ಚಿತ್ರ – ಶುಭಂ (೨೦೦೫)
ಸಾಹಿತ್ಯ – ಕವಿರಾಜ್
ಸಂಗೀತ – ಗುರುಕಿರಣ್
ಗಾಯಕಿ – ಚಿತ್ರ
ಹನಿ ಹನಿ ಇಬ್ಬನಿನ ಬಾಚಿ ಕುಡಿಯೋ ಆಸೆ
ಚಿಲಿಪಿಲಿ ಹಕ್ಕಿ ನಿನ್ನ ಭಾಷೆ ಕಲಿಯೋ ಆಸೆ
ಮುಗಿಲ ತಂಪಲಿ ಕೊಳಲ ಇಂಪಲಿ
ಅರಳೋ ಮೊಗ್ಗಿನ ಹರಡೋ ಕಂಪಲಿ
ಬೆರೆಯೋ ನೂರಾಸೆಯು
ಹನಿ ಹನಿ ಇಬ್ಬನಿನ ಬಾಚಿ ಕುಡಿಯೋ ಆಸೆ
ಇನಿದನಿ ಗುಬ್ಬಿ ನಿನ್ನ ಬಾಷೆ ಕಲಿಯೋ ಆಸೆ |
ಬಿಳಿ ಬಿಳಿ ಮೋಡಕೆ ಬಗೆ ಬಗೆ ಬಣ್ಣ
ಬಳಿಯೋಕೆ ಆಸೆಯು
ಗಗನ ಭೂಮಿಯ ಚುಂಬಿಸೋ ತಾಣ
ನೋಡೋಕೆ ಆಸೆಯು
ಎಲೆ ತಂಗಾಳಿ ನಿನ್ನ ಜೋಕಾಲಿ
ಹೆಣೆದು ನಾ ಆಡಲೇ |
ಹನಿ ಹನಿ ಇಬ್ಬನಿನ ಬಾಚಿ ಕುಡಿಯೋ ಆಸೆ
ಚಿಲಿಪಿಲಿ ಗುಬ್ಬಿ ನಿನ್ನ ಭಾಷೆ ಕಲಿಸೋ ಆಸೆ |
ನದಿಯೇ ಎಲ್ಲಿಗೆ ಹರಿಯುವೆ ಹೀಗೆ
ಬರಲೇ ನಾನೂ ಜೊತೆ
ಮರವೇ ಏತಕೆ ನಿಂತಲೇ ನಿಂತೆ
ನಿನದು ಏನೇ ಕಥೆ
ಮಳೆ ಬಿಲ್ಲಿನ ಮನೆ ಮಾಡೋಣ
ಕುಳಿತು ಮಾತಾಡಲು |
* * *
ವೇಣಿ, ಈ ಹಾಡನ್ನ ಇತ್ತೀಚೆಗೆ ಕೇಳಿದ್ದು ನಾನು. ಇದರ ಮೊದಲ ಸಾಲು ಹೀಗೆ ಕೇಳಿದಂತೆ ನೆನಪು ‘ಹನಿ ಹನಿ ಇಬ್ಬನೀನ ಬಾಚಿ ಕುಡಿವ ಆಸೆ’ ಅಥವಾ ‘ಇಬ್ಬನಿ ನಿನ ಬಾಚಿ ಕುಡಿವ ಆಸೆ’ ಇರ್ಬೇಕು ಅಲ್ವೆ. ಇನ್ನು ಗುಬ್ಬಿಯ ಚೀವ್ ಚೀವ್ ದನಿಯನ್ನ ಇನಿದನಿ ಅಂತ ನಾನು ಎಲ್ಲೂ ಕೇಳೇ ಇಲ್ಲ. ಕೋಗಿಲೆಯ ಇನಿದನಿ ಅಂತ ಕೇಳಿದ್ದೀನಿ, ಗುಬ್ಬಿ ಯಾವಾಗ ಇನಿದನಿ ಆಯ್ತು?
ಮತ್ತೆ ಚರಣದಲ್ಲಿ ‘ಹನಿ ಹನಿ… ಚಿಲಿಪಿಲಿ ಗುಬ್ಬಿ ನಿನ್ನ ಭಾಷೆ ಕಲಿಸೋ ಆಸೆ’ ನಾ? ಸಾಹಿತ್ಯ ಸರಿ ಇಲ್ಲ ಅನ್ಸತ್ತೆ. ಇನ್ನ ‘ಮರವೇ ಏತಕೆ ನಿಂತಲ್ಲೇ ನಿಂತೆ’ ಇರ್ಬೇಕು ಅನ್ಸತ್ತೆ ಅಲ್ವಾ?
