ಕನ್ನಡದ ನೆಲದ – ಸಾಲಿ ರಾಮಚಂದ್ರರಾಯರು

ಕನ್ನಡದ ನೆಲದ ಪುಲ್ಲೆನಗೆ ಪಾವನ ತುಳಸಿ!

ಕನ್ನಡದ ನೆಲದ ನೀರ್ವೊನಲೆನಗೆ ದೇವನದಿ!

ಕನ್ನಡದ ನೆಲದ ಕಲ್ಲೆಮಗೆ ಶಾಲಗ್ರಾಮ ಶಿಲೆ! ಕನ್ನಡಂ ದೈವಮೈ!

ಕನ್ನಡದ ಶಬ್ದಮೆಮಗೋಂಕಾರಮೀಯೆನ್ನ

ಕನ್ನಡದ ನುಡಿಯೆ ಗಾಯತ್ರಿಯದ್ಭುತ ಮಂತ್ರ-

ಮಿನ್ನಾವುದೈ ಪೆರತು ಕನ್ನಡದ ಸೇವೆಯಿಂದಧಿಕಮೀ ಜಗದೊಳಗೆ?

             *                  *

ಕೃಪೆ: ದಟ್ಸ್ ಕನ್ನಡ

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Related Posts

ಸುಬ್ಬಾಭಟ್ಟರ ಮಗಳು – ಬಿ.ಆರ್. ಲಕ್ಷ್ಮಣರಾವ್ಸುಬ್ಬಾಭಟ್ಟರ ಮಗಳು – ಬಿ.ಆರ್. ಲಕ್ಷ್ಮಣರಾವ್

 ಕವಿ – ಬಿ.ಆರ್. ಲಕ್ಷ್ಮಣರಾವ್ ಹಾಡು ಕೇಳಿ –   ಸುಬ್ಬಾ ಭಟ್ಟರ ಮಗಳೇ ಇದೆಲ್ಲಾ ನಂದೇ ತಗೊಳ್ಳೇ ನೀಲಿ ನೈಲೆಕ್ಸಿನ ಮೇಘ ವಿನ್ಯಾಸದ ಆಕಾಶದ ಸೀರೆ ದಿಗಂತಗಳೇ ಮೇರೆ ಮುಂಜಾವಿನ ಬಂಗಾರದ ಬೆಟ್ಟ ಬೆಳದಿಂಗಳ ಬೆಳ್ಳಿ ನಿನ್ನ ಭಾಗ್ಯಕೆ ಎಣೆಯೆಲ್ಲಿ? ರಾತ್ರಿ

ಇಳಿದು ಬಾ ತಾಯೆ ಇಳಿದು ಬಾ – ಕುವೆಂಪುಇಳಿದು ಬಾ ತಾಯೆ ಇಳಿದು ಬಾ – ಕುವೆಂಪು

ಕವಿ – ಕುವೆಂಪು ಓಂ ಸಚ್ಚಿದಾನಂದ ತ್ರಿತ್ವ ಮುಖವಾದ ಪರಬ್ರಹ್ಮದಲ್ಲಿ ಅಭವದೊತ್ತಾದೆ ಭವದ ಬಿತ್ತಾದೆ ಋತದ ಚಿತ್ತಾದೆ ನೀ ಇಳಿದು ಬಾ ಇಳೆಗೆ ತುಂಬಿ ತಾ ಬೆಳೆಗೆ ಜೀವ ಕೇಂದ್ರದಲ್ಲಿ ಮತ್ತೆ ಮೂಡಿ ಬಾ ಒತ್ತಿ ನೀನೆನ್ನ ಚಿತ್ತ ಪೃಥ್ವಿಯಲ್ಲಿ ||

ಲೋಕದ ಕಣ್ಣಿಗೆ ರಾಧೆಯು ಕೂಡಲೋಕದ ಕಣ್ಣಿಗೆ ರಾಧೆಯು ಕೂಡ

ಕವಿ – ಎಚ್. ಎಸ್. ವೆಂಕಟೇಶಮೂರ್ತಿ ಲೋಕದ ಕಣ್ಣಿಗೆ ರಾಧೆಯು ಕೂಡ ಎಲ್ಲರಂತೆ ಒಂದು ಹೆಣ್ಣು ನನಗೋ ಆಕೆ ಕೃಷ್ಣನ ತೋರುವ ಪ್ರೀತಿಯು ನೀಡಿದ ಕಣ್ಣು ತಿಂಗಳ ರಾತ್ರಿ ತೊರೆಯ ಸಮೀಪ ಉರಿದರೆ ಯಾವುದೋ ದೀಪ ಯಾರೋ ಮೋಹನ ಯಾವ ರಾಧೆಗೊ