ಚಿತ್ರ: ಸಿ.ಬಿ.ಐ.ಶಂಕರ್ (೧೯೮೯)
ಸಾಹಿತ್ಯ,ಸಂಗೀತ: ಹಂಸಲೇಖ
ಗಾಯಕರು :  ಎಸ್.ಪಿ.ಬಾಲಸುಬ್ರಹ್ಮಣ್ಯಂ,ಚಿತ್ರ

ಹಾಡು ಕೇಳಿ

ಗೀತಾಂಜಲಿ…
ಹಾಲುಗೆನ್ನೆಗೆ ವಾರೆಗಣ್ಣಿಗೆ
ನಮ್ಮೂರ ಹೆಣ್ಣಿಗೆ

ಪುಷ್ಪಾಂಜಲಿ…
ತೊಂಡೆ ಹಣ್ಣಿಗೆ
ಬಾಳೆ ದಿಂಡಿಗೆ
ದಾಳಿಂಬೆ ಹಣ್ಣಿಗೆ

ಓ ಕನಕಾಂಬರಿ ನೀನು ಬಾರದೆ
ಪೂಜೆಗೆ  ಹೂವಿಲ್ಲ
ಓ ಶ್ವೇತಾಂಬರಿ ನೀನು ಬಾರದೆ
ಉತ್ಸವ ಸಾಗಲ್ಲ|

ನೀರಾಗಲೇನೆ ನಾ?
ಮೈಯ ಮೇಲೆ ಜಾರಿ ಹೋಗಲು
ಗಾಜಾಗಲೇನೇ ನಾ?
ನಿನ್ನ ಅಂದ ಚಂದ ತೋರಲು

ಮಂಜಾಗಲೇನೆ ನಾ?
ನಿನ್ನ ಕೋಪ ತಂಪು ಮಾಡಲು
ತೇರಾಗಲೇನೆ ನಾ?
ನಿನ್ನ ಹೊತ್ತು ಕೊಂಡು ಹೋಗಲು|

ಕೇಳದೆ ದೇವಿ ವರವ ಕೊಡಳು
ಹೊಗಳದೆ ನಾರಿ ಮನಸು ಕೊಡಳು

ಓ ಕನಕಾಂಬರಿ ನೀನು ಬಾರದೆ
ಪೂಜೆಗೆ  ಹೂವಿಲ್ಲ
ಓ ಶ್ವೇತಾಂಬರಿ ನೀನು ಬಾರದೆ
ಉತ್ಸವ ಸಾಗಲ್ಲ|

ಕೈಲಾಸ ಕೈಯಲ್ಲಿ
ನೀನು ನನ್ನ ಸಂಗ ಇದ್ದರೆ
ಆಕಾಶ ಜೇಬಲಿ
ನಿನ್ನ ನಗು ಹೀಗೇ ಇದ್ದರೆ

ಕೋಲ್ಮಿಂಚು ಹೂಮಳೆ
ನಿನ್ನ ಮಾತು ಕೇಳುತ್ತಿದ್ದರೆ
ಸೀನೀರೆ ಸಾಗರ
ನಿನ್ನ ಭಾವ ಹೀಗೇ ಇದ್ದರೆ|
ಓಡದೆ ನೀನು ಜಿಂಕೆಯಾದೆ
ಹಾರದೆ ನಾನು ಹಕ್ಕಿಯಾದೆ

ಓ ಕನಕಾಂಬರಿ ನೀನು ಬಾರದೆ
ಪೂಜೆಗೆ  ಹೂವಿಲ್ಲ
ಓ ಶ್ವೇತಾಂಬರಿ ನೀನು ಬಾರದೆ
ಉತ್ಸವ ಸಾಗಲ್ಲ|

*  *  *   *  *   *

6 thoughts on “ಸಿ.ಬಿ.ಐ.ಶಂಕರ್ – ಗೀತಾಂಜಲಿ”

  1. ‘ಕೋಲ್ಮಿಂಚು ಹೂಗಳೇ ಆದಮೇಲೆ ಬರುವ ಸಾಲುಗಳು ‘ನಿನ್ನ ಮಾತು ಕೇಳುತ್ತಿದ್ದರೆ’ ಈ ಸಾಲುಗಳು ಬರೆಯಲು ಮರೆತಿದ್ದೀಯ ಅನ್ಸತ್ತೆ. (ನಂಗೆ ಹಾಡಲ್ಲಿ ‘ಕೋಲ್ಮಿಂಚು ಹೂಗಳೇ’ ಅಂತಾನೇ ಕೇಳತ್ತೆ.

  2. >ಓಡದೆ ನೀನು ಜಿಂಕೆಯಾದೆ
    ಹಾರದೆ ನಾನು ಹಕ್ಕಿಯಾದೆ
    ಹೇ ಎನ್ರೀ ಇದು..ಇಡೀ zoology ಓದಿದ್ದು ತಪ್ಪು ಅಂತಿದಾರೆ ಹಂಸ್..
    ಹಾರದೆ ಹೆಂಗೆ ಹಕ್ಕಿ ಆಗುತ್ತೆ..ಬಹುಷಃ ಕೀವಿ ಹಕ್ಕಿ ಇರಬಹುದಾ 🙂

    ಶಂಕರ್ ನಾಗ್ ಈ ಹಾಡಲಿ ಇರೋದು ಅನಿಸುತ್ತೆ..ಭವ್ಯನಾ ಆ ಗೀತಾಂಜಲಿ?
    >ಮಂಜಾಗಲೇನೆ ನಾ?
    ನಿನ್ನ ಕೋಪ ತಂಪು ಮಾಡಲು
    ತೇರಾಗಲೇನೆ ನಾ?
    ನಿನ್ನ ಹೊತ್ತು ಕೊಂಡು ಹೋಗಲು|

    ವಾಹ್ ಹಂಸ್ !

  3. ಶಿವು, ಭವ್ಯ ಅಲ್ಲ, ಈ ಚಿತ್ರದ ನಾಯಕಿ ಸುಮನ್ ರಂಗನಾಥ್.

    ಹಂಸ್ ಇಂತಹ ಅತಾರ್ಕಿಕ ಸಾಲುಗಳ ಸೃಷ್ಟಿಯಲ್ಲಿ ಸಿದ್ಧಹಸ್ತರು. 🙂

    ಹಕ್ಕಿ ಹಾರೋದಿರಲಿ ಒಂದು ಹಾಡಿನಲ್ಲಿ “ರೆಕ್ಕೆ ಇರದ ಹುಲಿಗಳು” ಎಂದು ಬರೆದು ಪೇಚಿಗೆ ಸಿಕ್ಕಿದ್ದರು.

    ಪತ್ರಿಕೆಯವರು “ಹುಲಿಗೆ ರೆಕ್ಕೆ ಎಲ್ಲಿರತ್ರೀ? ಎಂದು ಹಂಸ್ ಜನ್ಮ ಜಾಲಾಡಿದ್ದರು 🙂

  4. “ಇಂತಹ ಹಲವಾರು ಅರ್ಥವಾಗದ ಪದಸಾಲುಗಳನ್ನು ಬರೆದು….”

    – ಎಲ್ಲಿ? ಯಾವ ಹಾಡು? ಎಂದು ತಿಳಿಸಿದ್ದರೆ ಚೆನ್ನಾಗಿತ್ತು.

Leave a Reply to ಮೀರಾಕೃಷ್ಣಮೂರ್ತಿ Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.