ಮೀರಾ, ಕವಿಯ ಕಿವಿಗೆ ಗುಬ್ಬಿಯ ಚಿಲಿಪಿಲಿಯೇ ಇನಿದನಿಯಾಗಿ ಕೇಳಿಸಿರಬಹುದು ಬಿಡು 🙂
ಕವಿರಾಜ್ಗೆ ಈ ಹಾಡು ಬರೆಯಲು ‘ರೋಜಾ’ ಚಿತ್ರದ ಹಾಡು(ಚಿನ್ನ ಚಿನ್ನ ಆಸೆ) ಸ್ಪೂರ್ತಿ ನೀಡಿರಬಹುದು ಅನ್ನಿಸತ್ತೆ ಅಲ್ವಾ?
ನನಗಂತೂ ಕಷ್ಟಾ ಪಟ್ಟು ಪ್ರಾಸಗಳನ್ನಾ, ಸಂಗೀತಾನಾ ತುಂಬಿದಂಗ್ ಕಾಣ್ತು ನೋಡ್ರಿ.
ಇಂತಾ ಕವಿ ಮನ್ಸು ಇದ್ದೋರಿಗೆ ಕಂಡದ್ದೆಲ್ಲಾ ಕುಡಿಬಕು, ಕಿವಿಗೆ ಕೇಳಿದ್ದೆಲ್ಲಾ ಇಂಪಾಗೇ ಕಾಣಿಸ್ಬಕು ಅಂತಾನೇ ಭಗವಂತ ಅವನ ಹಾಡ್ನ ಬರದಂಗೈತಿ!
ಕಾಳಣ್ಣಾ, ಮೀರಾ ಈ ಹಾಡು ಕೂಡ ನಿಮ್ಮ ಗಮನಕ್ಕೆ. ಏನನ್ನಿಸಿತು ತಿಳಿಸಿ. ಸಾಹಿತ್ಯ ಕವಿರಾಜ ಅಲ್ಲ, ಕಲ್ಯಾಣ. ಇದರಲ್ಲೂ ಮೈನಾ,ಕೋಗಿಲೆಗಳೆಲ್ಲಾ ಧಾರಾಳವಾಗಿವೆ. 🙂
ಹಾಡು ಕೇಳಿದೆ ಚೆನ್ನಾಗಿದೆ `ಬಾಚಿ ಕುಡಿಯೋ’ದನ್ನು ಎಲ್ಲೂ ಕೇಳಿರಲಿಲ್ಲ
ಬಾಚಿ ತಬ್ಬಿ ಕೊಳ್ಳುವದೋ, ಕಸ ಬಾಚುವುದೋ ಗೊತ್ತಿರುವ ಪ್ರಯೋಗ
ನೀವುಗಳಾರಾದರೂ ಈ ಪ್ರಯೋಗ ಕೇಳಿದ್ದೀರಾ?
ಅಥ್ವಾ ಇದು ಕವಿ ಸಮಯವೋ?
ಮೀರಾ ಅವರು ಗಮನಿಸಿದ `ಗುಬ್ಬಿ ನಿನ್ನ ಭಾಷೆ ಕಲಿಸೋ ಆಸೆ’ ನಾನೂ ಗಮನಿಸಿದೆ
ಸಾಹಿತ್ಯ ಬರೆಯುವಾಗ ತಪ್ಪಾಗಿರುವ ಸಾಧ್ಯತೆಗಿಂತಾ ಚಿತ್ರ ಹಾಡುವಾಗ ತಪ್ಪು ಮಾಡಿರಬಹುದಾದ
ಸಾಧ್ಯತೆ ಹೆಚ್ಚು ಅನ್ನಿಸುತ್ತೆ ಈ ಮೊದಲು ಚಿತ್ರ ಮರೆದಿರುವೆ(ಮರೆತಿರುವೆ), ದುಂಬ (ತುಂಬ)
ಎಂದು ಹಾಡಿದ್ದಾರೆ. ವಿಶಾಲ ಹೃದಯದ ಕನ್ನಡಿಗರು ಅದನ್ನು ಕಮಕ್ ಕಿಮಕ್ ಅನ್ನದೆ `ಎನ್ ಜಾಯ್” ಮಾಡಿದ್ದಾರೆ!
