ಚಿತ್ರ – ಮಾಂಗಲ್ಯ ಭಾಗ್ಯ (೧೯೭೬)
ಸಾಹಿತ್ಯ- ವಿಜಯ ನಾರಸಿಂಹ
ಸಂಗೀತ – ರಾಜನ್-ನಾಗೇಂದ್ರ
ಗಾಯಕ – ಎಸ್.ಪಿ. ಬಾಲಸುಬ್ರಮಣ್ಯಂ
ಆಸೆಯ ಭಾವ ಒಲವಿನ ಜೀವ ಒಂದಾಗಿ ಬಂದಿದೆ
ಹೊಸ ಬಗೆ ಗುಂಗಿನ ನಿಶೆ ತಾನೇರಿದಂತಿದೆ
ಕಾಮನ ಬಿಲ್ಲಿನಲಿ ಕಾಣದ ಕಾಂತಿಯನು
ಚಿಮ್ಮಿಸಿ ಹೊಮ್ಮುವ ಚೆಲುವಿಕೆ ಇಲ್ಲಿದೆ
ಪ್ರೇಮದ ಸೀಮೆಯಲಿ ಸೌರಭ ತುಂಬಿದ
ಬಾಡದ ಹೂವಿನ ಕಿರುನಗೆ ಚೆಲ್ಲಿದೆ
ಬಾಳಿನ ಭಾಗ್ಯ ನೌಕೆ ತೀರ ಸೇರೆ ತೇಲಿ ತೇಲಿದೆ
ಮನಸಿನ ರೂಪ ಮಂಗಳ ದೀಪ ಆನಂದ ತಂದಿದೆ
ಹೊಸ ಬಗೆ ಗುಂಗಿನ ನಿಶೆ ತಾನೇರಿದಂತಿದೆ|
ಕಣ್ಣಿನ ಸನ್ನೆಯಲಿ ಕಾವ್ಯವ ನೀ ಬರೆದೆ
ಹೆಜ್ಜೆಯ ಭಾವಕೆ ಹಂಸವೆ ನಾಚಿದೆ
ಗಾಳಿಯ ಬೀಸಿನಲಿ ಗಾನವು ನೀನಾದೆ
ನನ್ನೆದೆ ಸ್ಪಂದನ ನಿನ್ನದೇ ಚೇತನ
ಪ್ರೇಮದ ಲೀಲೆಯಲ್ಲಿ ಜೀವ ಭಾವ ನಾಟ್ಯವಾಡಿದೆ
ಜೀವನ ಜ್ಯೋತಿ ನೀಡುತ ಶಾಂತಿ ವೈಭೋಗ ತಂದಿದೆ
ಹೊಸ ಬಗೆ ಗುಂಗಿನ ನಿಶೆ ತಾನೇರಿದಂತಿದೆ |
ದೂರದ ಹೃದಯಗಳ ಸನಿಹದ ಬೇಗೆಯಲಿ
ವಿರಹದ ವೇದನೆ ಮುಗಿಲನು ಸೇರಿದೆ
ತೀರದ ದಾಹದಲಿ ಮೀರಿದ ಕಾತರಕೆ
ಮೇರೆಯೇ ಇಲ್ಲದ ತುಡಿತವು ತುಂಬಿದೆ
ಯಾವುದೊ ಮೋಡಿಯಲ್ಲಿ ಲೋಕವೆಲ್ಲ ತೂಗಿ ಸಾಗಿದೆ
ಪ್ರೇಮದ ಜೋಡಿ ಬಾಳಲಿ ಕೂಡಿ ಹಾಯಾಗಿ ಹಾಡಿದೆ
ಹೊಸ ಬಗೆ ಗುಂಗಿನ ನಿಶೆ ತಾನೇರಿದಂತಿದೆ|
* * * * * * *
ತ್ರಿವೇಣಿಯವರೇ,
ನೀವು ಮಾಡ್ತಾ ಇರೋದು ಸರೀನಾ 🙂
ಮೊದಲೇ ನನ್ನಂತಹ ದೂರದ ಹೃದಯಗಳ ವಿರಹದ ವೇದನೆ ಮುಗಿಲು ಮುಟ್ಟಿರುತ್ತೆ..ನೀವು ಇಂತಹ ಹಾಡುಗಳನ್ನು ತುಳಸಿವನದಲ್ಲಿ ಹಾಕಿ ನಮಗೆ ಓದಿಸಿದರೆ ನಮ್ಮ ಗತಿ ಏನಾಗಬೇಡಾ !
