ಅವನು ಒಳ್ಳೆಯವನು!

ಅಪ್ಪ, ಅಮ್ಮ ನೋಡಿ ಒಪ್ಪಿಕೊಂಡು ಬಂದಿದ್ದ ಹುಡುಗಿಯ ಭಾವಚಿತ್ರ ಈಗ ಮಗನೆದುರಲ್ಲಿತ್ತು. ಅವನು ಅದನ್ನು ಕೈಗೆತ್ತಿಕೊಂಡು ನೋಡಲೇ ಇಲ್ಲ. ಈಗಾಗಲೇ ಮನದಲ್ಲಿ ಮನೆ ಮಾಡಿ ನೆಲೆಸಿದ್ದ ಚೆಲುವೆಯ ನೆನಪನ್ನು ದೂರ ತಳ್ಳಿ ಹೇಳೇಬಿಟ್ಟ – ’ನೀವು ಒಪ್ಪಿದ್ದೀರಿ ತಾನೇ? ಸರಿ ಹಾಗಾದರೆ. ಮದುವೆ ನಿಶ್ಚಯವಾಗಲಿ’ – ಎಂದು ಎದ್ದು ಹೊರನಡೆದ. ಹೆತ್ತವರು ಹಿಗ್ಗಿ ಹೀರೆಕಾಯಾದರು. ನಮ್ಮ Read More

ಎಷ್ಟು ಚಂದವಿರಬಹುದು?

ಎಲ್ಲೋ ಕಗ್ಗತ್ತಲು ತುಂಬಿದ ಕಾಡಲ್ಲಿ ಕತ್ತದುಮಿ, ಉಸಿರುಗಟ್ಟಿಸುವ ಗೂಡಲ್ಲಿ, ಮಾನವೀಯತೆ ಮಾರಿಕೊಂಡ ಕಾಡುಜನಗಳ ನಡುವೆ ಅವಮಾನ, ಆತಂಕ, ನೋವು ತುಂಬಿ ಜಿಗುಟು ಜಿಗುಟಾದ ಕಪ್ಪು ನೆಲದಲ್ಲಿ ಜಾರದಂತೆ ಗಟ್ಟಿಯಾಗಿ ಕಾಲೂರಿ ನಿಂತು ಭರವಸೆಯ ಬೆಳಕಿಗಾಗಿ ದಿಕ್ಕುಗಳೆಡೆಗೆ ಅಸೆ ನೋಟ ಹರಿಸುತ್ತಾ ಮೈ ಮರೆತು ಕಾದುಕೂತು, ಮನದೆಲ್ಲಾ ಮಧುರ ಭಾವನೆಗಳ ಬಂಡವಾಳ ಹೂಡಿ ಸುಂದರ ಕವಿತೆ ಬರೆವ Read More

ಯಾತಕವ್ವಾ ಹುಬ್ಬಳ್ಳಿ-ಧಾರ್‍ವಾಡ! – ಆನಂದಕಂದ

ಕವಿ : ಆನಂದಕಂದ (ಬೆಟಗೇರಿ ಕೃಷ್ಣಶರ್ಮ) ಕವನ ಸಂಕಲನ : ನಲ್ವಾಡುಗಳು -ಪಲ್ಲವಿ- ನಮ್ಮ ಹಳ್ಳಿಯೂರಽ ನಮಗ ಪಾಡಽ- ಯಾತಕವ್ವಾ ಹುಬ್ಬಳ್ಳಿ-ಧಾರ್‍ವಾಡಽ! ೧ ಊರಮುಂದ ತಿಳಿನೀರಿನ ಹಳ್ಳಽ- ಬೇವು ಮಾವು ಹುಲಗಲ ಮರಚೆಳ್ಳಽ- ದಂಡಿಗುಂಟ ನೋಡು ನೆಳ್ಳಽ ನೆಳ್ಳಽ- ನೀರ ತರುವಾಗ ಗೆಣತ್ಯಾರ ಜೋಡಽ. . . ಯಾತಕವ್ವಾ ಹುಬ್ಬಳ್ಳಿ-ಧಾರ್‍ವಾಡಽ— ೨ ನಮ್ಮ ಹಳ್ಳ ಕಾಶಿಯ Read More

ಮಗುವಿಗೊಂದು ಮಗು!

ಕಳೆದ ಭಾನುವಾರ ಯಾವುದೋ ಶಾಪಿಂಗ್ ಮಾಲಿನಲ್ಲಿದ್ದೆವು. ಇದ್ದಕ್ಕಿದ್ದಂತೆ ನಮ್ಮಿಂದ ಸ್ವಲ್ಪ ದೂರದಲ್ಲಿ ಸ್ಟ್ರೋಲರಿನಲ್ಲಿ ಮಲಗಿದ್ದ ಮಗುವೊಂದು ರಚ್ಚೆ ಹಿಡಿದು ಅಳತೊಡಗಿತು. ಅದರ ಜೊತೆಗೆ ಇದ್ದ ಹೆಂಗಸು ಅದನ್ನು ಸಮಾಧಾನಿಸಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಳು. ಆ ಮಗು ಅವಳ ಉಪಾಯಗಳೊಂದಕ್ಕೂ ಜಪ್ಪೆನ್ನದೆ ಉಸಿರುಗಟ್ಟಿಕೊಂಡು ಕಿರುಚಿ ಅಳುತ್ತಿತ್ತು. ಅತ್ತು ಕೆಂಪುಕೆಂಪಾಗಿದ್ದ ಆ ಮಗುವಿನ ಮುಖವನ್ನು ನೋಡಿದರೆ ಅದು ಹುಟ್ಟಿ Read More