ವೇಣಿ, ನೀನು ಮೇಲೆ ಕೊಟ್ಟಿರುವ ಹಾಡಿನ ಸಾಹಿತ್ಯವನ್ನ ನೀನೇ ಬರೆದರೆ ಅದರ ಬಗ್ಗೆ ಏನಾದರೂ ಹೇಳಬಹುದು ನೋಡು. ಕುಯ್ಯೋ ಅಂತ ಎಲ್ಲೋ ಪಾತಾಳದಲ್ಲಿ ಕೇಳೋ ಹಾಗೆ ಹಾಡು ಕೇಳ್ತಿದ್ರೆ, ಹಿಂದೆ ಬರೀ ಡಬಾ ಡಬಾ ಅನ್ನೋ ಹಿನ್ನಲೆ ಸಂಗೀತ ಅದರಲ್ಲಿ ಸಾಹಿತ್ಯ ಅನ್ನೋದು ಅದೆಲ್ಲಿ ಒದ್ದಾಡ್ತಿದೆಯೋ ದೇವ್ರಿಗೇ ಗೊತ್ತು. ನಂಗಂತೂ ಒಂದಕ್ಷರ ಅರ್ಥ ಆಗ್ಲಿಲ್ಲ.:)
ಮಾಲಾ, ಇಬ್ಬನಿಯು ನೀರಿನಂತೆ (ಜಲರಾಶಿಯಾಗಿ) ಒಂದೇ ಕಡೆ ಇರುವುದಿಲ್ಲ. ನಿಮ್ಮ ವಿಶಾಲ ಬ್ಯಾಕ್ ಯಾರ್ಡ್ ತುಂಬಾ ಹರಡಿಹೋಗಿರುವ ಇಬ್ಬನಿಯನ್ನು (ಒಂದು ಇಬ್ಬನಿ = ಒಂದು ಹನಿ) ಕುಡಿಯಬೇಕೆಂದರೆ, ಅದನ್ನು ಮೊದಲು ನೀವು ತರಗೆಲೆಯಂತೆ “ಬಾಚಿ” ಒಂದುಗೂಡಿಸಬೇಕಾಗುತ್ತದೆ. ಹಾಗಾಗಿ ಬಾಚಿ ಎನ್ನುವ ಪದ ಸರಿಯಾಗಿಯೇ ಇದೆ ಅಲ್ಲವೇ?
ಇದು ಕವಿ ಸಮಯವಲ್ಲ. ಕವಿ(ರಾಜ್) ಲೆಕ್ಕಾಚಾರ 🙂
ಇನ್ನು ದುಂಬ,ಮರೆದಿರುವೆ ಪದಗಳ ಬೆನ್ನು ಹತ್ತಿ ಹೋದರೆ ಆ ಚರ್ಚೆ ಸ್ವಭಾಷಾ/ಪರಭಾಷಾ ಗಾಯಕರ ಕುರಿತಾದ ಕೊನೆ, ಮೊದಲಿಲ್ಲದ ಚರ್ಚೆಗೆ ಹೋಗಿ ನಿಲ್ಲುತ್ತದೆಂದು ಭಯವಾಗುತ್ತಿದೆ 🙂
ಮೀರಾ, ನಿನ್ನ ಕಾಮೆಂಟ್ ಹೀಗೇ ಇರಬೇಕು. ಹೀಗಲ್ಲದೆ, ಬೇರೆ ತರ ಇದ್ದಿದ್ರೆ ನನಗೆ ತುಂಬಾ shock ಆಗ್ತಾ ಇತ್ತು 🙂
ಅಯ್ಯೋ, ಇವರ್ದೆಲ್ಲಾ ಹಾಡು ಅನ್ನೋ ಕೊಸರ್ ಗಾನ ತಗೊಂಡು ನಾವು ಟೈಮ್ ಹಾಳ್ ಮಾಡ್ಕೊತಿದೀವಿ ಅನ್ಸಲ್ಲಾ ನಿಮಗೆಲ್ಲಾ?
ಕೋಗಿಲೆ ಕಾಜಾಣಗಳ ಹೆಸರ್ ತೆಗೆದ್ರೆ ‘ಹೇಳೇ ಕೋಗಿಲೆ ಇಂಪಾಗಲಾ…’ ಹಾಡು ಹಾಗೂ ಅದರಲ್ಲಿ ಪ್ರೇಮಾ ನಟನೆ ನನಗೆ ಬಹಳ ಇಷ್ಟಾ ಆಯ್ತು, ಈ ಹಾಡು ಹುಟ್ಟೋ ಸನ್ನಿವೇಶದ ಮೊದಲಲ್ಲಿ ಪ್ರೇಮಾ ಚಿಗರೆಯ ಮರಿಯ ಚಲನವಲನವನ್ನು ತಮ್ಮ ನಟನೆಯಲ್ಲಿ ಚೆನ್ನಾಗಿ ಮೂಡಿಸಿದ್ದಾರೆ.
ಎಲ್ಲದಕ್ಕಿಂತ ನನಗೆ ಇಷ್ಟವಾದದ್ದು ‘ಮಳ್ಳೀ ಮಳ್ಳೀ ಮಿಂಚುಳ್ಳಿ…ಜಾಣಾ ಜಾಣಾ ಕಾಜಾಣ’ ಹಾಡು…ಇವೆಲ್ಲವನ್ನು ಚಿತ್ರಾನೇ ಹಾಡಿರ್ಬೇಕು ಅಲ್ವಾ?