ಕವಿ – ಜಿ.ಎಸ್.ಶಿವರುದ್ರಪ್ಪ
ಗಾಯಕ – ಸಿ. ಅಶ್ವಥ್
ಆಕಾಶದ ನೀಲಿಯಲ್ಲಿ
ಚಂದ್ರ ತಾರೆ ತೊಟ್ಟಿಲಲ್ಲಿ
ಬೆಳಕನಿಟ್ಟು ತೂಗಿದಾಕೆ
ನಿನಗೆ ಬೇರೆ ಹೆಸರು ಬೇಕೆ?
ಸ್ತ್ರೀ ಎಂದರೆ ಅಷ್ಟೇ ಸಾಕೆ?
ಹಸುರನುಟ್ಟ ಬೆಟ್ಟಗಳಲಿ
ಮೊಲೆಹಾಲಿನ ಹೊಳೆಯನಿಳಿಸಿ
ಬಯಲ ಹಸುರ ನಗಿಸಿದಾಕೆ
ನಿನಗೆ ಬೇರೆ ಹೆಸರು ಬೇಕೆ?
ಸ್ತ್ರೀ ಎಂದರೆ ಅಷ್ಟೇ ಸಾಕೆ?
ಮರ ಗಿಡ ಹೂ ಮುಂಗುರುಳನು
ತಂಗಾಳಿಯ ಬೆರಳ ಸವರಿ
ಹಕ್ಕಿ ಗಿಲಕಿ ಹಿಡಿಸಿದಾಕೆ
ನಿನಗೆ ಬೇರೆ ಹೆಸರು ಬೇಕೆ?
ಸ್ತ್ರೀ ಎಂದರೆ ಅಷ್ಟೇ ಸಾಕೆ?
ಮನೆಮನೆಯಲಿ ದೀಪ ಮುಡಿಸಿ
ಹೊತ್ತು ಹೊತ್ತಿಗೆ ಅನ್ನ ಉಣಿಸಿ
ತಂದೆ ಮಗುವ ತಬ್ಬಿದಾಕೆ
ನಿನಗೆ ಬೇರೆ ಹೆಸರು ಬೇಕೆ?
ಸ್ತ್ರೀ ಎಂದರೆ ಅಷ್ಟೇ ಸಾಕೆ?
* * * *
ತುಳಸಿವನದ ಗೆಳತಿಯರಿಗೆಲ್ಲ “ವಿಶ್ವ ಮಹಿಳಾ ದಿನ”ದ ಹಾರ್ದಿಕ ಶುಭಾಶಯಗಳು!
ವಿಶ್ವ ಮಹಿಳಾ ದಿನಕ್ಕೆ ಒಳ್ಳೆಯ ಹಾಡು, ಧನ್ಯವಾದಗಳು ವೇಣಿ. ನಿನಗೂ ನಿನ್ನ ಮಗಳಿಗೂ ನನ್ನ ಹಾರೈಕೆಗಳು.
>ಮರ ಗಿಡ ಹೂ ಮುಂಗುರುಳನು
ತಂಗಾಳಿಯ ಬೆರಳ ಸವರಿ
ಹಕ್ಕಿ ಗಿಲಕಿ ಹಿಡಿಸಿದಾಕೆ
ನಮನಗಳು ಸ್ತ್ರೀ ಸಮುದಾಯಕ್ಕೆ..
ತ್ರಿವೇಣಿಯವರೇ,
ಮಹಿಳಾ ದಿನಾಚರಣೆಯ ಶುಭಾಶಯಗಳು !
ಸಂಗೀತ, ಮತ್ತು ದ್ವನಿ ಏರಡು ಸೊಗಸಾಗಿದೆ. ಶಿವರುದ್ರಪ್ಪನವರ ಕವನ ಕೂಡ ಸೊಗಸು. ಪ್ರಕೃತಿ ಮತ್ತು ಸ್ತ್ರೀ ಎರಡನ್ನು ಹೋಲಿಸುವ ಕಾರ್ಯ ಅನಾದಿ ಕಾಲದಿಂದಲು ನಡೆದುಬಂದಿದೆ. ಇಲ್ಲಿ ಒಂದು ವಿಸಿಷ್ಟವಾದ ಕಲ್ಪನೆ ಮೂಡಿಸಿದ್ದರೆ ಜಿ.ಎಸ್.ಎಸ್.
ಇಂತಿ
ಭೂತ
Woman is imprisoned thru glorification. It’s not the way of her liberation.
ಸುನಾಥರೇ, ತುಳಸಿವನಕ್ಕೆ ಸ್ವಾಗತ. ಪ್ರತಿಕ್ರಿಯೆಗೆ ಧನ್ಯವಾದಗಳು!