ಸಾಹಿತ್ಯ : ಪು ತಿ ನರಸಿಂಹಾಚಾರ್
ಸಂಗೀತ : ಎನ್ ಎಸ್ ಪ್ರಸಾದ್
ಗಾಯನ : ರತ್ನಮಾಲ ಪ್ರಕಾಶ್
ಹೃದಯ ಹೃದಯ ಮಿಲನದೊಳಗೆ
ಮಧುರವಹುದು ಧಾತ್ರಿ
ಮಧುರ ನಯನ ಮಧುರ ವಚನ
ಮಧುರ ಹಸನ ಮೈತ್ರಿ
ಇರವಿರವಿನ ನಡುವಣಿರುಳ
ಪರಿಹರಿಸುವ ಸಲುವಳಿ||
ಹರಿವರ್ತವ ಜಮಿಸು ಓರ್ಚೆ
ನರಗೊಲುಮೆಯ ಬಳುವಳಿ||
ಇನಿಯರೊಸಗೆ ಮೊಗದೊಳೆಸೆವ
ದನಿಯ ಕಾಂತಿಗೇನೇಳೆ||
ಅನುಕರಿಸುವ ಪರ್ವೋತ್ಸವ
ಮನಧರ್ತಿಯ ಪ್ರೇರಣೆ||
ಹೃದಯ ಹೃದಯ ಮಿಳಿತವಾಗಿ
ಮಧುರಬಹುದು ಚೇತನ|
ಮಧುರೀಕ್ಷಣ ಮಧುರವಾಣಿ
ಮಧುರಸ್ಮಿತ ನೂತನ||
ಇದಯ ಅತ್ಯಂತ ಅದ್ಬುತ ಭಾವ ಗೀತೆ.ನಿಮ್ಎ ಧನ್ಯವಾದ.