ಟಿಪ್ಪು ವಿವಾದ – ಲೇಖನ ಸುಗ್ಗಿ!

ನೀವು  ಸುದ್ದಿಯ ಹಸಿವಿನವರಾಗಿದ್ದರೆ,  ಡಿ.ಎಚ್.ಶಂಕರ ಮೂರ್ತಿಯವರು ಪ್ರಾರಂಭಿಸಿದ ಟಿಪ್ಪೂ ವಿವಾದದ ಕುರಿತು ,ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಬರುತ್ತಿರುವ  ಲೇಖನ ಸರಣಿಗಳನ್ನು ಗಮನಿಸಿಯೇ ಇರುತ್ತೀರಿ.  ಕನ್ನಡದ ಪ್ರಮುಖ ಸಾಹಿತಿಗಳು/ವಿದ್ವಾಂಸರಿಗೆ, ತಮ್ಮ ಸತ್ವಪೂರ್ಣ ಲೇಖನಗಳ ಮೂಲಕ. ಒಂದು ಅರ್ಥಪೂರ್ಣ, ಮುಕ್ತ ಸಂವಾದ ನಡೆಸಲು ವಿ.ಕ ವೇದಿಕೆ ಒದಗಿಸಿಕೊಟ್ಟಿದೆ.

ಮೊಟ್ಟ ಮೊದಲು ಆಧಾರಗಳ ಕಡತವನ್ನೇ ಹೊತ್ತು ಆಖಾಡಕ್ಕಿಳಿದಿದ್ದು ಎಸ್.ಎಲ್.ಭೈರಪ್ಪನವರು. (ಚಿದಾನಂದ ಮೂರ್ತಿ, ಸೂರ್ಯನಾಥ್ ಕಾಮತ್ ಲೇಖನಗಳು ಈ ಮುಂಚೆ ಪ್ರಕಟವಾಗಿವೆ.)  ತಮ್ಮ ಕಾದಂಬರಿಗಳನ್ನು ಬರೆಯುವಾಗ ವರ್ಷಗಟ್ಟಲೆ ಸಿದ್ಧತೆ ನಡೆಸುವ, ಎಸ್.ಎಲ್.ಭೈರಪ್ಪನವರು  ಈ ಲೇಖನವನ್ನೂ ಕೂಡ ಅಷ್ಟೇ ಶ್ರಮವಹಿಸಿ ಸಿದ್ಧಪಡಿಸಿದಂತಿತ್ತು. ( ಭೈರಪ್ಪನವರ ಲೇಖನವನ್ನು ಹಲವಾರು ತಪ್ಪುಗಳೊಡನೆ ಪ್ರಕಟಿಸಿ,ಮರುದಿನ ತಿದ್ದುಪಡಿ ಸೂಚಿಸಲಾಗಿತ್ತು!)  ಗಿರೀಶ್ ಕಾರ್ನಾಡರು ಈ ಲೇಖನಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸಿ, ಭೈರಪ್ಪನವರ ಲೇಖನಕ್ಕೆ ನನ್ನ ಲೇಖನದ ಮೂಲಕವೇ ಪ್ರತಿಕ್ರಿಯಿಸುತ್ತೇನೆ ಎಂದಿದ್ದು ಓದಿ,ಕಾರ್ನಾಡರು ಮತ್ತೇನೆಲ್ಲಾ ಹೊಸ ದಾಖಲೆ ಹೊತ್ತು ತರಬಹುದೆಂದು ನಿರೀಕ್ಷಿಸಿದವರಿಗೆಲ್ಲಾ ಬಹಳ ನಿರಾಸೆಯಾಯಿತು. ಕಾರ್ನಾಡರು ಚರ್ಚೆಯನ್ನು ದಾರಿ ತಪ್ಪಿಸಲು ಪ್ರಯತ್ನಪಟ್ಟಂತಿತ್ತು. ಟಿಪ್ಪುವಿನ ಇತಿಹಾಸಕ್ಕಿಂತ ಭೈರಪ್ಪನವರ ನಿಂದನೆಯೇ ಕಾರ್ನಾಡರಿಗೆ ಮುಖ್ಯವಾಯಿತೆಂಬ ಅನಿಸಿಕೆ ಓದುಗರಲ್ಲಿ ಮೂಡಿತು.

