ಕೃಷ್ಣನ ಕಂಡಿರಾ? – ಬನ್ನಂಜೆ ಗೋವಿಂದಾಚಾರ್ಯ

ರಚನೆ : ಬನ್ನಂಜೆ ಗೋವಿಂದಾಚಾರ್ಯ ಗಾಯನ : ವಿದ್ಯಾಭೂಷಣ ಹಾಡು ಕೇಳಿ ಉಡುಪಿಯ ಕಂಡೀರಾ? ಉಡುಪಿಯ ಕೃಷ್ಣನ ಕಂಡೀರಾ? ಕೃಷ್ಣನ ಕಂಡೀರಾ? ಕೃಷ್ಣನ ಉಡುಪಿಯ ಕಂಡೀರಾ? ಜಗದೊಡೆಯ ಬಂದ ಉಡುಪಿಯಲಿ ನಿಂದ ಪಡುಗಡಲ ದಾರಿಯಿಂದ ಮಿಗಿಲುಂಟೇ ಚಂದ ಕಣ್ಗಳಾನಂದ ಆನಂದಕಂದನಿಂದ ದ್ವಾರಕೆಯ ವಾಸ ಓ ಹೃಷಿಕೇಶ ಸಾಕೆನಿಸಿತೇನೋ ಈಶ? ವಾರಿಯಲಿ ಬಂದೆ ದಾರಿಯಲಿ ನಿಂದೆ ನೀ Read More

ಏಕೆನ್ನ ಈ ರಾಜ್ಯಕ್ಕೆಳೆತಂದೆ?

ರಾಗ: ತೋಡಿ ತಾಳ: ದೀಪ್ ಚಂಡಿ ಏಕೆನ್ನ ಈ ರಾಜ್ಯಕ್ಕೆಳೆತಂದೆ ಹರಿಯೇ ಸಾಕಲಾರದೆ ಎನ್ನ ಏಕೆ ಪುಟ್ಟಿಸಿದೆ ಎನ್ನ ಕುಲದವರಿಲ್ಲ ಎನಗೊಬ್ಬ ಹಿತರಿಲ್ಲ ಮನ್ನಿಸುವ ದೊರೆಯಿಲ್ಲ ಮನಕೆ ಹಿತವಿಲ್ಲ ಹೊನ್ನುಚಿನ್ನಗಳಿಲ್ಲ ಒಲಿಸಿಕೊಂಬುವರಿಲ್ಲ ಇನ್ನಿಲ್ಲಿ ತರವಲ್ಲ ಇಂದಿರೇಶನೆ ಬಲ್ಲ ದೇಶ ಪರಿಚಯವಿಲ್ಲ ದೇಹದೊಳು ಬಲವಿಲ್ಲ ವಾಸಿಪಂಥಗಳೆಂಬೊ ಒಲುಮೆ ಎನಗಿಲ್ಲ ಬೇಸರ ಕಳೆವರಿಲ್ಲ ಬೇರೆ ಹಿತಜನರಿಲ್ಲ ವಾಸುದೇವನೆ ಬಲ್ಲ Read More

ಸರ್ವಜ್ಞ ಪ್ರತಿಮೆ ಅಯನಾವರಂನಲ್ಲಿ ಯಾಕೆ ಬೇಡ?

(ವೆಬ್ ದುನಿಯದಲ್ಲಿ ಪ್ರಕಟವಾಗಿರುವ ಲೇಖನ, ಲೇಖಕ : ಬಿ. ಅವಿನಾಶ್ ) ಇದು ಬೆಂಗಳೂರಿನಲ್ಲಿ ತಿರುವಳ್ಳುವರ್ ಪ್ರತಿಮೆ ಸ್ಥಾಪನೆಗೆ ಅಥವಾ ಚೆನ್ನೈಯಲ್ಲಿ ಸರ್ವಜ್ಞ ಕವಿಯ ಪ್ರತಿಮೆ ಸ್ಥಾಪನೆಯನ್ನು ವಿರೋಧಿಸುವ ಲೇಖನ ಅಲ್ಲ ಎಂಬುದನ್ನು ಓದುಗರು ಅರ್ಥೈಸಿಕೊಂಡೇ ಮುಂದುವರಿಯಲು ಅರಿಕೆ. ಮೊದಲನೆಯದಾಗಿ, ಪ್ರತಿಮಾ ಸಂಸ್ಕೃತಿ ಕರ್ನಾಟಕದಲ್ಲಿ ಕಡಿಮೆ. ಅದೇನಿದ್ದರೂ, ದೇವರನ್ನು ವಿರೋಧಿಸುವ ದ್ರಾವಿಡರ ನಾಡಿನಲ್ಲಿ ದೇವಾಲಯಗಳ ಸಂಖ್ಯೆ Read More

ಒಂದು ಮುಂಜಾವು – ಚೆನ್ನವೀರ ಕಣವಿ

ಸಾಹಿತ್ಯ: ಚೆನ್ನವೀರ ಕಣವಿ ಸಂಗೀತ: ಸಿ. ಅಶ್ವಥ್ ಗಾಯಕಿ: ಬಿ.ಆರ್.ಛಾಯ ಆಲ್ಬಮ್ : ಭಾವಬಿಂದು ಹಾಡು ಕೇಳಿ ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ ‘ಸೋ ‘ಎಂದು ಶ್ರುತಿ ಹಿಡಿದು ಸುರಿಯುತ್ತಿತ್ತು ; ಅದಕೆ ಹಿಮ್ಮೇಳವೆನೆ ಸೋಸಿ ಬಹ ಸುಳಿಗಾಳಿ ತೆಂಗು ಗರಿಗಳ ನಡುವೆ ನುಸುಳುತ್ತಿತ್ತು. ಇಳೆವೆಣ್ಣು ಮೈದೊಳೆದು ಮಕರಂದದರಿಶಿಣದಿ ಹೂ ಮುಡಿದು ಮದುಮಗಳ ಹೋಲುತಿತ್ತು Read More

ಹೂವು ಹೊರಳುವುವು ಸೂರ್ಯನ ಕಡೆಗೆ

ಕವಿ : ಚನ್ನವೀರ ಕಣವಿ ಹೂವು ಹೊರಳುವುವು ಸೂರ್ಯನ ಕಡೆಗೆ ನಮ್ಮ ದಾರಿ ಬರಿ ಚಂದ್ರನವರೆಗೆ ಇರುಳಿನ ಒಡಲಿಗೆ ದೂರದ ಕಡಲಿಗೆ ಮುಳುಗಿದಂತೆ ದಿನ ಬೆಳಗಿದಂತೆ ಹೊರ ಬರುವನು ಕೂಸಿನ ಹಾಗೆ ಜಗದ ಮೂಸೆಯಲಿ ಕರಗಿಸಿ ಬಿಡುವನು ಎಲ್ಲ ಬಗೆಯ ಸರಕು ಅದಕೆ ಅದರ ಗುಣ ದೋಷಗಳಂಟಿಸಿ ಬಿಡಿಸಿ ಬಿಟ್ಟ ತೊಡಕು ಗಿಡದಿಂದುರುವ ಎಲೆಗಳಿಗೂ ಮುದ Read More