ಹರಿಕಥಾಮೃತಸಾರ – 02 – ಕರುಣಾ ಸಂಧಿ
ಹರಿಕಥಾಮೃತಸಾರ – ಕರುಣಾ ಸಂಧಿ ರಚನೆ : ಶ್ರೀ ಜಗನ್ನಾಥ ದಾಸರು ಹರಿಕಥಾಮೃತಸಾರ ಗುರುಗಳ| ಕರುಣದಿಂದಾಪನಿತು ಪೇಳುವೆ| ಪರಮಭಗವದ್ಭಕ್ತರಿದಾನದರದಿ ಕೇಳುವುದು||ಪ|| ಶ್ರವಣ ಮನಕಾನಂದವೀವುದು | ಭವಜನಿತ ದುಃಖಗಳ ಕಳೆವುದು | ವಿವಿಧ ಭೋಗಗಳಿಹಪರಂಗಳಲಿತ್ತು ಸಲಹುವುದು || ಭುವನ ಪಾವನನೆನಿಪ ಲಕ್ಷ್ಮೀ | ಧವನ ಮಂಗಳ ಕಥೆಯ ಪರಮೋ | ತ್ಸವದಿ ಕಿವಿಗೊಟ್ಟಾಲಿಪುದು ಭೂಸುರರು ದಿನದಿನದಿ || ೧ || ಮಳೆಯ ನೀರೋಣಿಯೊಳು ಪರಿಯಲು | ಬಳಸರೂರೊಳಗಿದ್ದ ಜನರಾ | ಜಲವು ಹೆದ್ದೊರೆಗೂಡೆ ಮಜ್ಜನ ಪಾನ ಗೈದಪರು || ಕಲುಷ […]