ಏಳು ಸುತ್ತಿನ ಕೋಟೆ(೧೯೮೮)
ಸಾಹಿತ್ಯ:ರುದ್ರಮೂರ್ತಿ ಶಾಸ್ತ್ರಿ
ಸಂಗೀತ: ಎಲ್.ವೈದ್ಯನಾಥನ್
ಗಾಯಕ :ಎಸ್.ಪಿ.ಬಾಲಸುಬ್ರಹ್ಮಣ್ಯಂ

ಹಾಡು ಕೇಳಿ

ಏನೋ ಮಾಡಲು ಹೋಗಿ ಏನು ಮಾಡಿದೆ ನೀನು
ನೀತಿ ಹೇಳುವ ನೀನೇ ನೀತಿಯನು ಮುರಿದೆ
ಬಾಯಿದ್ದರೂ ನೀ ಮೂಕನಾದೆ |ಪ||

ಮುಳ್ಳಲ್ಲಿ ನಡೆವುದಕೆ ಎಚ್ಚರಿಕೆ ಬೇಕು
ಜಗದೆಲ್ಲಾ ಕತ್ತಲೆಗೆ ನೀನಲ್ಲ ಬೆಳಕು
ಕೊಂದು ರೋಗದ ರೆಂಬೆ
ಕಡಿದೂ ಗೆಲ್ಲುವೆನೆಂದೆ
ಕೋಟಿ ಬೇರುಗಳಿಂದ ನರಳುತಿದೆ ಬದುಕು||೧||

ವಿಷದ ಬಳ್ಳಿಯ ಜೊತೆಗೆ ಹೂಗಿಡವ ಕಡಿದೆ
ಒಂದು ಕೋಪಕೆ ಎರಡು ಪಾಪಗಳ ಬೆಳೆದೆ
ಎಲ್ಲಾ ಬದಲಿಸ ಬಲ್ಲ
ವಿಧಿಯು ನೀನೇನಲ್ಲ
ಇದ್ದಂತೆ ಜಗವಿಹುದು ನೀನು ಬದಲಾದೆ||೨||

ಹೆತ್ತೊಡಲು ತುಡಿಯುತಿದೆ
ತಳಮಳಿಸಿ ನೊಂದು
ಅಕ್ಕರೆಯ ಸೋದರಿಗೆ ಕಣ್ಣೀರ ಬಿಂದು
ನಿನ್ನಿಂದ ಸುಖವಿಲ್ಲ
ನಿನ್ನೊಳಗೂ ಸುಖವಿಲ್ಲ
ಏಳು ಸುತ್ತಿನ ಕೋಟೆ…. ಸೆರೆಯಾದೆ ಇಂದು..
ಏಳು ಸುತ್ತಿನ ಕೋಟೆಯಲಿ ಸೆರೆಯಾದೆ…..||೩||
*     *        *         *       *

7 thoughts on “ಏಳು ಸುತ್ತಿನ ಕೋಟೆ – ಏನೋ ಮಾಡಲು ಹೋಗಿ”

  1. ರುದ್ರಮೂರ್ತಿ ಶಾಸ್ತ್ರಿ ಯವರ ಸಾಹಿತ್ಯ ಸೊಗಸಾಗಿದೆ.
    ಬಾಲು, ಚೆನ್ನಾಗಿ ಹಾಡಿದ್ದಾರೆ.

    ಆದ್ರೆ ಪುನಹ ಭೂತಕ್ಕೆ ಗೊಂದಲ.

    ಕಡಿದೂ ಗೆಲ್ಲುವೆನೆಂಬೆ

    ಕಡಿದು ಗೆಲ್ಲುವೆನೆಂದೆ ಆಗಬೇಕು!

    ಇಂತಿ
    ಭೂತ

  2. ಭೂತಾತ್ಮವೇ, ಅದು ಎಸ್.ಪಿ.ಬಿ ಧ್ವನಿಯಲ್ಲಿ ಕಡಿದೂ,  ಎಂದು ಕೇಳಿಸತ್ತೆ . ಇನ್ನೊಮ್ಮೆ ಕೇಳಿ ನೋಡಿ. ತಪ್ಪಿದ್ದರೆ ತಿಳಿಸಿ. ತಿದ್ದುತ್ತೇನೆ.  ನನಗೆ “ಕಡಿದೂ “ಸರಿ ಅನ್ನಿಸಿತು.

  3. ಅಯ್ಯೊ,

    ಕಡಿದೂ ಸರಿ ಇದೆ,

    ಆದ್ರೆ, ಗೆಲ್ಲುವೆನೆಂಬೆ ಅನ್ನೊದು ಸರಿ ಇಲ್ಲ.

    ಗೆಲ್ಲುವೆನೆಂದೆ ಆಗ್ಬೇಕು 🙂

    ಇಂತಿ
    ಭೂತಪ್ಪ

  4. ಏನೋಪ್ಪ ನಿಮ್ಮ ಜಗಳ…
    ನಂಗಂತೂ ಏನೋ ಮಾಡಲು ಹೋಗಿ…
    ಕಡಿದು ಅನ್ನೋದು….
    ಕುಡಿದು ಅಂತಾನೇ ಕೇಳಿಸುತ್ತೆ 🙂

  5. ಹೌದು, ಅದು ಎಂದೆ ಅಂತಾನೆ ಇರೋದು. ನಾನು “ರೆಂಬೆ”ಗೆ match ಮಾಡಕ್ಕೆ “ಎಂಬೆ” ಮಾಡಿದ್ದೆ. ಭೂತದ ಕೈಲಿ ಸಿಕ್ಕಿ ಬಿದ್ದೆ 🙂

    ಅನ್ವೇಷಿಗಳೇ, ಬನ್ನಿ, ಬನ್ನಿ…. ಈ ಭೂತದ ಗೊಂದಲ ಪರಿಹಾರಕ್ಕೆ ನೀವೇ ಸರಿ 🙂

  6. ನಾನು ದೂರವೇ ಉಳಿಯುತ್ತೇನೆ, ಏನೋ ಮಾಡಲೋ ಹೋಗಿ, ಭೂತಾನ್ವೇಷಿಗಳ ಕೈಗೆ ಸಿಕ್ಕು ಅನುಭವಿಸೋರು ಯಾರು?

    ‘ಸಂತಸ ಅರಳುವ ಸಮಯದಲ್ಲಿ…’ ಕಡಿದು-ಕುಡಿಯುವವರನ್ನು ಕಟ್ಟಿಕೊಂಡು ತಲೆಕೆಡಿಸಿಕೊಳ್ಳಲು ನನಗಂತೂ ಟೈಮಿಲ್ಲ 🙂

  7. ಕಾಳು, ನಿಮ್ಮ ಸಂತಸ ಸಮಯ ನಿರಂತರವಾಗಿರಲಿ. 🙂

    ಕಡಿದು,ಕುಡಿಯುವವರೆಲ್ಲ ಸದ್ಯಕ್ಕೆ c/o ಭೂತ.

Leave a Reply to kaloo Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.