ನಾ.ಕಸ್ತೂರಿ – ನವೀನ ಗಾದೆಗಳು

ಕಸ್ತೂರಿ ಅನರ್ಥಕೋಶ ಓದಿ, ನಕ್ಕು, ಸುಧಾರಿಸಿಕೊಂಡಿದ್ದರೆ ಮಾತ್ರ ಕಸ್ತೂರಿಯವರ ನವೀನ ಗಾದೆಗಳನ್ನು ಓದಿ. 🙂

“ಅಣುಕಂಪ” ಎಂಬ ಪದಸೃಷ್ಟಿಗೆ ಕಾರಣವಾಗಿರುವ ಅಣುಗಾದೆಗಳನ್ನು ಗಮನಿಸಿ.

ನವೀನ ಗಾದೆಗಳು

* ಪರನಿಂದ ಗೃಹಕ್ಷಯ, ಪರಮಾಣು ಗ್ರಹಕ್ಷಯ.

* ಹೊಸದರಲ್ಲಿ ಅಣೂನ ಎತ್ತಿ ಎತ್ತಿ ಹಾಕಿದರು.

* ದೇವರು ಕೊಟ್ಟ ಅಣೂನ ಸಿಡಿಸಿ ಸಿಡಿಸಿ ನೋಡಿದರು.

* ಬಂದದ್ದೆಲ್ಲ ಬರಲಿ, ಅಟಾಮಿಕ್ ಭಯ ಇರಲಿ.

* ಸಂಕಟ ಬಂದಾಗ ವೆಂಕಾಟಾ! ಅಣೂ ತೆಗಿ.

* ಹೋದರೊಂದು ಅಣು! ಆದರೊಂದು ಜಯ!

* ಅಣುಸಿಡಿಸೋ ವಿಜ್ಞಾನಕ್ಕಿಂತ ಅರಿತು ನುಡಿಯೋ ಅಜ್ಞಾನವೇ ಲೇಸು

* ಕುಂಬಳಕಾಯಿ ಕಳ್ಳ ಅಂದರೆ, ಅಣು ಬುಟ್ಟಿ ತಗೊಂಡು ಬಂದ.

* ನಾಗ ಸಾಕಿ ನಾಶ ಮಾಡೋದೆ.

* ಪರಪಂಚ ಗೆದ್ದವರನ್ನ ಪರಮಾಣುವಿನಲ್ಲಿ ಹೊಡೆದರು.

* ಕೊಂಕಳಲ್ಲಿ ಪರಮಾಣು ! ಕೈಯಲ್ಲಿ ಶರಣಾಗತಿ ಷರತ್ತು.

* ಮೇಲಿನೋರಿಗೆ ಚೆಲ್ಲಾಟಂ ; ಕೆಳಗಿರೋರಿಗೆ ಕೊಲ್ಲಾಟಂ.

* ಬೆಂಗಳೂರಿಗೆ ಬಂದರೆ ತಂಗಳೇ ಗತಿ

* ತೀರ್ಥ ಕೊಟ್ಟರೆ ಥೈರಾಯಿಡ್, ಮಂಗಳಾರತಿ ಹಿಡಿದರೆ ಮೆನಿಂಜೈಟಿಸ್.

* ಉದರ ನಿಮಿತ್ತಂ ಬಹುಕೃತ ಮೋಸಂ.

* ಕ್ಯೂ ನಿಲ್ಲಿಸೋಕೆ ಕೂಸೇ ಇಲ್ಲ, ಕುಲಾವಿಗೆ ಪಂಜಾಬಿನ ಉಲ್ಲು ಕೊಡಿ ಅಂದಳಂತೆ.

* ತಲ್ಲಣಿಸದಿರು ಕಂಡ್ಯ ತಾಳಿ ಕಟ್ಟಿದವನ ಕಂಡು.

* ಬೆರಳು ತೋರಿಸು ಅಂದರೆ ಕೊರಳನ್ನೇ ಕೊಡುತ್ತಾನೆ.

