ನನ್ನ ಪುಟ್ಟ ಪುರಂದರ ವಿಠಲ!

ನಮಃ ಶ್ರೀಪಾದರಾಜಾಯ ನಮಸ್ತೇ ವ್ಯಾಸಯೋಗಿನೇ| ನಮಃ ಪುರಂದರಾರ್ಯಾಯ ವಿಜಯಾರ್ಯಾಯತೇ ನಮಃ || ನಮಿಪೆ ಶ್ರೀಪಾದರಾಯರಿಗೆ ನಮನ ವ್ಯಾಸ ಯೋಗಿಗೆ ಶ್ರೀ ಪುರಂದರ ಗುರುವರಗೆ ಬಳಿಕ ವಿಜಯದಾಸರಿಗೆ ( ಕನ್ನಡಕ್ಕೆ : ನೀಲಾಂಜನ ) ದಾಸಸಾಹಿತ್ಯದಲ್ಲಿ ಪುರಂದರದಾಸರು ಅತ್ಯಂತ ಜನಪ್ರಿಯರು. ೧೩ನೆಯ ಶತಮಾನದಲ್ಲಿ ನರಹರಿತೀರ್ಥರಿಂದ ಪ್ರಾರಂಭವಾದ ದಾಸ ಸಾಹಿತ್ಯ ಪುರಂದರದಾಸರ ಕಾಲದಲ್ಲಿ ವಿಶಾಲವಾಗಿ ಬೆಳೆಯಿತು. ಇವರು ನಾರದರ Read More

ರಥವೋಗದ ಮುನ್ನ ಗೋಕುಲಕೆ

ನಿನ್ನೆ ಏನನ್ನೊ ಹುಡುಕುತ್ತಿದ್ದಾಗ ನನಗೊಂದು ರತ್ನವೇ ಸಿಕ್ಕಿತು. “ರಥವೋಗದ ಮುನ್ನ” ದಾಸ ಸಾಹಿತ್ಯದಲ್ಲಿ ಅಪರೂಪವೆನಿಸುವ ಕೃತಿ. ಶ್ರೀದವಿಠಲರಿಂದ ರಚಿತವಾಗಿರುವ ಈ ಕೀರ್ತನೆಯನ್ನು ಹಿಂದೆಯೂ ಕೇಳಿದ್ದೆ. ಆದರೆ ಈ ಬಾರಿ ರಾಗದ ಹಂಗಿಲ್ಲದೆ, ಹಾಗೆಯೇ ಓದಿಕೊಂಡಾಗ ನವಿರಾದ ಭಾವನೆಗಳಿಂದ ತುಂಬಿರುವ ಭಾವಗೀತೆಯನ್ನು ಸ್ಪರ್ಶಿಸಿದಂತಾಯಿತು. ಈ ಕೀರ್ತನೆಯಲ್ಲಿ, ಕೃಷ್ಣನನ್ನು ಕರೆತರಲು ಹೊರಟಿರುವ ಅಕ್ರೂರನ ಮನೋಲಹರಿ ಭಕ್ತಿರಸದೊಂದಿಗೆ ಹದವಾಗಿ ಬೆರೆತು Read More

ಆನಂದ ಆನಂದ ಮತ್ತೆ ಪರಮಾನಂದ

ಆನಂದ ಆನಂದ ಮತ್ತೆ ಪರಮಾನಂದ ಆನಂದ ಕಂದನೊಲಿಯೆ ಏನಂದಿದ್ದೇ ವೇದ ವೃಂದ ||ಪ|| ಅ ಮೊದಲು ಶಕಾರಂತ ಆ ಮಹಾ ವರ್ಣಗಳೆಲ್ಲಾ ಸ್ವಾಮಿಯಾದ ವಿಷ್ಣುವಿನ ನಾಮವೆಂದು ತಿಳಿದವರಿಗೆ ||೧|| ಜಲ ಕಾಷ್ಟ ಶೈಲ ಗಗನ ನೆಲ ಪಾವಕ ತರು ಫಲ ಪುಷ್ಪಗಳಲ್ಲಿ ಹರಿ ವ್ಯಾಪ್ತನೆಂದರಿತವರಿಗೆ ||೨|| ಪೋಪುದು, ಬರುತಿಪ್ಪುದು, ಕೋಪ ಶಾಂತಿ ಮಾಡುವುದು ರೂಪ ಲಾವಣ್ಯವು Read More

ಗಾದೆಗಳಲ್ಲಿ ರಾಮಾಯಣ, ಮಹಾಭಾರತ

ರಾಮಾಯಣ, ಮಹಾಭಾರತ ಜನಸಾಮಾನ್ಯರ ಬದುಕಿನಲ್ಲಿ ಹಾಸುಹೊಕ್ಕಾಗಿತ್ತು ಎನ್ನಲು ನಮ್ಮಲ್ಲಿ ಬಳಕೆಯಲ್ಲಿರುವ ಕೆಲವು ಗಾದೆಗಳೇ ಸಾಕ್ಷಿ. ಅವುಗಳಲ್ಲಿ ನನಗೆ ತಿಳಿದ ಕೆಲವನ್ನು ಇಲ್ಲಿ ಪಟ್ಟಿ ಮಾಡಲು ಪ್ರಯತ್ನಿಸಿದ್ದೇನೆ. * ’ರಾಮ ರಾಜ ಆದರೂ ರಾಗಿ ಬೀಸೋದು ತಪ್ಪೀತೇ?’- ಯಾರೇ ಅಧಿಕಾರಕ್ಕೆ ಬಂದರೂ, ಜನಸಾಮಾನ್ಯರ ಬದುಕಿನ ಮೇಲೆ ಏನೂ ಪರಿಣಾಮವಾಗದು ಎಂಬುದು ಅಂದಿಗೂ-ಇಂದಿಗೂ ನಿಜವೇ. *’ರಾವಣನ ಹೊಟ್ಟೆಗೆ ಮೂರು Read More

ಪ್ರೇಮದ ಹೂಗಾರ

ಚಿತ್ರ – ಚಿಕ್ಕೆಜಮಾನ್ರು -೧೯೯೨ ಸಾಹಿತ್ಯ ಮತ್ತು ಸಂಗೀತ – ಹಂಸಲೇಖ ಗಾಯಕ – ಎಸ್.ಪಿ.ಬಾಲಸುಬ್ರಹ್ಮಣ್ಯಂ ಚಿತ್ರಕೃಪೆ : ಮೀರಾ ಕೃಷ್ಣ  ಹಾಡು ಕೇಳಿ – ಪ್ರೇಮದ ಹೂಗಾರ ಈ ಹಾಡುಗಾರ ಹೂ ನೀಡುತಾನೆ ಮುಳ್ಳು ಬೇಡುತಾನೆ ಬೆಲ್ಲದ ಬಣಗಾರ ಈ ಹಾಡುಗಾರ ಸಿಹಿ ನೀಡುತಾನೆ ಕಹಿ ಕೇಳುತಾನೆ ಮಣ್ಣಿನ ಮಮಕಾರ ಕಂಪಿರುವ ಮಾನದ ಮಣಿಹಾರ Read More