ಚಿತ್ರ: ರಸಿಕ
ಸಾಹಿತ್ಯ, ಸಂಗೀತ : ಹಂಸಲೇಖ
ಗಾಯಕರು: ಎಸ್.ಪಿ. ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ
ಚಿಟಪಟ ಚಿಟಪಟ ಚಿಟಪಟ ಅಂತ
ಹಿಡುಕೊಂತ ಮಳೆಯು ಹಿಡುಕೊಂತ
ಅತ್ತ ಜೋರಾಗೂ ಬರದು
ಇತ್ತ ಸುಮ್ಮನೂ ಇರದು
ಸ್ನಾನ ಆದಂಗೂ ಇರದು
ಧ್ಯಾನ ಮಾಡೋಕೂ ಬಿಡದು
ನೆನೆಯುವ ಜೀವಾನ ನೆನೆಸುವ ಈ ಸೋನೆ
ಬಯಸಿದ ಆಸೇನಾ ಬರಿಸುವ ಈ ಸೋನೆ
ಬೇಡ ಅನ್ನೋಕೂ ಬಿಡದು
ಬೇಕು ಅನ್ನೋಕೂ ಬಿಡದು
ಮಳೆಯಲ್ಲಿ ಮಗುವಾಗಿ ಜಿಗಿಯುವ ಈ ಜಾಣೆ
ನೆನೆದರೆ ಶೃತಿಯಲ್ಲಿ ನುಡಿಯುವ ನರವೀಣೆ
ಮುದ್ದು ಮಾಡೋಕೂ ಬಿಡದು
ಜಿಡ್ಡು ಹೋಗೋಕೂ ಬಿಡದು
ಗುಡುಗುಡು ತಾನ ಮುಗಿಲೊಳಗೆ
ಧಿರನನ ಧಿರನನ ಧಿರನನ
ಢವ ಢವ ಗಾನ ಎದೆಯೊಳಗೆ
ಧಿರನನ ಧಿರನನ ಧಿರನನ ||
ಸ್ವರಗಳ ಮಳೆಯಲ್ಲಿ ಕಾಲಕೆ ಸನ್ಮಾನ
ಒಲವಿನ ಮಳೆಯಲ್ಲಿ ಹೃದಯಕೆ ಸನ್ಮಾನ
ಅತ್ತ ಸಂಗೀತ ಶರಣು ಇತ್ತ ಪ್ರಾಯಾನೂ ಶರಣು
ಕಡಲಿಗೆ ಕಾಲಿಲ್ಲ ನವಿಲಿಗೆ ನಾಡಿಲ್ಲ
ಮನಸಿಗೆ ಮಾತಿಲ್ಲ ಪ್ರೀತಿಗೆ ಬರವಿಲ್ಲ
ಮಳೆಯು ನಮ್ಮನ್ನು ಬಿಡದು
ನಾವು ಪ್ರೀತಿನ ಬಿಡೆವು
ಥಕ ಥಕ ಮಿಂಚು ಮಳೆಯೊಳಗೆ
ಧಿರನನ ಧಿರನನ ಧಿರನನ
ಮಿಕ ಮಿಕ ಸಂಚು ಕಣ್ಣೊಳಗೆ
ಧಿರನನ ಧಿರನನ ಧಿರನನ ||
***
ಇದೇನಪ್ಪ, ಕಥೆಯೊಳಗೆ ಮಳೆ ಬಂತೂಂತ ಇಲ್ಲೂ ಮಳೆ ತರಿಸಿದ್ದೀಯ?
ಊರಲ್ಲಿ ಮಳೆ ಬೇಕಂತೆ ಸ್ವಲ್ಪ, ಸಿಕ್ಕಾಬಟ್ಟೆ ಸೆಖೆ, ಉರಿ, ಬೆಂದು ಹೋಗೋ ಹಾಗಿದೆ… ಅನ್ನುತ್ತಾರೆ. ಈ ಮಳೆಯನ್ನು ಅಲ್ಲಿಗೂ ಒಂದಿಷ್ಟು ಕಳಿಸೋಣ್ವಾ?