲ ಸಾಧನವಿದ್ದು ತುಳಸಿ ಇಲ್ಲದ ಪೂಜೆ ||ಅನು|| ಸಿಂಧು ಶತಕೋಟಿ ಗಂಗೋದಕವಿದ್ದು | ಗಂಧ ಸುಪರಿಮಳ ವಸ್ತ್ರವಿದ್ದು || ಚಂದುಳ್ಳ ಆಭರಣ ಧೂಪ ದೀಪಗಳಿದ್ದು | ಬೃಂದಾವನ ಶ್ರೀ ತುಳಸಿ ಇಲ್ಲದ ಪೂಜೆ ||೧|| ದಧಿಕ್ಷೀರ ಮೊದಲಾದ ಅಭಿಷೇಕಗಳಿದ್ದು| ಮಧುಪರ್ಕ ಪಂಚೋಪಚಾರವಿದ್ದು|| ಮುದದಿಂದ ಮುದ್ದು ಶ್ರೀಕೃಷ್ಣನ ಪೂಜೆಗೆ| ಸದಮಲಳಾದ ಶ್ರೀತುಳಸಿ Read More

ಹೇ ಆತ್ಮ ತಮೋಹಾರಿ !

ಕವಿ – ಕುವೆಂಪು ಗಾಯಕಿ – ರತ್ನಮಾಲಾ ಪ್ರಕಾಶ್ ಹಾಡು ಕೇಳಿ:- ಅಂತರತಮ ನೀ ಗುರು ಹೇ ಆತ್ಮ ತಮೋಹಾರಿ ಜಟಿಲ ಕುಟಿಲ ತಮ ಅಂತರಂಗ ಬಹು ಭಾವ ವಿಪಿನ ಸಂಚಾರಿ ಜನುಮ ಜನುಮ ಶತ ಕೋಟಿ ಸಂಸ್ಕಾರ ಪರಮ ಚರಮ ಸಂಸ್ಕಾರಿ ಪಾಪ ಪುಣ್ಯ ನಾನಾ ಲಲಿತ ರುದ್ರ ಲೀಲ ರೂಪ ಅರೂಪ ವಿಹಾರಿ

ಉಯ್ಯಾಲೆ – ದೋಣಿಯೊಳಗೆ ನೀನು

ಚಿತ್ರ : ಉಯ್ಯಾಲೆ ರಚನೆ : ಆರ್. ಎನ್. ಜಯಗೋಪಾಲ್ ಸಂಗೀತ : ವಿಜಯ ಭಾಸ್ಕರ್ ಗಾಯಕಿ : ಪಿ. ಸುಶೀಲ ಹಾಡು ಕೇಳಿ:- ದೋಣಿಯೊಳಗೆ ನೀನು ಕರೆಯ ಮೇಲೆ ನಾನು ಈ ಮನದ ಕರೆಯು ನಿನಗೆ ಕೇಳದೇನು? ಬೀಸುವ ತಂಗಾಳಿಯು ತಂಪೆರೆಯುವ ಬದಲು ದೋಣಿಯ ಬಹುದೂರಕೆ ಕರೆದೊಯ್ಯುತಿರುವುದು ಇರುಳಿನೊಲು ತೋರುತಿದೆ ಈ ನಡುಹಗಲು ಕಾಮನಬಿಲ್ಲಿಹುದು Read More