ತೂಗಿರೆ ರಾಯರ ತೂಗಿರೆ ಗುರುಗಳ – ಜಗನ್ನಾಥ ದಾಸರು

ತೂಗಿರೆ ರಾಯರ ತೂಗಿರೆ ಗುರುಗಳ ತೂಗಿರೆ ಯತಿಕುಲ ತಿಲಕರ
ತೂಗಿರೆ ಯೋಗಿಂದ್ರ ಕರಕಮಲ ಪೂಜ್ಯರ ತೂಗಿರೆ ಗುರು ರಾಘವೇಂದ್ರರ||

ಕುಂದಣಮಯವಾದ ಚಂದದ ತೊಟ್ಟಿಲದೊಳ್ ಅಂದದಿ ಮಲಗ್ಯಾರೆ ತೂಗಿರೆ
ನಂದಾನಕಂದ ಮುಕುಂದ ಗೋವಿಂದನ ಆನಂದದಿ ಭಜಿಪರ ತೂಗಿರೆ||-1-||

ಯೋಗಾನಿದ್ರೆಯನ್ನು ಬೇಗನೆ ಮಾಡುವ ಯೋಗೀಶವಂದ್ಯರ ತೂಗಿರೆ
ಭೋಗೀಶಯನನ ಪಾದ ಯೋಗದಿ ಭಜಿಪರ ಭಾಗವತರನ್ನ ತೂಗಿರೆ ||-2-||
ನೇಮದಿ ತನ್ನನ್ನು ಕಾಮಿಪ ಜನರಿಗೆ ಕಾಮಿತ ಕೊಡುವವರ ತೂಗಿರೆ
ಪ್ರೇಮದಿ ನಿಜಜನರ ಆಮಾಯವನುಕೂಲ ಧೂಮಕೇತುವೆನಿಪರ ತೂಗಿರೆ ||-3-||

ಭಜಕಜನರು ತಮ್ಮ ಭಜನೆಯ ಮಾಡಲುನಿಜಗತಿಯಿಪ್ಪರ ತೂಗಿರೆ
ನಿಜಗುರುಜಗನ್ನಾಥ ವಿಠಲನ ಪದಕಂಜ ಭಜನೆಯ ಮಾಳ್ಪರ ತೂಗಿರೆ ||-4-||

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Related Posts

ಬಿಳಿಗಿರಿ ರಂಗಯ್ಯ ನೀನೇ ಹೇಳಯ್ಯಾ-ಶರಪಂಜರಬಿಳಿಗಿರಿ ರಂಗಯ್ಯ ನೀನೇ ಹೇಳಯ್ಯಾ-ಶರಪಂಜರ

ಚಿತ್ರ : ಶರಪಂಜರ ಗಾಯಕಿ – ಪಿ.ಸುಶೀಲ ಸಾಹಿತ್ಯ – ಕಣಗಾಲ್ ಪ್ರಭಾಕರ್ ಶಾಸ್ತ್ರಿ ಸಂಗೀತ – ವಿಜಯ ಭಾಸ್ಕರ್ ಬಿಳಿಗಿರಿ ರಂಗಯ್ಯ ನೀನೇ ಹೇಳಯ್ಯಾ ಶ್ರೀರಂಗನಾಯಕಿಯ ಚೆಂದುಳ್ಳಿ ಚೆಲುವಯ್ಯಾ ||ಪಲ್ಲವಿ|| ಮುತ್ತುಗದ ಹೂವು ಮಲ್ಲಿಗೆಯೇ ? ಅತ್ತಿಯ ಹಣ್ಣು ಅಂಜೂರವೇ?

ಬಂದೇವಯ್ಯಾ ಗೋವಿಂದ ಶೆಟ್ಟಿ!ಬಂದೇವಯ್ಯಾ ಗೋವಿಂದ ಶೆಟ್ಟಿ!

ರಚನೆ : ಕನಕದಾಸರು ಬಂದೇವಯ್ಯಾ ಗೋವಿಂದ ಶೆಟ್ಟಿ ನಿಮ್ಮ ಹರಿವಾಣ ತೀರ್ಥ ಪ್ರಸಾದ ಉಂಟೆನಲಾಗಿ ||ಪಲ್ಲವಿ|| ಅಪ್ಪವು ಅತಿರಸ ತುಪ್ಪವು ಬಿಸಿ ಹಾಲು ಒಪ್ಪುವ ಸಕ್ಕರೆ ಯಾಲಕ್ಕಿಯು ಅಪರೂಪವಾದ ಕಜ್ಜಾಯಗಳನೆಲ್ಲ ಛಪ್ಪನ್ನ ದೇಶಕ್ಕೆ ಮಾರುವ ಶೆಟ್ಟಿ ||೧|| ಒಡೆದ ಮಡಕೆ ತಂದು

ಹರಿಕಥಾಮೃತಸಾರ – ಸರ್ವಪ್ರತೀಕ ಸಂಧಿ -10ಹರಿಕಥಾಮೃತಸಾರ – ಸರ್ವಪ್ರತೀಕ ಸಂಧಿ -10

 ಶ್ರೀ ಜಗನ್ನಾಥದಾಸ ವಿರಚಿತ   ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ/ ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು// ಆವ ಪರಬೊಮ್ಮನ ಅತಿವಿಮಲ ಅಂಗಾವ ಬದ್ಧರು ಎಂದೆನಿಪ ರಾಜೀವಭವ ಮೊದಲಾದ ಅಮರರು ಅನುದಿನದಿ ಹರಿಪದವ ಸೇವಿಪರಿಗೆ ಅನುಕೂಲರಲ್ಲದೆ ತಾವು ಇವರನು ಕೆಡಿಸಬಲ್ಲರೆ ಶ್ರೀವಿಲಾಸಾಸ್ಪದನ ದಾಸರಿಗೆ ಉಂಟೆ