ಕನ್ನಡದ ಮತ್ತೊಬ್ಬ ಪ್ರಮುಖ ಲೇಖಕರಾದ ಸುಮತೀಂದ್ರ ನಾಡಿಗ್ ಈಗಾಗಲೇ ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದಾರೆ. ಇವತ್ತಿನ(೩/೧೦/೦೬) ಸಂಚಿಕೆಯಲ್ಲಿ ಶತಾವಧಾನಿ ಗಣೇಶ್ ಅವರದು ಮತ್ತೊಂದು ಅತ್ಯುತ್ತಮ ಲೇಖನ.  ವಾಚಕರ ವಿಜಯದಲ್ಲೂ ಉತ್ತಮ ಪತ್ರಗಳು ಪ್ರಕಟವಾಗುತ್ತಿದೆ.  ಅಕ್ಕ ಸಮ್ಮೇಳನದಲ್ಲಿ ಭಾಗವಹಿಸದೆ, ಚಂಪಾ ಲೇಖನವನ್ನು ಓದಿಯೇ ತಮ್ಮ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದ ಜಿ.ಕೆ.ಗೋವಿಂದರಾವ್ ಯಾಕೋ ಈ ಬಗ್ಗೆ ಈವರೆಗೂ ಮೌನವಾಗಿರುವುದು ಆಶ್ಚರ್ಯವಾಗಿದೆ.  ಯಾರಿಗೆ ಗೊತ್ತು ? ಮುಂದಿನ ಲೇಖನ ಅವರದ್ದೇ ಇರಬಹುದು.

ಇತಿಹಾಸದ ಗಾಯ ಕೆರೆಯುವುದರಿಂದ ನಿಜವಾಗಿ ಏನಾದರೂ ಲಾಭವಿದೆಯೋ,ಇಲ್ಲವೋ ಯಾರಿಗೆ ಗೊತ್ತು?  ಸದ್ಯಕ್ಕೆ ಇಂತಹ ವಿದ್ವಪೂರ್ಣ ಲೇಖನಗಳ ಮೂಲಕ ಹೊಸಹೊಸ ಸಂಗತಿಗಳು ಹೊರಬರುತ್ತಿರುವುದೇ ಲಾಭ !! :),

-ಅಥವಾ ಇಂತಹ  ಲೇಖನಗಳನ್ನು ಓದುವುದರಿಂದ ಸಮಯ ವ್ಯರ್ಥ ಅಂತೀರೇನೋ?  ಅನ್ನಿ ಪರವಾಗಿಲ್ಲ, ನಿಮ್ಮ ಅಭಿಪ್ರಾಯವನ್ನೂ ಗೌರವಿಸುತ್ತೇನೆ. 🙂

*               *

6 thoughts on “ಟಿಪ್ಪು ವಿವಾದ – ಲೇಖನ ಸುಗ್ಗಿ!”

 1. kaaloo says:

  ಎಲ್ರೂ ಲೇಖನ ಬರೀತಿದಾರೆ, ಓದೋಕ್ ಮಾತ್ರ ಪುರುಸೊತ್ತಿಲ್ಲ ನೋಡ್ರಿ!

 2. sritri says:

  ಹಂಗಂದ್ರೆ ಹೆಂಗೆ ಕಾಳಣ್ಣಾ? ಕೆಲ್ಸದ ನಡುವೆ ವಸಿ ಟೇಮ್ ಮಾಡ್ಕೋಬೇಕಪ್ಪಾ. ನಮ್ಮ ನಿಸಾರ್ ಅಹಮದ್ ಸಾಹೇಬ್ರೇ ಹೇಳಿಲ್ವಾ? –

  “ಬಿಡುವಿರದ ದುಡಿತದಲ್ಲಿ ಬಲಿಯಾಗದಿರಲಿ ಬೆರಗು, ಸುಡುಬಾಳಿನಂಚಿನಲ್ಲಿ ಮೆರೆದಿರಲಿ ಕಲೆಯ ಸೆರಗು” ಅಂತ??

