ಜಯ ಹೇ ಕನ್ನಡ ತಾಯಿ – Jaya he kannada taayi

ಹರೆ ನೂರಿದ್ದರೂ ಮರವೊಂದೇ
ಬಂದವರಿಗೆ ಆಸರೆ ನೆರಳು
ನಡೆ ನುಡಿ ರೀತಿಗಳೆಷ್ಟೇ ಇದ್ದರೂ
ಒಂದೇ ಒಳಗಿನ ಹುರುಳು
ಪಂಪ ಬಸವ ಕವಿ ಕುಮಾರವ್ಯಾಸರ ಕಾವ್ಯದ ಉಸಿರೊಂದೇ
ಹಸುರಿನ ವೈಖರಿ ಸಾವಿರವಿದ್ದರೂ ಧರಿಸುವ ಬಸಿರೊಂದೇ
ಜಯ ಹೇ ಕನ್ನಡ ತಾಯಿ
ಜಯ ಹೇ ಕನ್ನಡ ತಾಯಿ… ।। ೧ ।।

ಹಲವು ನುಡಿಯಿಂದ ಕಂದರ ಕರೆಯುವ ಕನ್ನಡ ಸಿರಿಗನ್ನಡ ಮಾತೆ
ಶರಣ ಸಂತ ಅವಧೂತರ ದಾಸರ ಹೃದಯ ಮಿಡಿದ ಗೀತೆ
ಇಂದಿನ ಒಲವೇ ಎಂದಿಗೂ ಇರಲಿ ಹರಸೆಮ್ಮನು ಮಾತೆ
ಮುಂದಿನ ಬಾಳನು ಅರಳಿಸಿ ಬೆಳಗಿಸು ಕರ್ನಾಟಕ ಮಾತೆ
ಜಯ ಹೇ ಕನ್ನಡ ತಾಯಿ
ಜಯ ಹೇ ಕನ್ನಡ ತಾಯಿ… ।। ೨ ।।

ಕಾಮನಾ ಬಿಲ್ಲಿನಾಡು ನಾನಾ ಪಲುಕಿನ ಹಾಡು
ಹಲವಿದ್ದರೂ ಒಲವೊಂದೇ ಎನ್ನುವ ನಮ್ಮೊಲವಿನ ಕರುನಾಡು
ಕಾಮನಾ ಬಿಲ್ಲಿನಾಡು ನಾನಾ ಪಲುಕಿನ ಹಾಡು
ಹಲವಿದ್ದರೂ ಒಲವೊಂದೇ ನಮ್ಮೊಲವಿನ ಕರುನಾಡು ।। ೩ ।।

ಸಾಹಿತ್ಯ: ಎಚ್.ಎಸ್. ವೆಂಕಟೇಶಮೂರ್ತಿ

Tags:

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Related Posts

ಹೃದಯ ಹೃದಯ ಮಿಲನದೊಳಗೆ – ಪುತಿನಹೃದಯ ಹೃದಯ ಮಿಲನದೊಳಗೆ – ಪುತಿನ

ಸಾಹಿತ್ಯ : ಪು ತಿ ನರಸಿಂಹಾಚಾರ್ ಸಂಗೀತ : ಎನ್ ಎಸ್ ಪ್ರಸಾದ್ ಗಾಯನ : ರತ್ನಮಾಲ ಪ್ರಕಾಶ್ ಹೃದಯ ಹೃದಯ ಮಿಲನದೊಳಗೆ ಮಧುರವಹುದು ಧಾತ್ರಿ ಮಧುರ ನಯನ ಮಧುರ ವಚನ ಮಧುರ ಹಸನ ಮೈತ್ರಿ ಇರವಿರವಿನ ನಡುವಣಿರುಳ ಪರಿಹರಿಸುವ ಸಲುವಳಿ||

ನನ್ನ ದೇಹದ ಬೂದಿ – ದಿನಕರ ದೇಸಾಯಿನನ್ನ ದೇಹದ ಬೂದಿ – ದಿನಕರ ದೇಸಾಯಿ

ಕವನ – ನನ್ನ ದೇಹದ ಬೂದಿ ಕವಿ – ದಿನಕರ ದೇಸಾಯಿ ನನ್ನ ದೇಹದ ಬೂದಿ-ಗಾಳಿಯಲಿ ತೂರಿ ಬಿಡಿ  ಹೋಗಿ ಬೀಳಲಿ ಬತ್ತ ಬೆಳೆಯುವಲ್ಲಿ ; ಬೂದಿ-ಗೊಬ್ಬರದಿಂದ ತೆನೆಯೊಂದು ನೆಗೆದು ಬರೆ  ಧನ್ಯವಾಯಿತು ಹುಟ್ಟು ಸಾವಿನಲ್ಲಿ ನನ್ನ ದೇಹದ ಬೂದಿ-ಹೊಳೆಯಲ್ಲಿ ಹರಿಯಬಿಡಿ

ಎಲ್ಲಿ ಅರಿವಿಗಿರದೊ ಬೇಲಿಎಲ್ಲಿ ಅರಿವಿಗಿರದೊ ಬೇಲಿ

ಕವಿ- ಎಚ್. ಎಸ್. ವೆಂಕಟೇಶಮೂರ್ತಿ ಎಲ್ಲಿ ಅರಿವಿಗಿರದೊ ಬೇಲಿ ಎಲ್ಲಿ ಇರದೋ ಭಯದ ಗಾಳಿ ಅಂಥ ನೆಲೆಯಿದೆಯೇನು ಹೇಳಿ ಸ್ವರ್ಗವನ್ನು ಅದರೆದುರು ಹೂಳಿ ಹಸಿದಂಥ ಕೂಸಿರದ ನಾಡು ಉಸಿರೆಲ್ಲ ಪರಿಮಳದ ಹಾಡು ಎಲ್ಲಿ ಬೀಸುವುದೋ ನೆಮ್ಮದಿಯ ಗಾಳಿ ಸ್ವಾತಂತ್ರ್ಯ ನಗುತಲಿದೆ ಅಲ್ಲಿ