ಕವನ – ಹಸುರು
ಕವಿ – ಕುವೆಂಪು
ನವರಾತ್ರಿಯ ನವಧಾತ್ರಿಯ
ಈ ಶ್ಯಾಮಲ ವನಧಿಯಲಿ
ಹಸುರಾದುದೊ ಕವಿಯಾತ್ಮಂ
ರಸಪಾನ ಸ್ನಾನದಲಿ !
ಹಸುರಾಗಸ, ಹಸುರು ಮುಗಿಲು ;
ಹಸುರು ಗದ್ದೆಯಾ ಬಯಲು ;
ಹಸುರಿನ ಮಲೆ ; ಹಸುರು ಕಣಿವೆ ;
ಹಸುರು ಸಂಜೆಯೀ ಬಿಸಿಲೂ !
ಆಶ್ವೀಜದ ಶಾಲಿವನದ
ಗಿಳಿಯೆದೆ ಬಣ್ಣದ ನೋಟ ;
ಅದರೆಡೆಯಲಿ ಬನದಂಚಲಿ
ಕೊನೆವೆತ್ತಡಕೆಯ ತೋಟ !
ಅದೊ ಹುಲ್ಲಿನ ಮಕಮಲ್ಲಿನ
ಹೊಸ ಪಚ್ಚೆಯ ಜಮಖಾನೆ
ಪಸರಿಸಿ ತಿರೆ ಮೈ ಮುಚ್ಚಿರೆ
ಬೇರೆ ಬಣ್ಣವನೆ ಕಾಣೆ !
ಹೊಸ ಹೂವಿನ ಕಂಪು ಹಸುರು,
ಎಲರಿನ ತಂಪೂ ಹಸುರು !
ಹಕ್ಕಿಯ ಕೊರಲಿಂಪು ಹಸುರು ;
ಹಸುರು ಹಸುರಿಳೆಯುಸಿರೂ !
ಹಸುರತ್ತಲ್ ! ಹಸುರಿತ್ತಲ್ !
ಹಸುರೆತ್ತಲ್ ಕಡಲಿನಲಿ
ಹಸುರ್ಗಟ್ಟಿತೊ ಕವಿಯಾತ್ಮಂ
ಹಸುರ್ನೆತ್ತರ್ ಒಡಲಿನಲಿ !*
(*ಆಶ್ವೀಜಮಾಸದಲಿ ‘ಕವಿಶೈಲ”ದ ನೆತ್ತಿಯಲ್ಲಿ ದೊರೆಕೊಂಡ ರಸಾನುಭೂತಿ)
———————————————————
ತ್ರಿವೇಣಿಯವರೇ ಇದೇನು, ನಿಮ್ ದನ ಇತ್ತೀಚೆಗೆ ಪತ್ತೆ ಇಲ್ಲ ಅಂದ್ಕೊಂಡ್ರೆ ಇವತ್ತು ‘ಹಸು’ರು ಕಂಡುಬಂದಿದೆಯಲ್ಲ! ಹುಲ್ಲಿನ ಮಕಮಲ್ಲಿನ… ಅಂತ ಸಹ ಇದೆ!
ಜೋಶಿಯವರೇ, ಹಸುರು ನನ್ನ ಮೆಚ್ಚಿನ ಬಣ್ಣ. ಹಸುರಿಗಾಗಿ ಹಾತೊರೆವ ಹಸುಗಳೂ ನನಗೆ ಅಷ್ಟೇ ಪ್ರಿಯ. ಹಿಂದೆ, ನಮ್ಮ ಮನೆಯಲ್ಲಿ ಹಸುಕರುಗಳನ್ನು ಸಾಕಿದ್ದು ಅವುಗಳ ಆತ್ಮೀಯ ಒಡನಾಟವೂ ಒಂದು ಕಾರಣ.
ತುಳಸಿವನದಲ್ಲಿ, ನಂ ದನಗಳು ಹಿತವಾಗಿ, ಹಸುರು ಮೇಯುತ್ತಿರುವ ಹಸನಾದ ದೃಶ್ಯವೊಂದನ್ನು ಕಣ್ಮುಂದೆ ಕಟ್ಟಿ ಕೊಟ್ಟಿದ್ದಕ್ಕಾಗಿ ನಿಮಗೆ ನನ್ನ ಧನ್ಯವಾದಗಳು. 🙂
very nice poem… i also like cows very much. i even have a toy cow on my dest at work, but it’s not ‘malenaadu hasu’, it’s ‘foreign-hasu’. my friend got it for me from the US.. 🙂
ಎಷ್ಟೋ ದಿವಸಗಳ ನಂತರ ಸಮಯ ಸಿಕ್ಕಿತು. ಅದಕ್ಕೆ ಈ ಕಡೆ ದಾವಿಸಿದೆ.
ಹಸುರಾಗಸ, ಹಸುರು ಮುಗಿಲು
ಇದನ್ನು ಜೀರ್ಣಿಸಿಕೊಳ್ಳೊದು ಕಷ್ಟ. ಕುವೆಂಪು ಏನು ಹೇಳ ಹೊರಟ್ಟಿದ್ದರೆ ಅನ್ನೊದು ಸ್ಪಷ್ಟವಾಗಿಲ್ಲ.