* ತಾಳಿದವನಿಗೆ ತಾಳಿಯೇ ನಾಸ್ತಿ.

* ಹತ್ತು ಮಕ್ಕಳ ಜನಕ, ಇನ್ನೆಲ್ಲಿಯ ನರಕ?

* ‘ಪಿಲ್’ ನುಂಗಿ ಸಾಯದವ, ‘ಬಿಲ್’ ನುಂಗಿ ಸತ್ತಾನೇ?

* ಪಾಲಿಗೆ ಬಂದವನೇ ಪುರುಷಾಮೃಗ.

* ಗುರುವಿಗೆ ಬೇಕಾದ್ದು ಉರು ಮಂತ್ರ.

* ಸೀರೆ ನೋಡಿ ಸೀಟ್ ಹಾಕಿ. ವಾಲೆ ನೋಡಿ ಮಾಲೆ ಹಾಕಿ.

* ಥಾನುಂಟೋ, ಮೂರು ಮೊಳವುಂಟೋ.

* ಪಾಪಿ ಬಸ್ಸಿಗೆ ಹೋದರೆ, ಮೊಣಕಾಲು ಮಡಿಸಲೂ ಜಾಗವಿಲ್ಲ.

* ಬೊಗಳೋ ಹುಡುಗ ಬರೆಯೋದಿಲ್ಲ, ಬರೆಯೋ ಹುಡುಗ ಬೊಗಳೋದಿಲ್ಲ.

* ಮಕ್ಕಳಿಗೆ ಶಿಶುವಿಹಾರ, ದೊಡ್ಡವರಿಗೆ ಉಪಕಾರ.

* ತುಂಗೆ ನೀರಾದರೇನು? ಗಂಗೆ ನೀರಾದರೇನು? ಇಂಗು ಹಾಕಿದರೆ ಸಾರು ಚೆನ್ನ.

* ಹಿಂದಿ ಕಲಿಯದೆ, ಮಂದಿ ಅನ್ನಿಸಿಕೊಂಡರು.

* ಹೊಳೆ ದಾಟಿದ ಮೇಲೆ ಅಂಬಿಗ ಬಿಲ್ ಕಳಿಸಿದ.

* ಲೇ ಅಂತ ಅವಳನ್ನು ಕರೆಯುವುದಕ್ಕೆ ಮೊದಲೇ, ಲೋ ಅಂತ ಅವಳೇ ಪ್ರಾರಂಭಿಸಿಬಿಟ್ಟಳು.

* ಸಿನಿಮಾ ತಾರೆ ಪುರಾಣ ಊರಿಗೆಲ್ಲ ಪ್ರಾಣ.

* ಇಲ್ಲದ ಗಣೇಶನಿಗೆ ಬೆಲ್ಲದ ನೈವೇದ್ಯ
  ಇರೋ ಗಣೇಶನಿಗೆ ಇರೋದರಲ್ಲೇ ನೈವೇದ್ಯ.

*  ಮೂರು ಕೋರ್ಟ್ ಹತ್ತಿ ಮೂರು ನಾಮ ಮೆತ್ತಿಸಿಕೊಂಡ.

*       *      *      *       *    *     *       *

10 thoughts on “ನಾ.ಕಸ್ತೂರಿ – ನವೀನ ಗಾದೆಗಳು”

 1. ಶ್ರೀ ತ್ರೀ ಅವರೆ,
  ನಾ ಕಸ್ತೂರಿ ಅವರು ನಾ-ಸ್ಟ್ರಡಾಮಸ್ ಅಂತೆಯೇ ಭವಿಷ್ಯ ನುಡಿಯೋರಾಗಿರ್ಬೇಕು.

