ಕೊಡು ಬೇಗ ದಿವ್ಯಮತಿ

ಹಾಡು ಕೇಳಿ ಕೊಡು ಬೇಗ ದಿವ್ಯಮತಿ ಸರಸ್ವತಿ ||ಪಲ್ಲವಿ|| ಮೃಡ ಹರಿ ಹಯಮುಖರೊಡೆಯಳೆ ನಿನ್ನ ಅಡಿಗಳಿಗೆರಗುವೆ ಅಮ್ಮಾ ಬ್ರಹ್ಮನ ರಾಣಿ||ಅನು ಪಲ್ಲವಿ|| ಇಂದಿರಾ ರಮಣನ ಹಿರಿಯ ಸೊಸೆಯು ನೀನು ಬಂದೆನ್ನ ವದನದಿ ನಿಂದು ನಾಮವ ನುಡಿಸೆ||೧|| ಅಖಿಲ ವಿದ್ಯಾಭಿಮಾನಿ ಅಜನ ಪಟ್ಟದ ರಾಣಿ ಸುಖವಿತ್ತು ಪಾಲಿಸೆ ಸುಜನ ಶಿರೋಮಣಿ||೨|| ಪತಿತ ಪಾವನೆ ನೀನೇ ಗತಿಯೆಂದು ನಂಬಿದೆ Read More

ತಿರುಪತಿ ವೆಂಕಟರಮಣ, ನಿನಗೇತಕೆ ಬಾರದು ಕರುಣ?

ಪುತ್ತೂರು ನರಸಿಂಹನಾಯಕರ ದನಿಯಲ್ಲಿ ತಿರುಪತಿ ವೆಂಕಟರಮಣ ನಿನಗೇತಕೆ ಬಾರದೊ ಕರುಣ ನಂಬಿದೆ ನಿನ್ನಯ ಚರಣ ಪರಿಪಾಲಿಸಬೇಕೋ ಕರುಣ ಅಳಗಿರಿಯಿಂದಲಿ ಬಂದ ಸ್ವಾಮಿ ಅಂಜನ ಗಿರಿಯಲಿ ನಿಂದ ಕೊಳಲನೂದುವ ಚಂದ ನಮ್ಮ ಕುಂಡಲರಾಯ ಮುಕುಂದ ಬೇಟೆಯಾಡುತ ಬಂದ ಸ್ವಾಮಿ ಬೆಟ್ಟದ ಮೇಲೆ ನಿಂದ ವೀಟುಗಾರ ಗೋವಿಂದ ಅಲ್ಲಿ ಜೇನು ಸಕ್ಕರೆಯನು ತಿಂದ ಮೂಡಲಗಿರಿಯಲಿ ನಿಂದ ಮುದ್ದು ವೆಂಕಟಪತಿ Read More

ಒಡೆದು ಬಿದ್ದ ಕೊಳಲು – ಗೋಪಾಲ ಕೃಷ್ಣ ಅಡಿಗ

ಒಡೆದು ಬಿದ್ದ ಕೊಳಲು ನಾನು, ನಾದ ಬರದು ನನ್ನಲಿ; ವಿನೋದವಿರದು ನನ್ನಲಿ. ಕಿವಿಯನೇಕೆ ತೆರೆಯುತಿರುವೆ? ಎದೆಯೊಳೇನ ಬಯಸುತಿರುವೆ? ದೊರೆಯದೇನೂ ನನ್ನಲಿ! ನಲ್ಲೆ ಬಂದು ತುಟಿಗೆ ಕೊಳಲ ನೊತ್ತಿ ಉಸುರ ಬಿಟ್ಟಳು; ತನ್ನ ಒಲವಿನಿಂದ್ರಧನುವ ಹರಿದು ಇಳಿದು ಬಿಟ್ಟಳು; ಬಣ್ಣ ಬಣ್ಣದೆನಿತೋ ಹಾಡ ನಿಲ್ಲಿ ಚೆಲ್ಲಿ ಕೊಟ್ಟಳು. ಹಾಡಿ ಹಾಡಿ ಬೇಸರಾಗಿ ನೆಲಕೆಸೆದಳು ಕೊಳಲನು; ಇಂದು ಮೌನದುಸುಬಿನಲ್ಲಿ Read More

ನೀರೆ ತೋರೆಲೆ ನೀಲವರ್ಣದ ದೇವನ

ರಚನೆ – ವಾದಿರಾಜರು ವಿದ್ಯಾಭೂಷಣರ ದನಿಯಲ್ಲಿ ನೀರೆ ತೋರೆಲೆ ನೀರೆ ತೋರೆಲೆ ನೀಲವರ್ಣದ ದೇವನ ಭಾಮೆ ತೋರೆಲೆ ಭಾಮೆ ತೋರೆಲೆ ಬಾಲ ಉಡುಪಿಯ ಕೃಷ್ಣನ || ಕಡೆವ ಕಡೆಗೋಲು ನೇಣು ಸಹಿತಲಿ ಕಡಲಿನೊಳಗಿಂದ ಬಂದನ ಬಿಡದೆ ಭಕ್ತರ ಒಡನೆ ಪಾಲಿಪ ರಂಗ ಉಡುಪಿಯ ಕೃಷ್ಣನ|| ಮುದ್ದುಮುಖದವ ಮೂರು ಜಡೆಯಲಿ ಇದ್ದ ಉಡುಪಿಯ ಸ್ಥಳದಲಿ ಒದ್ದು ಶಕಟನ Read More

ನಿನ್ನ ಕರುಣೆಗೆ – ಚೆನ್ನವೀರ ಕಣವಿ

ನಿನ್ನ ಕರುಣೆಗೆ ನಾನು ಕೇಂದ್ರವಾಗಿ ನಿಂದಿರುವೆ ಮೌನದಲಿ ತಲೆಯ ಬಾಗಿ ಮುಗಿಲಿಂದ, ಹಗಲಿಂದ, ಇರುಳಿಂದ ಬಂದು ಮುಗಿಯದಾವುದೊ ಮಹಾದ್ಭುತವ ತಂದು, ಬದುಕು ಪೊರೆ ಪೊರೆ ಬಿಚ್ಚಿ ಹದಗೊಳಿಸಲೆಂದು ಒಳಗು ಹೊರಗೂ ತುಂಬಿ ತುಳುಕಿರುವೆ ಇಂದು. ಅಂಜುವೆನು, ಅಳುಕುವೆನು ಅಷ್ಟಿಷ್ಟಕೆಲ್ಲ ಮಂಜು ಮುಗಿಬೀಳುವುದು ಭೂಮಿ ಬಾನೆಲ್ಲ: ಹಿಂಜುವುದು ನೇಸರನ ನೂರಾರು ಕಿರಣ ಜೇಡಬಲೆ ತುಂಬೆಲ್ಲ ಮುತ್ತಿನಾಭರಣ. ಒಂದೊಂದು Read More