ಇಂತಿ
ಭೂತ
ಭೂತ ತುಂಬಾ ಅಪರೂಪವಾಗಿತ್ತು. ಬಿಡುವು ಮಾಡಿಕೊಂಡು ಬಂದಿದ್ದು ಸಂತೋಷವಾಯಿತು 🙂
“ಹಸುರಾಗಸ, ಹಸುರು ಮುಗಿಲು
ಇದನ್ನು ಜೀರ್ಣಿಸಿಕೊಳ್ಳೊದು ಕಷ್ಟ. ಕುವೆಂಪು ಏನು ಹೇಳ ಹೊರಟ್ಟಿದ್ದರೆ ಅನ್ನೊದು ಸ್ಪಷ್ಟವಾಗಿಲ್ಲ.”
– ಎಲ್ಲೆಲ್ಲೂ ಹಸುರು! ಕವಿಶೈಲದ ಸುತ್ತಮುತ್ತ ಕಣ್ತುಂಬುವಂತೆ ಹರಡಿರುವ ಸಮೃದ್ಧ ಹಸಿರನ್ನು ಕವಿ ಅತಿಶಯೋಕ್ತಿಗಳಿಂದ ವರ್ಣಿಸಿದ್ದಾರೆ. ಹಸುರಾಗಸ,ಹಸುರು ಮುಗಿಲು …ಎಂಬ ಉಪಮೆಗಳಿಂದಲೂ ಕುವೆಂಪು ಅವರಿಗೆ ತೃಪ್ತಿಯಾದಂತಿಲ್ಲ.
ಕವಿತೆಯ ಕೊನೆಗೆ, ಕಡುಗೆಂಪು ಬಣ್ಣದ ರಕ್ತವನ್ನೂ ಕವಿ ಹಸುರಾಗಿಸಿದ್ದಾರೆ. 🙂 ” ಹಸುರ್ಗಟ್ಟಿತೊ ಕವಿಯಾತ್ಮಂ
ಹಸುರ್ನೆತ್ತರ್ ಒಡಲಿನಲಿ !” –
ಶ್ರೀಲತಾ , ನಿಮ್ಮನ್ನೂ ನೋಡಿ ತುಂಬಾ ದಿನವಾಯಿತು ಬಹುಶಃ – “Woh kagaz ki kashti, woh baarish ka paani ” ಹುಡುಕಿಕೊಂಡು ಹೋಗಿದ್ದಿರೇನೊ 🙂
‘foreign-hasu’ – ಗಳಿಗೆ ಸೀಮೆ ಹಸು ಅಂತ ಕರೆಯುತ್ತಾರೆ 🙂
ಕಾಮಾಲೆ ಆದವ್ರಿಗೆ ಜಗತ್ತೆಲ್ಲ ಹಳದಿಯಾಗಿ ಕಾಣತ್ತಂತೆ. ಎಲ್ಲ ಹಸ್ರಾಯಿ ಕಾಂಬ್ದಕ್ಕೆ ಎಂತ ಅಂತ್ರ್?
ಕಾಮಾಲೆ ಆದವ್ರ ಪದ್ಯ ಗೊತ್ತಿತ್ತಾ?
ಬಾನ್yellow ಭುವಿyellow:-)) (ಪದ್ಯ ಸರಿ ನೆನಪಿಲ್ಲ. ಸರಿ ಮಾಡಿ ನೀವ್).
ತ್ರಿವೇಣಿಯವರೇ,
ಕುವೆಂಪು ಈ ಹಸಿರು ಪ್ರೀತಿ..ಪೂಚಂತೇ ಅವರಿಗೂ ವರ್ಗ ಆಗಿದೆ..
ಪೂಚಂತೇ ಮೂಡಗೆರೆಯ ಅವರ ಹಸಿರಿನ ಮನೆಯಲಿ ಕುಳಿತು ಕರ್ವಾಲೋ,ಮಿಲೇನಿಯಂ ಕತೆಗಳನ್ನು ಬರೆದು ಇನ್ನೊಂದು ಹಸಿರು ಲೋಕಕ್ಕೆ ಕರೆದೊಯ್ತಾ ಇರ್ತಾರೆ
ಸರ್ ಈ ಪದ್ಯದ ಒಂದಷ್ಟು ವಿಮರ್ಶೆ ಕಳುಹಿಸಿ ಕೊಡಿ. ಬೋಧನೆಗೆ ಅಗತ್ಯವಿದೆ.
ಸರ್, ಈಗಾಗಲೇ ಒಬ್ಬರು ಅಧ್ಯಾಪಕರು ಇದರ ವಿಮರ್ಶೆ ಕಳಿಸಿಕೊಡಿ ಎಂದು ಪ್ರಾರ್ಥಿಸಿದ್ದಾರೆ. ನಂದು ಅದೇ ಪ್ರಾರ್ಥನೆ.