  ಪ್ರತಿಯೊಂದು ಕೂಡ ಸಮಕಾಲೀನ ಮೌಲ್ಯ ಹೊಂದಿದೆ.
  “ಬೊಗಳೋ ಹುಡುಗ ಬರೆಯೋದಿಲ್ಲ, ಬರೆಯೋ ಹುಡುಗ ಬೊಗಳೋದಿಲ್ಲ ” ಅಂತ ನಮ್ಮ ಬ್ಯುರೋಗೆ ನೇರವಾಗಿ ಬಾಣ ಬಿಟ್ಟಂತಿದೆಯಲ್ಲಾ :))

 2. sritri says:

  ಅನ್ವೇಷಿಗಳೇ, ನನಗೂ ಆ ಗಾದೆ ಬರೆಯುವಾಗ ಬೊಗಳೆ ರಗಳೆ ನೆನಪು ಬಂದಿತು 🙂
  ನೀವು ಬೊಗಳೋದು, ಬರೆಯೋದು ಮಾಡುವುದರಿಂದ ಅದು ನಿಮಗಲ್ಲಾ ಬಿಡಿ 🙂

 3. Shiv says:

  ಹಿಹೀ..

  >ಹಿಂದಿ ಕಲಿಯದೆ, ಮಂದಿ ಅನ್ನಿಸಿಕೊಂಡರು
  ಇದೇನು ಗಾದೆ?

 4. sritri says:

  ಶಿವು, ಕರ್ನಾಟಕದ ಜನರ ಹಿಂದಿ ವ್ಯಾಮೋಹವನ್ನು ಕುರಿತು ಕಸ್ತೂರಿಯವರು ಈ ಗಾದೆ ಮಾಡಿದಂತಿದೆ 🙂 ಹಿಂದಿ ಕಲಿಯವದವರು ಯಾವುದಕ್ಕೂ ಉಪಯೋಗವಿಲ್ಲದವರು ಎನ್ನುವ ಭಾವನೆ ಆಗಿತ್ತೇನೋ. ಅನ್ನಿಸಿಕೊಳ್ಳುವುದು ಅನ್ನುವುದಕ್ಕೆ ಬೈಸಿಕೊಳ್ಳುವುದು ಎಂದೂ ಅರ್ಥವಿದೆ.

 5. ನಕ್ಕು, ನಕ್ಕು ಹೊಟ್ಟೆ ಹುಣ್ಣಾಯ್ತು. ಡಾಕ್ಟ್ರ ಹತ್ರ ಹೋಪುಕೆ ದುಡ್ಡು ಕೊಡಿಃ-))

  ‘ಅನರ್ಥ ಕೋಶ’ವನ್ನು ೫ ವರ್ಷದ ಹಿಂದೆಯೆ ಖರೀದಿಸಿದ್ದೆ. ಆದರೆ ಇನ್ನೂ ಓದಿ ಮುಗಿಸ್ಲಿಕ್ಕೆ ಆಗಿಲ್ಲಃ-)

 6. sritri says:

  ಜಗಲಿ ಭಾಗವತರೇ, ಡಾಕ್ಟ್ರ ಹತ್ರ ಈಗಲೇ ಹೋಪುದು ಬೇಡ. ಬೀಚಿ ಅನರ್ಥಕೋಶವನ್ನೂ ಓದಿಕೊಂಡು ಕೊನೆಗೆ ಹೋಗಿ 🙂

 7. ಬೀಚಿಯವರೂ ಬತ್ರಾ ಇಲ್ಲಿ? ಹಂಗಾರೆ ನಾನು ಇನ್ನೊಂದು ಹೊಟ್ಟೆ ಬಾಡಿಗೆಗೆ ತಕಂತೆಃ-)

 8. sritri says:

  ಹಾಗೇ ಮಾಡಿ ಭಾಗವತರೇ.  ಒಂದು ಹೊಟ್ಟೆ ತುಂಬಿಸುವುದೇ ಕಷ್ಟ, ಎರಡು ಹೊಟ್ಟೆ ಪಾಡು ನಿಮ್ಮದು! 🙂

 9. Naveen Kumar c says:

  ನಿಮ್ಮ ಬರಹಕ್ಕೆ ನನ್ನ ಶುಭಾಶಯಗಳು.

 10. B.K.LAKKAPPA says:

  ಎರಡೆರಡು ಹೊಟ್ಟೇನಾ ?