ಸಾಲುಗಳು ಹಾಗೇ ಇನ್ನೊಂದು ಲೋಕಕ್ಕೆ ತೇಲಿಸಿಕೊಂಡು ಹೋಗುಬಿಡುತ್ತೆ..
ಅಂದಾಗೆ ಮಾಲಾ ಅವರ ‘ಚಿತ್ರ-ದುರ್ಗ’ ಕ್ಕೆ ಹೋದರೆ ಅವರು ಅಲ್ಲಿ ‘ಒಂಥರಾ’ ಅನುಭವದ ಬಗ್ಗೆ ಓದಿಸುತ್ತಾರೆ..
ವಿರಹಿಗಳಿಗೆ ಕಾಲ ಅಲ್ಲಾ ರೀ ಇದು 🙂
“ನೀವು ಮಾಡ್ತಾ ಇರೋದು ಸರೀನಾ? -“
“ಯಾವ ಕಾಣಿಕೆ?” ಹಾಡಿಗೆ ಇದೆಂತಹ ಹಾಡು ಅಂತೀರಿ? ಈ ಹಾಡಿಗೆ ಹೀಗಂತೀರಿ. ನೀವು ಮೆಚ್ಚುವ ಹಾಡು ಯಾವುದು ಅಂತಾದ್ರೂ ತಿಳಿಸಿ. ಅದನ್ನೇ ಕೇಳಿಸುತ್ತೇನೆ 🙂
“ಅಂದಾಗೆ ಮಾಲಾ ಅವರ ‘ಚಿತ್ರ-ದುರ್ಗ’ ಕ್ಕೆ ಹೋದರೆ ಅವರು ಅಲ್ಲಿ ‘ಒಂಥರಾ’ ಅನುಭವದ ಬಗ್ಗೆ ಓದಿಸುತ್ತಾರೆ.., “
ಇರಬಹುದು. ಜಗಲಿ ಭಾಗವತರೂ ಒಂಥರಾ….ಒಂಥರಾ ಅಂತ ಒದ್ದಾಡ್ತಾ ಇರೋದನ್ನು ನೋಡಿದೆ 🙂
ಮರೆತಿದ್ದೆ ಶಿವು, ನನ್ನ ಬ್ಲಾಗಿನ ಕಾಮೆಂಟುಗಳಲ್ಲಿ, ಅರ್ಧ ಶತಕ ದಾಟಿದ್ದಕ್ಕೆ ಅಭಿನಂದನೆಗಳು ಮತ್ತು ಧನ್ಯವಾದಗಳು 🙂
ಶಿವು ಅವ್ರಿಗೆ ‘ವಿರಹ ನೂರು ನೂರು ತರಹ’ ಪದ್ಯ ಕೇಳಿಸಿಃ-)
“ಆಸೆಯ ಭಾವ ಒಲವಿನ ಜೀವ …”
‘ಆಸೆ’ ಮತ್ತು ‘ಒಲವು’ ಅಕ್ಕತಂಗಿಯರಿದ್ದಂತೆ. ಒಲವಿನ ಜೀವ (ಅಂದರೆ husband of ಒಲವು) ಸಹಜವಾಗಿಯೆ ‘ಆಸೆ’ಗೆ ಭಾವ!
ಜೋಶಿಯವರೇ, ಆಸೆಯ(ಆಶಾ) ಭಾವನನ್ನು ಪರಿಚಯ ಮಾಡಿಸಿದ್ದಕ್ಕೆ ಧನ್ಯವಾದಗಳು . “ಭಾವವೆಂಬ ಹೂವು ಅರಳಿ..” ಎಂಬ ಭಾವನ ಇನ್ನೊಂದು ಹಾಡು ನೆನಪಿಗೆ ಬಂದಿತು. 🙂
ತ್ರಿವೇಣಿಯವರೇ,
ಆಗಲೇ ಅರ್ಧಶತಕವೇ !!
ಅದಕ್ಕೆ ತಕ್ಕುದಾಗಿ ತುಳಸಿವನಕ್ಕೆ ಮರಳಿ ಮರಳಿ ಕರೆಸಿ ಓದಿಸುವಂತೆ ಮಾಡುತ್ತಿರುವುದಕ್ಕೆ ಬ್ಯಾಟ್ ಎತ್ತಿ ಪೆವಿಲಿಯನ್ನಲ್ಲಿ ಇರುವ ನಿಮಗೆ ವಂದನೆಗಳು 🙂
ಹೂಸೆಯವರೇ,
ಅದೇ ವೇಗದಲಿ ಭಾವಾರ್ಥವೆಂದರೆ ಭಾವ ಮಾಡಿಕೊಂಡ ಅರ್ಥವೇ?