ತನುವಿನೊಳಗೆ ಅನುದಿನವಿದ್ದು

ತನುವಿನೊಳಗೆ ಅನುದಿನವಿದ್ದು ಎನಗೊಂದು ಮಾತ ಪೇಳದೆ ಪೋದೆ ಹಂಸ || ಪ|| ಜಾಳಾಂದ್ರವೆಂಬದು ಒಂಬತ್ತು ಬಾಗಿಲ ಮನೆ ರೂವಾರವೆಂಬ ಒಂಬತ್ತು ಬಾಗಿಲ ದಾಟಿ ಗಾಳಿ ತಂಪಿನೊಳಿದ್ದು ತಾನು ಹಾರಿ ಪೋಪಾಗ ಕಾಯಕೆ ಹೇಳದೆ ಹೋಯಿತು ಒಂದು ಮಾತ  ||-1|| ಹಳ್ಳ ಕೊಳ್ಳಗಳಲಿ ತಂಪಿನ ತಡಿಯಲಿ ಬಳ್ಳಿ ಕಾಯಿಗಾತು ಫಲವಾಯಿತು ಒಳ್ಳೆಯ ತನಿಹಣ್ಣು ಉದುರಿ ತಾ ಪೋಪಾಗ Read More

ವೇಣಿ ಮಾಧವನ ತೋರಿಸೆ – ವಾದಿರಾಜರು

ವೇಣಿ ಮಾಧವನ ತೋರಿಸೆ ಜಾಣೆ ತ್ರಿವೇಣಿ ಕಾಣದೆ ನಿಲ್ಲಲಾರೆನೆ||ಪಲ್ಲವಿ|| ಕಾಣುತ ಭಕ್ತರ ಕರುಣದಿ ಸಲಹುವ ಜಾಣೆ ತ್ರಿವೇಣಿ ಸಾರೆ ಸುಖವಾಣಿ||ಅನುಪಲ್ಲವಿ|| ಬಂದೆನೆ ಬಹಳ ದೂರದಿ ಭವಸಾಗರ ತರಣಿ ನಿಂದೆನೆ ನಿನ್ನ ತೀರದಿ ಒಂದು ಗಳಿಗೆ ಹರಿಯ ಅಗಲಿ ನಾನಿರಲಾರೆ ಮಂದಗಮನೆ ಎನ್ನ ಮುಂದಕೆ ಕರೆಯೆ ||೧|| ಶರಣಾಗತರ ಪಾಲಿಪುದು ತರಳೆ ನಿನ್ನ ಬಿರುದು ಕರುಣದಿಂದೆನ್ನ ಪೊರೆಯೆ Read More

ಜಗವೆಲ್ಲ ಮಲಗಿರಲು – ದ.ರಾ.ಬೇಂದ್ರೆ

ಜಗವೆಲ್ಲ ಮಲಗಿರಲು ಇವನೊಬ್ಬನೆದ್ದ ; ಮಡದಿ ಮಗು ಮನೆ – ಮಾರು ರಾಜ್ಯ – ಗೀಜ್ಯ ಹೊತ್ತಿರುವ ಉರಿಯಲಿ ಆಯಿತಾಜ್ಯ ಹಿಂದೆ ಬಿದ್ದವು ಎಲ್ಲೋ ಕುದುರೆ ಕಾಲಾಳು ಬಿಚ್ಚಿ ಉದಿರಿತು ಎಲ್ಲೋ ಮನದ ಬಾಳು ಹೊರಟ ಹೊರಟೇ ಹೊರಟ, ಹೊರಟನೆತ್ತೋ ಸಾಹಸಿಯ ಗೊತ್ತುಗುರಿ ಅವಗು ಗೊತ್ತೋ ! ಕಾಮ – ಕ್ರೋಧವ ದಾಟಿ, ಮದ – Read More

ಯಾವ ಜನ್ಮದ ಕೆಳೆಯೊ ಕಾಣೆನು – ಮಹಾತ್ಯಾಗ

ಕವಿ –   ಡಾ. ವಿ. ಸೀತಾರಾಮಯ್ಯ( ‘ವಿ.ಸೀ’) ಚಿತ್ರ – ಮಹಾತ್ಯಾಗ ಗಾಯಕಿ – ಪಿ. ಸುಶೀಲ ಯಾವ ಜನ್ಮದ ಕೆಳೆಯೊ ಕಾಣೆನು ಕಂಡ ಕೂಡಲೆ ಒಲಿಸಿತು ಕಣ್ಗೆ ರೂಪವು ಇಳಿವ ಮುನ್ನವೆ ಎದೆಗೆ ಪ್ರೇಮವು ಹರಿಯಿತು ಯಾವ ತಾಯಿಯೊ ಯಾವ ತಂದೆಯೊ ಯಾವ ದೇಶವೊ ನುಡಿಗಳೊ ಎಂತೊ ಎಲ್ಲೋ ಕಾದಕಾವುಗಳಿತ್ತಲೆಮ್ಮನು ಬೆಸೆದವು || 1 Read More

ಭಕುತಿ ಸುಖವೊ ರಂಗ ಮುಕುತಿ ಸುಖವೊ?

ರಚನೆ: ವಿಜಯದಾಸರು ಭಕುತಿ ಸುಖವೊ ರಂಗ ಮುಕುತಿ ಸುಖವೊ ಭಕುತಿ ಸುಖವೊ ಮುಕುತಿ ಸುಖವೊ, ಯುಕುತಿವಂತರೆಲ್ಲ ಹೇಳಿ ||ಪಲ್ಲವಿ|| ಭಕುತಿ ಮಾಡಿದ ಪ್ರಹ್ಲಾದ ಮುಕುತಿಯನ್ನು ಪಡೆದುಕೊಂಡ ಮುಕುತಿ ಬೇಡಿದ ಧ್ರುವರಾಯ ಭಕುತಿಯಿಂದ ಹರಿಯ ಕಂಡ||-೧-|| ಭಕುತಿ ಮಾಡಿದ ಅಜಾಮಿಳನು ಅಂತ್ಯದಲ್ಲಿ ಹರಿಯ ಕಂಡ ಮುಕುತಿಯನು ಬೇಡಿದ ಕರಿರಾಜ ದುರಿತಗಳನು ಕಳೆದುಕೊಂಡ ||-೨-|| ಭಕುತಿ-ಮುಕುತಿದಾತ ನಮ್ಮ ಲಕುಮಿ Read More