Leave a Reply to B.K.LAKKAPPA Cancel reply

Your email address will not be published. Required fields are marked *

This site uses Akismet to reduce spam. Learn how your comment data is processed.

Related Posts

ಅತಿಥಿ ಎಂದರೆ ಯಾರು?ಅತಿಥಿ ಎಂದರೆ ಯಾರು?

ಸಂಪದದಲ್ಲಿ “ಮನುಧರ್ಮಶಾಸ್ತ್ರ” ಪುಸ್ತಕ ಓದಲು ಸಿಕ್ಕಿತು. ಲೇಖಕರು ಎನ್.ಕೆ ನರಸಿಂಹಮೂರ್ತಿ. ಅಲ್ಲಿ ತಂದಿರಿಸಿದ್ದ ಸುನಿಲ ಜಯಪ್ರಕಾಶ್ ಅವರಿಗೆ ಧನ್ಯವಾದಗಳು. ಆ ಪುಸ್ತಕದಲ್ಲಿ ಅತಿಥಿ ಪದಕ್ಕಿದ್ದ ಅರ್ಥ – ಈಗ ಬಳಕೆಯಲ್ಲಿರುವುದಕ್ಕಿಂತ ಬೇರೆಯಾಗಿರುವುದು ತಿಳಿದು ಆಶ್ಚರ್ಯವಾಯಿತು. ಬರಹ ನಿಘಂಟಿನ ಪ್ರಕಾರ – ಅತಿಥಿಯೆಂದರೆ, ಆಮಂತ್ರಣವನ್ನು

ಪುಸ್ತಕ, ಲೇಖಕರನ್ನು ಊಹಿಸುತ್ತೀರಾ?ಪುಸ್ತಕ, ಲೇಖಕರನ್ನು ಊಹಿಸುತ್ತೀರಾ?

ಭಾರತದ ಮುಖ್ಯ ಭೂಮಿ ದೂರಾಗತೊಡಗಿತು. ಸರಿಯುತ್ತಿದ್ದ ಭಾರತವನ್ನು ಸುಮಾರು ಹೊತ್ತು ಸುಮಾರು ಹೊತ್ತು ವೀಕ್ಷಿಸಿದ ಚಂದ್ರು ನನ್ನತ್ತ ತಿರುಗಿ ನನ್ನ ಕೈಕುಲುಕಿದರು. ನಾನು ಅವರತ್ತ ತಿರುಗಿ ಏಕೆನ್ನುವಂತೆ ನೋಡಿದೆ. “ಈ ದೇಶವನ್ನು ಒಂದು ಸಾರಿಯಾದರೂ ನಮ್ಮ ಜೀವಿತದಲ್ಲಿ ಬಿಟ್ಟು ಹೋಗುತ್ತಿದ್ದೆವಲ್ಲ” ಎಂದರು.

ಹುಚ್ಚುಮನಸ್ಸಿನ ಹತ್ತುಮುಖಗಳುಹುಚ್ಚುಮನಸ್ಸಿನ ಹತ್ತುಮುಖಗಳು

ಈಚಿನ ದಿನಗಳಲ್ಲಿ ಜ್ಞಾನಪೀಠ ಪಡೆದ ಸಾಹಿತಿಗಳನ್ನು ಲೇವಡಿ ಮಾಡಲು ಬಳಸುತ್ತಿರುವ ’ಜ್ಞಾನಪಿತ್ಥ” ಪದ ಮೊದಲ ಬಾರಿ ಬಳಕೆಗೆ ತಂದವರಾರು? ಬೇರಾರೂ ಅಲ್ಲ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರೇ ಆಗಿರುವ ಡಾ.ಶಿವರಾಮ ಕಾರಂತರು! “ಹುಚ್ಚುಮನಸ್ಸಿನ ಹತ್ತುಮುಖಗಳು” ಎಂಬ ಕಾರಂತರ ಆತ್ಮಕಥೆಯಲ್ಲಿ ಈ ಬಗ್ಗೆ ಪ್ರಸ್ತಾಪವಿದೆ.