ನೀಲಾ : ೨೦೦೧
ಗಾಯಕರು : ರಾಜೇಶ್, ವಾಣಿ ಜಯರಾಂ
ಸಂಗೀತ : ವಿಜಯ ಭಾಸ್ಕರ್
ಸಾಹಿತ್ಯ: ಕೋಟಿಗಾನಹಳ್ಳಿ ರಾಮಯ್ಯ
ಆ ಮೇರು ಈ ಮೇರು
ಆಸೆಯ ಹೂ ತೇರು
ಎಳೆ ಎಳೆಯೋ ಬಸವಣ್ಣಾ
ತುಂಬೈತೆ ಕಣ್ಣಾ..
ಎಷ್ಟೊಂದು ಬಣ್ಣಾ..
ತುಂಬೈತೆ ಕಣ್ಣಾ ..ಎಷ್ಟೊಂದು ಬಣ್ಣಾ..
ಆ ಗಾಲಿ ಈ ಗಾಲಿ
ಉರುಳುರುಳಿ ಸಾಗಾಲಿ
ಜೋಗುಳದ ನೆನಪಿರಲಿ
ಜೀವಕ್ಕೆ ಜೊತೆ ಇರಲಿ
ಆ ಊರು ಈ ಊರು
ತಿರುಗಿದರೂ ಏಸೂರು
ಎಲ್ಲೈತೋ ನನ್ನೂರು
ಸಿಗದಲ್ಲ ತವರೂರು
ತುಂಬೈತೆ ಕಣ್ಣಾ
ಎಷ್ಟೊಂದು ಬಣ್ಣಾ
ಊರೂರು ತವರೂರು
ಎಲ್ಲಾರು ನಮ್ಮೋರು
ಕನಸಿಗರೇ ಗೆಲ್ಲೋರು
ಒಯ್ಯೋಣ ಈ ತೇರು
* * *
(ವಿಜಯ ಭಾಸ್ಕರ್ ಸಂಗೀತ ನೀಡಿದ ಕೊನೆಯ ಚಿತ್ರ.
ವಾಣಿ ಜಯರಾಂ ಹಾಡಿರುವ ಕೊನೆಯ ಕನ್ನಡ ಚಿತ್ರವೂ ಹೌದು – ಸದ್ಯಕ್ಕೆ)
* * *
“…ಆ ಊರು ಈ ಊರು
ತಿರುಗಿದರೂ ಏಸೂರು
ಎಲ್ಲೈತೋ ನನ್ನೂರು
ಸಿಗದಲ್ಲ ತವರೂರು…”
ಯಾಕ್ ಮೆಡಮ್, ಊರು ನೆನಪು ಬಂದಂಗಿದೆ ನಿಮಗೆ!
ಬಹಳ ದಿನಗಳ ಮೇಲೆ ಒಳ್ಳೇ ಸಿನಿಮಾ ಸಾಹಿತ್ಯ ಓದಿದ ಹಾಗಾಯ್ತು, ಧನ್ಯವಾದ.
ವಾಣಿ ಜಯರಾಂ ನನಗೆ ತುಂಬಾ ಇಷ್ಟ. ಆಕೆ ಕನ್ನಡ ಹಾಡು ಹಾಡಿರೋದು ಕಡಿಮೆ, ಆದ್ರೂ ಎಲ್ಲಾ ಚೆನ್ನಾಗಿವೆ; ಮಾನಸ ಸರೋವರದ ‘ಹಾಡು ಹಳೆಯದಾದರೇನು..’ ಅಂತೂ superb!!
ಹೌದು ಶ್ರೀಲತಾ. ವಾಣಿಯ ಗಾನಕೆ ಸೋಲದ ಮನಸೇ ಇಲ್ಲ 🙂
ಈಚೆಗೆ ಕಾಣಿಸಿರಲಿಲ್ಲ ನೀವು ಎಲ್ಲೂ. ಕೆಲಸ ಜಾಸ್ತಿನಾ?
ಕಾಳಣ್ಣಾ, ಏನಾದರೂ ನೆನಪಾಗೋದಿಕ್ಕೆ ಮೊದಲು ಅದು ಮರೆತಿರಬೇಕಲ್ವಾ?
“ಊರೂರು ತವರೂರು
ಎಲ್ಲಾರು ನಮ್ಮೋರು” –
ಸದ್ಯಕ್ಕೆ ಇದೇ ನನ್ನ ಹಾಡು. 🙂
ಕೆಲ್ಸ ಜಾಸ್ತಿ ಅಂತೇನಿಲ್ಲ, ಸೋಮಾರಿತನ ಸ್ವಲ್ಪ ಜಾಸ್ತಿ 😉