ಮೆದುವಾದ ಚಪಾತಿ ಮಾಡುವುದು ಹೇಗೆ?

ಇಲ್ಲಿ ಮೆದುವಾದ ಚಪಾತಿ ಮಾಡುವ ವಿಧಾನವನ್ನು ತಿಳಿಸಿ ಕೊಡುತ್ತಿದ್ದೀನಿ ಅಂತ ಅಂದುಕೊಂಡಿದ್ದರೆ ನಿಮ್ಮ ಊಹೆ ತಪ್ಪು.  ನಾನು ಮೆದುವಾದ ಚಪಾತಿ ಮಾಡುವುದು ಹೇಗೆ ಎಂದು ನಿಮ್ಮನ್ನೇ ಕೇಳ್ತಾ ಇದೀನಿ! ದಕ್ಷಿಣ ಭಾರತೀಯರು ಅಕ್ಕಿಯನ್ನು ಉಪಯೋಗಿಸುವುದರಲ್ಲಿ ಎಲ್ಲರಿಗಿಂತಲೂ ಮುಂದು. ನಾವೂ ಅಷ್ಟೇ. ಅನ್ನ ದೇವರ ಮುಂದೆ ಇನ್ನು ದೇವರಿಲ್ಲ ಎಂದು ನಂಬಿದವರು.  ಅನ್ನ ಕಡಿಮೆ ಮಾಡಿ ಎಂದು ಎಲ್ಲರೂ ಹೇಳೋದು Read More

ರಾಗದಲ್ಲಿ ಕನ್ನಡಕ್ಕೂ ಜಾಗ

ಇಷ್ಟು ವರ್ಷ ಕನ್ನಡ ಬಿಟ್ಟು ಹಿಂದಿಯ ಜೊತೆಗೆ ದಕ್ಷಿಣದ ಉಳಿದೆಲ್ಲಾ ಭಾಷೆಗಳ ಹಾಡುಗಳಿಗೂ ಆತಿಥ್ಯ ನೀಡುತ್ತಿದ್ದ ರಾಗ ಸಂಗೀತ ತಾಣದಲ್ಲಿ ಕೊನೆಗೂ ಕನ್ನಡಕ್ಕೆ ಜಾಗ ಸಿಕ್ಕಿದೆ. ಇದು ಯಾವಾಗಿನಿಂದ ಇದೆಯೋ ಗೊತ್ತಿಲ್ಲ. ನಾನು ನೋಡಿದ್ದು ಇಂದೇ. ತುಂಬಾ ಸಂತೋಷವಾಗುತ್ತಿದೆ. ಕನ್ನಡ ಹಾಡುಗಳಿಗೆ ಉದ್ಭವ, ಕನ್ನಡ ಆಡಿಯೋ, ಮ್ಯುಸಿಕ್ ಇಂಡಿಯಾ ಆಶ್ರಯಿಸುತ್ತಿದ್ದವರಿಗೆ ಈಗ ಕನ್ನಡ ಕೇಳಿ ನಲಿಯಲು Read More

“ಖೋ” ಕಾದಂಬರಿ

ಅಮೆರಿಕಾದ ಇಲಿನಾಯ್ ಕನ್ನಡ ಕೂಟ ‘ವಿದ್ಯಾರಣ್ಯ’ ಎರಡು ತಿಂಗಳಿಗೊಮ್ಮೆ ಹೊರ ತರುತ್ತಿರುವ “ಡಿಂಡಿಮ” ಪತ್ರಿಕೆಯಲ್ಲಿಯೂ ‘ಖೋ ಕಾದಂಬರಿ ಬರೆಯುವ ಪ್ರಯತ್ನ ಈಗ ನಡೆದಿದೆ. ವಿದ್ಯಾರಣ್ಯದ ಕನ್ನಡ ಕೂಟದ ಸದಸ್ಯರಾದ ಪ್ರಕಾಶ್ ಹೇಮಾವತಿಯವರು ಮೊದಲಿಗೆ ’ಬಲೆ’ ಎಂಬ ಹೆಸರಿನಲ್ಲಿ ಕಥೆಯನ್ನು ಪ್ರಾರಂಭಿಸಿದರು. ಅದನ್ನು ಮುಂದುವರೆಸಲು ಕೂಟದ ಇತರ ಸದಸ್ಯರಿಗೆ ಆಹ್ವಾನ ಕೊಡಲಾಯಿತು. ಈಗಾಗಲೇ ಐದು ಭಾಗ ಮುಂದುವರೆದಿದೆ. Read More

ಕಥೆಯ ಕೊನೆಯ ಭಾಗ!

ಐದು ವರ್ಷಗಳ ಬಳಿಕ……………………. ಓಹುರಾ ನ್ಯೂಝೀಲ್ಯಾಂಡಿನಲ್ಲಿರುವ ಒಂದು ಸಣ್ಣ ಊರು. ಅಲ್ಲಿಯೇ ಇರುವ ‘ಸಮೀಉಲ್ಲಾ ಕುರಿ ಫಾರ್ಮ್’ನಲ್ಲಿ ಕುಳಿತುಕೊಂಡು ಭರತ ತನ್ನ ಹತ್ತು ಸಾವಿರ ಕುರಿಗಳನ್ನು ಕಾಯುತ್ತಿದ್ದ. ಅವನ ಸೆಲ್ ಫೋನ್ ರಿಂಗಣಿಸಿತು. ಅತ್ತಲಿಂದ ಕವಿತಾಳ ಧ್ವನಿ ಕೇಳಿಸಿತು. “ಭರತ್, ಬೇಗನೆ ಮನೆಗೆ ಹೋಗಿ ಸ್ಪೆಶಲ್ ಹಯಗ್ರೀವ ಹಾಗು ಬೋಂಡಾ ಸೂಪ್ ಮಾಡಿಡು. ರಾಜೀವ,ಧಾರಿಣಿ,ಪ್ರವಲ್ಲಿಕಾ ಹಾಗು Read More

ಕಥೆ ಬಗ್ಗೆ ಇಲ್ಲಿ ಮಾತಾಡೋಣ.

ಕಥೆಯ ಬೆಳವಣಿಗೆಯನ್ನು ಚರ್ಚಿಸಲು ಇದ್ದ ಆ ದಾರ ಹನುಮನ ಬಾಲದಂತೆ ಉದ್ದವಾಗಿರುವುದರಿಂದ ಈ ಹೊಸ ಎಳೆಯ ಅವತಾರ. ಕಥೆ ಬಗ್ಗೆ ಮಾತಾಡುವುದಲ್ಲದೆ, ಕಥೆಗಾರರ ಜಗಳ, ಕಾಲೆಳತಕ್ಕೂ ಇಲ್ಲಿ ಅವಕಾಶ ಕಲ್ಪಿಸಲಾಗಿದೆ. ಕಥ(ದ)ನ ಮುಂದುವರೆಯಲಿ.