ರಚನೆ : ಜಗನ್ನಾಥ ದಾಸರು
ಸ್ವಾಮಿ ಲಾಲಿ ಭಕ್ತ ಪ್ರೇಮಿ ಲಾಲಿ | ಕಾವರೆನಿಪ ಗುರುಸಾರ್ವಭೌಮ ಲಾಲಿ ||-1-||
ಇಂದ್ರ ಲಾಲಿ ರಾಘವೇಂದ್ರ ಲಾಲಿ | ಸಾಂದ್ರ ಭಕ್ತ ಕುಮುದ ಪೂರ್ಣಚಂದ್ರ ಲಾಲಿ|| ||-2-||
ತರಣಿ ಲಾಲಿ ನಿಜ ಕರುಣಿ ಲಾಲಿ | ಶರಣ ಜನರ ಕಾವ ಗುಣಪೂರ್ಣ ಲಾಲಿ|| -3-||
ದೇವ ಲಾಲಿ ನಿಜ ಭಾವ ಲಾಲಿ | ಭಾವಿಸುವರ ನಿತ್ಯ ನೀ ಕಾವ ಲಾಲಿ || -4-||
ರಾಜ ಲಾಲಿ ಕಲ್ಪಭೋಜ ಲಾಲಿ | ರಾಜಿಸುವ ಯತಿಕುಲ ತೇಜ ಲಾಲಿ || -5-||
ದಾತ ಲಾಲಿ ನಿಜ ತ್ರಾತ ಲಾಲಿ | ಪ್ರೀತ ಜಗನ್ನಾಥ ವಿಠಲ ದೂತ ಲಾಲಿ ||-6-||