ನಿನಗಾಗಿ

ಕಲ್ಪನೆ ಕುಂಚವ ಭಾವದಿ ಹೊರಳಿಸಿ ರಚಿಸಲು ಕುಳಿತೆನು ನುಡಿಚಿತ್ರ ಹೃದಯದಿ ತುಂಬಿದ ಒಲುಮೆಯೆ ಬರೆಸಿದೆ ನಿನಗಾಗೆಂದೇ ಈ ಪತ್ರ ತೂರುತ ಬರುವ ಮುಳ್ಳಿನ ಮಾತಿಗೆ ಸಾತ್ವಿಕ ನಡತೆಯ ಬಿಳಿಹೂವು ನಕಾರ ಯೋಚನೆ ಸನಿಹ ಬರದಂತೆ ರೋಗ ನಿರೋಧಕ ಕಹಿಬೇವು ಉಕ್ಕುತ ಬಿಕ್ಕುತ ಸೊಕ್ಕುತ ಬರುವ ಆವೇಗದ ಬೆಂಕಿಯ ತಡೆವ ಕೂಲ್ ಗಾಜು ಮೃದುಮನ ನರಳಿಸೊ ನೆತ್ತರ Read More

ಸ್ವಗತ

ಕೋಟ್ಯಾಧಿಪತಿಯು ನಾನು ಬಹುಮಹಡಿ ಬಂಗಲೆಯು ಚಿನ್ನ, ಒಡವೆಗಳಿಂದ ತುಂಬಿತುಳುಕಾಡುವ ತಿಜೋರಿ ಬ್ಯಾಂಕಿನಲ್ಲಿಯೂ ಉಂಟು ರಾಶಿ ಹಣದ ಗಂಟು ಇಷ್ಟಿದ್ದೂ ಹೀಗೇಕಿಲ್ಲಿ ಮಲಗಿಹೆನು ಬರಿ ನೆಲದ ಮೇಲೆ? ಹಾಸಿಗೆ, ಹೊದಿಕೆಗಳೆಲ್ಲಿ? ಹಕ್ಕಿ ಗರಿಗಿಂತಲೂ ಮೃದುವಾಗಿದ್ದ ನನ್ನ ಸುಪ್ಪತ್ತಿಗೆಯೀಗ ಹೋಯಿತೆಲ್ಲಿ? ಎಲ್ಲಿ ಹೋಗಿಹರೋ ಎಲ್ಲಾ ? ಹೆಂಡತಿ, ಮಕ್ಕಳು, ನೆಂಟರಿಷ್ಟರು ; ಸುತ್ತಲೂ ಮುತ್ತಿದ್ದ ಆಳುಕಾಳುಗಳು? ಕಗ್ಗತ್ತಲೆಯಲಿ, ಕೊರೆವ Read More

ಕಾಡ ಬೆಳದಿಂಗಳು – ಕತ್ತಲೆ ಬೆಳದಿಂಗಳು

ರಚನೆ : ಶ್ರೀಪಾದರಾಜರು ಗಾಯಕ : ವಿದ್ಯಾಭೂಷಣ ಕಾಡ ಬೆಳದಿಂಗಳು ಈ ಸಂಸಾರ ಕತ್ತಲೆ ಬೆಳದಿಂಗಳು ||ಪಲ್ಲವಿ|| ಉಂಟಾದ ಕಾಲಕ್ಕೆ ನೆಂಟರು ಇಷ್ಟರು ಬಂಟರಾಗಿ ಬಂದು ಬಾಗಿಲ ಕಾಯ್ವರು ಉಂಟಾದತನ ತಪ್ಪಿ ಬಡತನ ಬಂದರೆ ಒಂಟೆಯಂತೆ ಕತ್ತ ಮೇಲಕೆ ಎತ್ತುವರು ||೧|| ಏರುವ ದಂಡಿಗೆ ನೂರಾಳು ಮಂದಿಯು ಮೂರು ದಿನದ ಭಾಗ್ಯ ಝಣಝಣವು ಮೂರಾರು ಸಾವಿರ Read More

ದಾರಿ

ಈ ತುದಿಯಲ್ಲಿ ಕಾಯುತ್ತಿದ್ದೇವೆ ನಾವಿನ್ನೂ ನಮ್ಮ ಸರದಿಗಾಗಿ ಕಣ್ಣುಗಳಲ್ಲಿ ಅಳಿದುಳಿದ ಆಸೆಯ ಕುರುಹು ನೋಟ ಹರಿಯುವ ಉದ್ದಕ್ಕೂ ಮೈಚಾಚಿ ಮಲಗಿದೆ ದಾರಿ ಯಾರೂ ಅರಿಯದ ಗುಟ್ಟು ತನ್ನಲ್ಲೇ ಬಚ್ಚಿಟ್ಟು ನಿರ್ಲಿಪ್ತ ಮೌನದಲಿ. ಯಾರೋ ಇಳಿಯುತ್ತಾರೆ ಮತ್ತಾರೋ ಏರುತ್ತಾರೆ ಅತ್ತಿತ್ತ ಹರಿಯುವ ಬಂಡಿಗೆ ಪಯಣಿಗರ ಸುಖ-ದುಃಖಗಳರಿವಿಲ್ಲ ಅದರದು ನಿಲ್ಲದ ನಿತ್ಯ ಪಯಣ. ಅಹಂ ಅಳಿದ ಮರುಕ್ಷಣ ದೂರವೇನಿಲ್ಲ Read More