  ಅಷ್ಟಕ್ಕೂ ನಮ್ ಕಾಳಣ್ಣಂಗೆ ಗೊತ್ತಿಲ್ಲದ್ದೇನಿದೆ ಬುಡು. ಸುಮ್ನೆ ನನ್ ಸಮಾಧಾನಕ್ ಹೇಳ್ದೆ ಆಷ್ಟೇಯ. ಕೋಪ ಮಾಡಿಕೊಂಡ್ ಮನೆ ಕಡೆ ಬರದೇಗಿರದೆ ಹೋದೀಯಾ ಮತ್ತೆ 🙂

 3. kaaloo says:

  ಪರ್ವಾಗಿಲ್ಲ, ನಾನು ನಮ್ ಭಾಷೇನಲ್ಲಿ ಕಾಮೆಂಟುಗಳನ್ನು ಬಿಟ್ಟಿದ್ದಕ್ಕೂ ಸಾರ್ಥಕವಾಯ್ತು, ನೀವೂ ನಮ್ ಭಾಷೆ ಕಲ್ತಂಗಿದೆ!

  ನಂಗೆಲ್ಲಾ ಗೊತ್ತಿದೆ ಅಂತ ದೊಡ್ಡವನ್ನಾಗಿ ಮಾಡಬೇಡಿ ಮೆಡಮ್, ನಾನು ಇಲ್ಲಿನ ಅಣುವಿನೊಳಗೊಂದು ಅಣುವಾಗೇ ಇರ್ತೀನಿ.

  ಓದ್ತೀನಿ, ಒಂದ್ ದಿನಾ ಇವರ್ದೆಲ್ಲ ಎದೆ ಸೀಳಿ ಹೋಗೋ ಹಾಗೆ ಧಮಕೀ ಹಾಕ್ತೀನಿ ನೋಡ್ತಾ ಇರಿ 🙂

 4. ಪತ್ರಿಕೆ ಓದೋಕ್ಕೆ ಬೇಜಾರು. ಆದರೆ ಬ್ಲಾಗು ಓದೋಕ್ಕೆ ಸಂತೋಷ ಆಗತ್ತೆ. ಏಕೆ ಅಂದರೆ …

  ಪತ್ರಿಕೆಯಲ್ಲಿ ಅತ್ತಿತ್ತ ಆಕರ್ಷಣೆಗಳು ಹೆಚ್ಚು. ಒಂದೆಡೆ ಗಮನ ಕೊಡಲಾಗುವುದಿಲ್ಲ, ಓದಿದ್ದು ತಲೆಯೊಳಗೆ ಹೋಗೋಲ್ಲ. ಪಠ್ಯಪುಸ್ತಕವನ್ನು ಓದಿದ ಹಾಗಾಗತ್ತೆ.

  ಅದೇ ಬ್ಲಾಗಿನಲ್ಲಾದರೆ ಹಾಗಲ್ಲ, ಕಾದಂಬರಿ ಓದಿದ ಹಾಗಾಗಿರತ್ತೆ.

  ಆದ್ದರಿಂದ ನಿಮ್ಮ ಲೇಖನ ಉತ್ತಮವಾಗಿದೆ. ಪತ್ರಿಕೆಯಲ್ಲಿ ಬಂದ ಸುದ್ದಿಗಳೆಲ್ಲವೂ ನನಗೆ ಈಗ ಅರ್ಥ ಆಯಿತು.

  ಇಂತಹ ಕೆಲಸ ಆನೂಚಾನವಾಗಿ ನಡೆಯುತ್ತಿರಲಿ.

  ಗುರುದೇವ ದಯಾ ಕರೋ ದೀನ ಜನೆ

 5. viji says:

  ಅಣ್ಣವ್ರೇ, ನೀವು ಸರಿಯಾಗಿ ಹೇಳ್ತಿದ್ದೀರಿ. ನೀವು ಒಮ್ಮೆ ನೋಡಲೇ ಬೇಕಾದ ಲಿಂಕ ಇದು http://www.hinduwisdom.info, http://www.voiceofdharma.com – ನನ್ನ ಬ್ಲಾಗ್ನಲ್ಲಿರೋ ಲಿಂಕುಗಳನ್ನ ಒಮ್ಮೆ ನೋಡಿ.

 6. sritri says:

  ವಿಜಿಯವರೆ, ತುಳಸಿವನಕ್ಕೆ ಸ್ವಾಗತ ಮತ್ತು ಲಿಂಕುಗಳಿಗೆ ಧನ್ಯವಾದ.

