ರಚನೆ : ಗೋಪಾಲದಾಸರು
ದಯವಿರಲಿ ದಯವಿರಲಿ ದಾಮೋದರ ರಚನೆ – ಗೋಪಾಲದಾಸರು ದಯವಿರಲಿ ದಯವಿರಲಿ ದಾಮೋದರ ||ಪಲ್ಲವಿ||
ಸಯವಾಗಿ ಬಿಡದೆನ್ನ ಸಾಕುವ ಶ್ರೀಕೃಷ್ಣ ||ಅನು ಪಲ್ಲವಿ||
ಹೋಗುವ ಹಾದಿಯಲಿ ಹೋದ ಹಾಗೆಲ್ಲ ನಾ ಸಾಗುವವ ನಾನಲ್ಲ ನಿನ್ನ ಸ್ಮರಣೆಯ ಬಿಟ್ಟು ತೂಗಿ ತೊಟ್ಟಿಲು ಕೊನೆಗೆ ಸ್ಥಳದಲ್ಲೆ ನಿಲುವಂತೆ ಹ್ಯಾಂಗೆ ನಡೆಸುವಿ ಹಾಂಗೆ ನಡಕೊಂಬೆ ಸ್ವಾಮಿ ||-೧-||
ಬಂದೆನೊ ನಾನಿಲ್ಲಿ ಬಹುಜನ್ಮದ ಸುಕೃತ- ದಿಂದ ನಿನ್ನ ಬಳಿಗೆ ಇಂದಿರೇಶ ಒಂದು ಮಾತ್ರವು ಬಿಟ್ಟು ಸಕಲವು ಅರ್ಪಿಸಿದೆ ಬಂಧನವ ಕಡಿವ ಭಕುತಿಯು ಜ್ಞಾನ ಭಕುತಿ ಕೊಡು ಸ್ವಾಮಿ ||-೨-||
ಎನಗಾವುದೂ ಒಲ್ಲೆ ಎಲ್ಲೆಲ್ಲಿ ಹೋದರೂ ಕ್ಷಣ ಬಿಡದೆ ನಿನ್ನ ನೋಳ್ಪ ಜ್ಞಾನವ ಕೊಡೊ ಸ್ವಾಮಿ ಚಿನುಮಯ ಮೂರುತಿ ಗೋಪಾಲವಿಠಲ ಘನಕರುಣಿ ಮಧ್ವಮುನಿ ಮನಮಂದಿರವಾಸ ||-೩-||