ರಚನೆ : ಜಗನ್ನಾಥ ದಾಸರು

ಎನ್ನಂಥ ಭಕ್ತರು ಆನಂತ ನಿನಗಿಹರು
ನಿನ್ನಂಥ ಸ್ವಾಮಿ ಎನಗಿಲ್ಲ||
ನಿನ್ನಂಥ ಸ್ವಾಮಿ ಎನಗಿಲ್ಲ ಅದರಿಂದ
ಭಿನೈಪೆ ಎನ್ನಾ ಸಲಹೆಂದು || ಪಲ್ಲವಿ||

ಪತಿತ ನಾನಾದರೂ ಪತಿತಪಾವನ ನೀನು
ರತಿನಾಥ ಜನಕ ನಗಪಾಣಿ ||
ರತಿನಾಥ ಜನಕ ನಗಪಾಣಿ ನೀನಿರಲು
ಇತರ ಚಿಂತ್ಯಾಕೋ ಎನಗಿನ್ನು || ೧||


ಮನದೊಳಗೆ ನೀನಿದ್ದು ಮನವೆಂದೆನಿಸಿಕೊಂಡು
ಮನದಾ ವೃತ್ತಿಗಳನ್ನು ಸೃಜಿಸುವಿ
ಮನದಾ ವೃತ್ತಿಗಳ ಸೃಜಿಸೊ
ಸಂಕರ್ಷಣನೆ ನಿನ್ನ ಕರುಣಕ್ಕೆ ಎಣೆಗಾಣೆ ||೨||

ನಾನಾ ಪದಾರ್ಥದೊಳು ನಾನಾ ಪ್ರಕಾರದಲಿ
ನೀನಿದ್ದು ಜಗವಾ ನಡೆಸುವೀ

ನೀನಿದ್ದು ಜಗವಾ ನಡೆಸುವೀ ಹರಿ ನೀನೆ
ನಾನೆಂಬೋ ನರಗೆ ಗತಿ ಉಂಟೆ |||೩||


ಎನ್ನಪ್ಪ ,ಎನ್ನಮ್ಮ ,ಎನ್ನಯ್ಯ,ಎನ್ನಣ್ಣಾ
ಎನ್ನರಸ ಎನ್ನ ಕುಲದೈವಾ
ಎನ್ನರಸ ಎನ್ನಾ ಕುಲದೈವಾ ಇಹಪರದಿ
ಎನ್ನಾ ಬಿಟ್ಟಗಲದೇ ಇರು ಕಂಡ್ಯಾ ||೪||

ಅನಾಥ ಬಂಧು ಜಗನ್ನಾಥ ವಿಠ್ಠಲ
ಪ್ರಪನ್ನ ಪರಿಪಾಲ ಮಾಲೋಲ
ಪ್ರಪನ್ನ ಪರಿಪಾಲ ಮಾಲೋಲ ಹರಿ
ಪಾಂಚಜನ್ಯ ಧೃತಪಾಣಿ ಸಲಹಯ್ಯ ||೫||

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.