ಒಡವೆಗಳು – ಕುವೆಂಪು
ಚಿನ್ನದ ಒಡವೆಗಳೇತಕೆ ಅಮ್ಮಾ?ತೊಂದರೆ ಕೊಡುವುವು ಬೇಡಮ್ಮಾ!ಬಣ್ಣದ ಬಟ್ಟೆಗಳೇತಕೆ ಅಮ್ಮಾ?ಮಣ್ಣಿನೊಳಾಡಲು ಬಿಡವಮ್ಮಾ! ‘ಚಂದಕೆ, ಚಂದಕೆ’ ಎನ್ನುವೆಯಮ್ಮಾ!ಚಂದವು ಯಾರಿಗೆ ಹೇಳಮ್ಮಾ?ನೋಡುವರಿಗೆ ಚಂದವು, ಆನಂದ;ಆಡುವ ಎನಗಿದು ಬಲು ಬಂಧ! ನನ್ನೀ ಶಿಶುತನ ನಿನ್ನೀ ತಾಯ್ತನಎರಡೇ ಒಡವೆಗಳೆಮಗಮ್ಮಾ:ನಾ ನಿನಗೊಡವೆಯು; ನೀ ನನಗೊಡವೆಯು;ಬೇರೆಯ ಒಡವೆಗಳೇಕಮ್ಮಾ? – ಕುವೆಂಪು