  ನಿಮ್ಮ ಬ್ಲಾಗಿನಲ್ಲಿ “ಎದ್ದೇಳು ಓ ಅರ್ಜುಣ” ಅಂತ ಇದೆಯಲ್ಲಾ? “ಅರ್ಜುನ” ಅನ್ನೋದರ ಬದಲು  “ಅರ್ಜುಣ” ಅನ್ನೋದಕ್ಕೆ ಏನಾದರೂ ವಿಶೇಷ ಅರ್ಥವಿದೆಯೆ?

Leave a Reply to kaaloo Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.

Related Posts

ಕಿರುತೆರೆ – ಕಿರಿಕಿರಿಕಿರುತೆರೆ – ಕಿರಿಕಿರಿ

“ಧಾರಾವಾಹಿ ನಿರ್ದೇಶಕರು, ಒಬ್ಬ ವ್ಯಕ್ತಿಗೆ ಕನಿಷ್ಠ ಇಬ್ಬರು ಹೆಂಡಿರಿಲ್ಲದ ಕಣ್ಣೀರ-ಧಾರಾವಾಹಿಯನ್ನು ನಿರ್ಮಿಸುವುದು ಅಸಾಧ್ಯವಾಗಿದೆ ಎಂದು ತಪ್ಪೊಪ್ಪಿಕೊಂಡಿದ್ದಾರೆ ಮಾತ್ರವಲ್ಲದೆ, ರಬ್ಬರ್ ಕಂಪನಿಗಳು ತಮ್ಮನ್ನು ಹುಡುಕುತ್ತಿವೆ ಎಂಬ ಸುದ್ದಿ ಸುಳ್ಳು, ನಾವೇ ರಬ್ಬರ್ ಕಂಪನಿಗಳನ್ನು ಹುಡುಕುತ್ತಿದ್ದು, ಅತ್ಯುತ್ತಮ ರಬ್ಬರ್ ಯಾವುದು ಮತ್ತು ಅದನ್ನು ಯಾವ ರೀತಿ ಎಳೆಯಬಹುದು

ತುಳಸೀವನ ಗಾದೆಗಳುತುಳಸೀವನ ಗಾದೆಗಳು

* ಹಿರಿಯಕ್ಕನ ಚಾಳಿ (ತುಳಸಿ)ವನ ಮಂದಿಗೆಲ್ಲ – ಅಸತ್ಯ ಅನ್ವೇಷಿ * ಭಾಗವತ ತಾನೂ ಕೆಡೋದಲ್ದೆ, (ತುಳಸಿ) ವನಾನೂ ಕೆಡಿಸಿದ್ನಂತೆ – ಜಗಲಿ ಭಾಗವತ * ಯಾರು ಹೆಂಡತಿಯನ್ನು ಪ್ರೀತಿಸುತ್ತಾರೋ ಅವರು ಅಮೆರಿಕದಲ್ಲೇ (ಹೆಂಡತಿ ಬರೆದಿರುವ) ಪುಸ್ತಕ ಪಬ್ಲಿಷ್ ಮಾಡ್ತಾರೆ! (ನನ್ನ

ಅವನು ಒಳ್ಳೆಯವನು!ಅವನು ಒಳ್ಳೆಯವನು!

ಅಪ್ಪ, ಅಮ್ಮ ನೋಡಿ ಒಪ್ಪಿಕೊಂಡು ಬಂದಿದ್ದ ಹುಡುಗಿಯ ಭಾವಚಿತ್ರ ಈಗ ಮಗನೆದುರಲ್ಲಿತ್ತು. ಅವನು ಅದನ್ನು ಕೈಗೆತ್ತಿಕೊಂಡು ನೋಡಲೇ ಇಲ್ಲ. ಈಗಾಗಲೇ ಮನದಲ್ಲಿ ಮನೆ ಮಾಡಿ ನೆಲೆಸಿದ್ದ ಚೆಲುವೆಯ ನೆನಪನ್ನು ದೂರ ತಳ್ಳಿ ಹೇಳೇಬಿಟ್ಟ – ’ನೀವು ಒಪ್ಪಿದ್ದೀರಿ ತಾನೇ? ಸರಿ ಹಾಗಾದರೆ.