ಚಿತ್ರ: ನೆನಪಿರಲಿ (೨೦೦೫)
ಸಾಹಿತ್ಯ,ಸಂಗೀತ: ಹಂಸಲೇಖ
ಗಾಯಕಿ: ಚಿತ್ರ
ಇಂದು ಬಾನಿಗೆಲ್ಲ ಹಬ್ಬ
ಗಾಳಿ ಗಂಧಕೂ ಹಬ್ಬ
ಇಂದು ಭೂಮಿಗೆಲ್ಲ ಹಬ್ಬ
ಪುಷ್ಪ ಕುಲಕೂ ಹಬ್ಬ
ಇಲ್ಲಿ ಸುಮ್ಮನಿರದ ಮನಸಿಗೂ ಹಬ್ಬ
ಇಲ್ಲಿ ಓಡುತಿರುವ ವಯಸಿಗೂ ಹಬ್ಬ
ಇಂದು ಬಾನಿಗೆಲ್ಲ ಹಬ್ಬ
ಗಾಳಿ ಗಂಧಕೂ ಹಬ್ಬ
ಇಂದು ಭೂಮಿಗೆಲ್ಲ ಹಬ್ಬ
ಪುಷ್ಪ ಕುಲಕೂ ಹಬ್ಬ
ಭುವನವೆಲ್ಲ ಅಚ್ಚರಿಗಳ ರಾಶಿ
ಅಲ್ಲಿದೆ ಮಳೆ ಹನಿ
ಇಲ್ಲಿದೆ ಬಿಸಿಲ ಬಿಸಿ
ಹೃದಯ ಬಯಸುವ ಸುಖದ ಚಿತ್ರಕೆ
ಕಣ್ಗಳೆ ಗಾಜಿನ ಪರೆದೆಯು|
ಇಂದು ಉಸಿರಿಗೆ ಹಬ್ಬ
ಉಬ್ಬುವೆದೆಗೂ ಹಬ್ಬ
ಇಲ್ಲಿ ಸುಮ್ಮನಿರದ ಮನಸಿಗೂ ಹಬ್ಬ
ಇಲ್ಲಿ ಓಡುತಿರುವ ವಯಸಿಗೂ ಹಬ್ಬ
ಇಂದು ಮರಳಿಗೆ ಹಬ್ಬ
ಉಪ್ಪು ಗಾಳಿಗೂ ಹಬ್ಬ
ಇಂದು ಕಡಲಿಗೆ ಹಬ್ಬ
ಅಪ್ಪೋ ಅಲೆಗೂ ಹಬ್ಬ
ಒಳ್ಳೆ ಕ್ಷಣಗಳ ಕೂಡಿಡಬೇಕು
ಬದುಕಿನ ನೆನಪಿಗೆ
ಋತುಗಳ ಜೂಟಾಟಕೆ
ಸೊಗಸಿನಿಂದಲೇ ಸೊಗಸ ಸವಿಯುವ
ಸೊಗಸಿಗೆ ಚೆಲುವಿನ ಹೆಸರಿದೆ|
ಇಂದು ಚೆಲುವಿಗೆ ಹಬ್ಬ
ಒಳ ಒಲವಿಗೂ ಹಬ್ಬ
ಇಲ್ಲಿ ಸುಮ್ಮನಿರದ ಮನಸಿಗೂ ಹಬ್ಬ
ಇಲ್ಲಿ ಓಡುತಿರುವ ವಯಸಿಗೂ ಹಬ್ಬ
** ** ** ** ** **
ಸಂದಾಕಿದೆ ಈ ಹಾಡ್. ಚಿತ್ರಮ್ಮ ಸಂದಾಕ್ ಹಾಡವ್ಳೆ.
ಆದ್ರು, ಅಜೆಂತ ಎಲ್ಲೊರದಶ್ಟು ಸಂದಾಕಿಲ್ಲ.
ಬತ್ತಿನಿ
ಹಳ್ಳಿ ಭೂತ
ನನಗೆ ಈ ಚಿತ್ರದ ಎಲ್ಲಾ ಹಾಡು ಇಷ್ಟ.
ಭೂತಕ್ಕೆ ಅಜಂತ ಎಲ್ಲೋರ ಹಾಡು ಇಷ್ಟ ಆಯ್ತಾ? ಅರ್ಥ ಆಯ್ತು ಬುಡು 🙂
ತ್ರಿವೇಣಿಯವರೇ,
ಹಂಸ್ ಕಾಲ ಮುಗಿತು ಅಂತಾ ಎಲ್ಲಾ ಇನ್ನೇನೂ ಅಧ್ಯಾಯ ಕ್ಲೋಸ್ ಮಾಡೋವಾಗ ಬಂತು ನೋಡಿ ಈ ‘ನೆನಪಿರಲಿ’..
ಒಂದಾಕ್ಕಿಂತ ಒಂದು ಸೂಪರ್ ಹಾಡು..
ಈ ಹಾಡಿನ ಸಾಹಿತ್ಯ ತುಂಬಾ ಉಲ್ಲಾಸಿತವಾಗಿದೆ
>ಭುವನವೆಲ್ಲ ಅಚ್ಚರಿಗಳ ರಾಶಿ
ಅಲ್ಲಿದೆ ಮಳೆ ಹನಿ
ಇಲ್ಲಿದೆ ಬಿಸಿಲ ಬಿಸಿ
ಹೃದಯ ಬಯಸುವ ಸುಖದ ಚಿತ್ರಕೆ
ಕಣ್ಗಳೆ ಗಾಜಿನ ಪರೆದೆಯು|
ಆಹಾ ! ಅದ್ಭುತ ಕಲ್ಪನೆ
ಹೌದು ಶಿವು. 🙂
ಹಾಗೆಯೇ ಕಲ್ಲರಳಿ ಹೂವು.. ಚಿತ್ರದ ಹಾಡುಗಳನ್ನೂ ಒಮ್ಮೆ ಕೇಳಿ ನೋಡಿ.
ಬಾರಪ್ಪಾ ಓ ಬೆಳ್ಳಿ ದೀಪ
ಹಣತೆಯ ಅಡಿಯಲ್ಲಿ
ದಯವಿಲ್ಲದ ಧರ್ಮ (ವಚನ)