ಕಸ್ತೂರಿ ಅನರ್ಥಕೋಶ ಓದಿ, ನಕ್ಕು, ಸುಧಾರಿಸಿಕೊಂಡಿದ್ದರೆ ಮಾತ್ರ ಕಸ್ತೂರಿಯವರ ನವೀನ ಗಾದೆಗಳನ್ನು ಓದಿ. 🙂
“ಅಣುಕಂಪ” ಎಂಬ ಪದಸೃಷ್ಟಿಗೆ ಕಾರಣವಾಗಿರುವ ಅಣುಗಾದೆಗಳನ್ನು ಗಮನಿಸಿ.
ನವೀನ ಗಾದೆಗಳು
* ಪರನಿಂದ ಗೃಹಕ್ಷಯ, ಪರಮಾಣು ಗ್ರಹಕ್ಷಯ.
* ಹೊಸದರಲ್ಲಿ ಅಣೂನ ಎತ್ತಿ ಎತ್ತಿ ಹಾಕಿದರು.
* ದೇವರು ಕೊಟ್ಟ ಅಣೂನ ಸಿಡಿಸಿ ಸಿಡಿಸಿ ನೋಡಿದರು.
* ಬಂದದ್ದೆಲ್ಲ ಬರಲಿ, ಅಟಾಮಿಕ್ ಭಯ ಇರಲಿ.
* ಸಂಕಟ ಬಂದಾಗ ವೆಂಕಾಟಾ! ಅಣೂ ತೆಗಿ.
* ಹೋದರೊಂದು ಅಣು! ಆದರೊಂದು ಜಯ!
* ಅಣುಸಿಡಿಸೋ ವಿಜ್ಞಾನಕ್ಕಿಂತ ಅರಿತು ನುಡಿಯೋ ಅಜ್ಞಾನವೇ ಲೇಸು
* ಕುಂಬಳಕಾಯಿ ಕಳ್ಳ ಅಂದರೆ, ಅಣು ಬುಟ್ಟಿ ತಗೊಂಡು ಬಂದ.
* ನಾಗ ಸಾಕಿ ನಾಶ ಮಾಡೋದೆ.
* ಪರಪಂಚ ಗೆದ್ದವರನ್ನ ಪರಮಾಣುವಿನಲ್ಲಿ ಹೊಡೆದರು.
* ಕೊಂಕಳಲ್ಲಿ ಪರಮಾಣು ! ಕೈಯಲ್ಲಿ ಶರಣಾಗತಿ ಷರತ್ತು.
* ಮೇಲಿನೋರಿಗೆ ಚೆಲ್ಲಾಟಂ ; ಕೆಳಗಿರೋರಿಗೆ ಕೊಲ್ಲಾಟಂ.
* ಬೆಂಗಳೂರಿಗೆ ಬಂದರೆ ತಂಗಳೇ ಗತಿ
* ತೀರ್ಥ ಕೊಟ್ಟರೆ ಥೈರಾಯಿಡ್, ಮಂಗಳಾರತಿ ಹಿಡಿದರೆ ಮೆನಿಂಜೈಟಿಸ್.
* ಉದರ ನಿಮಿತ್ತಂ ಬಹುಕೃತ ಮೋಸಂ.
* ಕ್ಯೂ ನಿಲ್ಲಿಸೋಕೆ ಕೂಸೇ ಇಲ್ಲ, ಕುಲಾವಿಗೆ ಪಂಜಾಬಿನ ಉಲ್ಲು ಕೊಡಿ ಅಂದಳಂತೆ.
* ತಲ್ಲಣಿಸದಿರು ಕಂಡ್ಯ ತಾಳಿ ಕಟ್ಟಿದವನ ಕಂಡು.
* ಬೆರಳು ತೋರಿಸು ಅಂದರೆ ಕೊರಳನ್ನೇ ಕೊಡುತ್ತಾನೆ.
* ತಾಳಿದವನಿಗೆ ತಾಳಿಯೇ ನಾಸ್ತಿ.
* ಹತ್ತು ಮಕ್ಕಳ ಜನಕ, ಇನ್ನೆಲ್ಲಿಯ ನರಕ?
* ‘ಪಿಲ್’ ನುಂಗಿ ಸಾಯದವ, ‘ಬಿಲ್’ ನುಂಗಿ ಸತ್ತಾನೇ?
* ಪಾಲಿಗೆ ಬಂದವನೇ ಪುರುಷಾಮೃಗ.
* ಗುರುವಿಗೆ ಬೇಕಾದ್ದು ಉರು ಮಂತ್ರ.
* ಸೀರೆ ನೋಡಿ ಸೀಟ್ ಹಾಕಿ. ವಾಲೆ ನೋಡಿ ಮಾಲೆ ಹಾಕಿ.
* ಥಾನುಂಟೋ, ಮೂರು ಮೊಳವುಂಟೋ.
* ಪಾಪಿ ಬಸ್ಸಿಗೆ ಹೋದರೆ, ಮೊಣಕಾಲು ಮಡಿಸಲೂ ಜಾಗವಿಲ್ಲ.
* ಬೊಗಳೋ ಹುಡುಗ ಬರೆಯೋದಿಲ್ಲ, ಬರೆಯೋ ಹುಡುಗ ಬೊಗಳೋದಿಲ್ಲ.
* ಮಕ್ಕಳಿಗೆ ಶಿಶುವಿಹಾರ, ದೊಡ್ಡವರಿಗೆ ಉಪಕಾರ.
* ತುಂಗೆ ನೀರಾದರೇನು? ಗಂಗೆ ನೀರಾದರೇನು? ಇಂಗು ಹಾಕಿದರೆ ಸಾರು ಚೆನ್ನ.
