ರಚನೆ: ವಿಜಯದಾಸರು
ಭಕುತಿ ಸುಖವೊ ರಂಗ ಮುಕುತಿ ಸುಖವೊ
ಭಕುತಿ ಸುಖವೊ ಮುಕುತಿ ಸುಖವೊ, ಯುಕುತಿವಂತರೆಲ್ಲ ಹೇಳಿ ||ಪಲ್ಲವಿ||
ಭಕುತಿ ಮಾಡಿದ ಪ್ರಹ್ಲಾದ ಮುಕುತಿಯನ್ನು ಪಡೆದುಕೊಂಡ
ಮುಕುತಿ ಬೇಡಿದ ಧ್ರುವರಾಯ ಭಕುತಿಯಿಂದ ಹರಿಯ ಕಂಡ||-೧-||
ಭಕುತಿ ಮಾಡಿದ ಅಜಾಮಿಳನು ಅಂತ್ಯದಲ್ಲಿ ಹರಿಯ ಕಂಡ
ಮುಕುತಿಯನು ಬೇಡಿದ ಕರಿರಾಜ ದುರಿತಗಳನು ಕಳೆದುಕೊಂಡ ||-೨-||
ಭಕುತಿ-ಮುಕುತಿದಾತ ನಮ್ಮ ಲಕುಮಿ ಅರಸ ವಿಜಯವಿಠಲ
ಶಕುತನೆಂದು ತಿಳಿದು ನಿತ್ಯ ಭಕುತಿಯಿಂದ ಭಜನೆ ಮಾಡಿರೊ ||-೩-||
It is happy to note that Kannada Kasturi Parimalavu chennagi prasarisuttide. Innu hecchu hecchu prasarisali