ರಚನೆ – ಪುರಂದರದಾಸರು
ವಿದ್ಯಾಭೂಷಣರ ದನಿಯಲ್ಲಿ ಹಾಡು ಕೇಳಿ:-
ಈಸಬೇಕು-ಇದ್ದು ಜೈಸಬೇಕು|
ಹೇಸಿಗೆ ಸಂಸಾರದಲ್ಲಿ ಆಶಾ ಲೇಶ ಮಾಡದ್ಹಾಂಗೆ ||ಪ||
ತಾಮರಸ ಜಲದಂತೆ ಪ್ರೇಮವಿಟ್ಟು ಭವದೊಳು
ಸ್ವಾಮಿ ರಾಮನೆನುತ ಪಾಡಿ ಕಾಮಿತ ಕೈಗೊಂಬರೆಲ್ಲ ||೧||
ಗೇರುಹಣ್ಣಿನಲಿ ಬೀಜ ಸೇರಿದಂತೆ ಸಂಸಾರದಿ|
ಮೀರಿ ಆಸೆ ಮಾಡದ್ಹಾಂಗೆ ಧೀರ ಕೃಷ್ಣನ ಭಕುತರೆಲ್ಲ ||೨||
ಮಾಂಸದಾಸೆಗೆ ಮತ್ಸ್ಯ ಸಿಲುಕಿ ಹಿಂಸೆಪಟ್ಟ ಪರಿಯಂತೆ |
ಮೋಸ ಹೋಗದ್ಹಾಂಗೆ ಜಗದೀಶ ಪುರಂದರವಿಠಲನೆನುತ ||೩||
********************************************
‘ಮಾಂಸದಾಸೆಗೆ ಮತ್ಸ್ಯ ಸಿಲುಕಿ ಹಿಂಸೆಪಟ್ಟ ಪರಿಯಂತೆ’ ಸರಿಯಾಗಿ ಹೇಳಿದ್ದಾರೆ ಪುರಂದರದಾಸರು.