* ಹಿಂದಿ ಕಲಿಯದೆ, ಮಂದಿ ಅನ್ನಿಸಿಕೊಂಡರು.
* ಹೊಳೆ ದಾಟಿದ ಮೇಲೆ ಅಂಬಿಗ ಬಿಲ್ ಕಳಿಸಿದ.
* ಲೇ ಅಂತ ಅವಳನ್ನು ಕರೆಯುವುದಕ್ಕೆ ಮೊದಲೇ, ಲೋ ಅಂತ ಅವಳೇ ಪ್ರಾರಂಭಿಸಿಬಿಟ್ಟಳು.
* ಸಿನಿಮಾ ತಾರೆ ಪುರಾಣ ಊರಿಗೆಲ್ಲ ಪ್ರಾಣ.
* ಇಲ್ಲದ ಗಣೇಶನಿಗೆ ಬೆಲ್ಲದ ನೈವೇದ್ಯ
ಇರೋ ಗಣೇಶನಿಗೆ ಇರೋದರಲ್ಲೇ ನೈವೇದ್ಯ.
* ಮೂರು ಕೋರ್ಟ್ ಹತ್ತಿ ಮೂರು ನಾಮ ಮೆತ್ತಿಸಿಕೊಂಡ.
* * * * * * * *
ಶ್ರೀ ತ್ರೀ ಅವರೆ,
ನಾ ಕಸ್ತೂರಿ ಅವರು ನಾ-ಸ್ಟ್ರಡಾಮಸ್ ಅಂತೆಯೇ ಭವಿಷ್ಯ ನುಡಿಯೋರಾಗಿರ್ಬೇಕು.
ಪ್ರತಿಯೊಂದು ಕೂಡ ಸಮಕಾಲೀನ ಮೌಲ್ಯ ಹೊಂದಿದೆ.
“ಬೊಗಳೋ ಹುಡುಗ ಬರೆಯೋದಿಲ್ಲ, ಬರೆಯೋ ಹುಡುಗ ಬೊಗಳೋದಿಲ್ಲ ” ಅಂತ ನಮ್ಮ ಬ್ಯುರೋಗೆ ನೇರವಾಗಿ ಬಾಣ ಬಿಟ್ಟಂತಿದೆಯಲ್ಲಾ :))
ಅನ್ವೇಷಿಗಳೇ, ನನಗೂ ಆ ಗಾದೆ ಬರೆಯುವಾಗ ಬೊಗಳೆ ರಗಳೆ ನೆನಪು ಬಂದಿತು 🙂
ನೀವು ಬೊಗಳೋದು, ಬರೆಯೋದು ಮಾಡುವುದರಿಂದ ಅದು ನಿಮಗಲ್ಲಾ ಬಿಡಿ 🙂
ಹಿಹೀ..
>ಹಿಂದಿ ಕಲಿಯದೆ, ಮಂದಿ ಅನ್ನಿಸಿಕೊಂಡರು
ಇದೇನು ಗಾದೆ?
ಶಿವು, ಕರ್ನಾಟಕದ ಜನರ ಹಿಂದಿ ವ್ಯಾಮೋಹವನ್ನು ಕುರಿತು ಕಸ್ತೂರಿಯವರು ಈ ಗಾದೆ ಮಾಡಿದಂತಿದೆ 🙂 ಹಿಂದಿ ಕಲಿಯವದವರು ಯಾವುದಕ್ಕೂ ಉಪಯೋಗವಿಲ್ಲದವರು ಎನ್ನುವ ಭಾವನೆ ಆಗಿತ್ತೇನೋ. ಅನ್ನಿಸಿಕೊಳ್ಳುವುದು ಅನ್ನುವುದಕ್ಕೆ ಬೈಸಿಕೊಳ್ಳುವುದು ಎಂದೂ ಅರ್ಥವಿದೆ.
ನಕ್ಕು, ನಕ್ಕು ಹೊಟ್ಟೆ ಹುಣ್ಣಾಯ್ತು. ಡಾಕ್ಟ್ರ ಹತ್ರ ಹೋಪುಕೆ ದುಡ್ಡು ಕೊಡಿಃ-))
‘ಅನರ್ಥ ಕೋಶ’ವನ್ನು ೫ ವರ್ಷದ ಹಿಂದೆಯೆ ಖರೀದಿಸಿದ್ದೆ. ಆದರೆ ಇನ್ನೂ ಓದಿ ಮುಗಿಸ್ಲಿಕ್ಕೆ ಆಗಿಲ್ಲಃ-)
ಜಗಲಿ ಭಾಗವತರೇ, ಡಾಕ್ಟ್ರ ಹತ್ರ ಈಗಲೇ ಹೋಪುದು ಬೇಡ. ಬೀಚಿ ಅನರ್ಥಕೋಶವನ್ನೂ ಓದಿಕೊಂಡು ಕೊನೆಗೆ ಹೋಗಿ 🙂
ಬೀಚಿಯವರೂ ಬತ್ರಾ ಇಲ್ಲಿ? ಹಂಗಾರೆ ನಾನು ಇನ್ನೊಂದು ಹೊಟ್ಟೆ ಬಾಡಿಗೆಗೆ ತಕಂತೆಃ-)
ಹಾಗೇ ಮಾಡಿ ಭಾಗವತರೇ. ಒಂದು ಹೊಟ್ಟೆ ತುಂಬಿಸುವುದೇ ಕಷ್ಟ, ಎರಡು ಹೊಟ್ಟೆ ಪಾಡು ನಿಮ್ಮದು! 🙂
ನಿಮ್ಮ ಬರಹಕ್ಕೆ ನನ್ನ ಶುಭಾಶಯಗಳು.
ಎರಡೆರಡು ಹೊಟ್ಟೇನಾ ?