ತಪ್ಪಿಸಿಕೊಳ್ಳಲು ಪ್ರಯತ್ನಿಸಿದಷ್ಟೂ ಸುನಯನ ಮತ್ತೆ ಮತ್ತೆ ಕಾಡ ಹತ್ತಿದಳು….

***************************
“ಬನ್ನಿ ಒಳಗೆ” ….ಮನೆಯ ಮುಖ್ಯದ್ವಾರದ ಎರಡೂ ಬದಿಗೆ ಕೈ ಆನಿಸಿ ನಿಂತ ಸುನಯನ. ಹೊಳೆಯುವ ಕಣ್ಣು, ದುಂಡುಮುಖ, ಅರೆಬಿರಿದ ತುಟಿ, ತಿದ್ದಿದ ಹುಬ್ಬು, ಹಣೆಯನ್ನು ಸ್ವಲ್ಪವೇ ಸ್ವಲ್ಪ ಆವರಿಸಿದ್ದ ಮೋಹಕ ಮುಂಗುರುಳು, ಸ್ನಿಗ್ಧನಗು… ಮತ್ತದೆಲ್ಲಕ್ಕೂ ಕಳಶವಿಟ್ಟಂತಿದ್ದ ಆಕೆಯ ಗುಳಿಬಿದ್ದ ಕೆನ್ನೆ….ಸುನಯನಳನ್ನು ಅದೇ ಮೊದಲ ಬಾರಿ ನೊಡುತ್ತಿದ್ದ ಸುದೀಪ ಸ್ತಭ್ದನಾದ…

“ಏನು ಹಾಗೆ ನೋಡ್ತಿದೀರಾ? ದಾಕ್ಷಿಣ್ಯ ಬೇಡ. ಬನ್ನಿ ಒಳಗೆ”…..

ಸುದೀಪನ ಮೈ ತುಂಬ ವಿದ್ಯುದ್ಸಂಚಾರ. ನಾನು ಇಂಥ ಚೆಲುವೆಯ ಜೊತೆ ಒಂದೇ ಕೊಡೆಯಡಿಯಲ್ಲಿ ಬಂದದ್ದಾ? ಆಗ ಮುಖನೋಡಬೇಕೆನ್ನಿಸಿದರೂ ಆಗಿರಲಿಲ್ಲ. ಆಗೊಮ್ಮೆ ಈಗೊಮ್ಮೆ ಭುಜಕ್ಕೆ ಭುಜ ತಾಕಿದಾಗ ವಿಚಿತ್ರ ಖುಶಿಯೆನ್ನಿಸುತ್ತಿತ್ತು ಅಷ್ಟೆ.

“ಮನೆಯವರದ್ದೆಲ್ಲ ಊಟ ಆಯ್ತು. ನಮ್ಮಿಬ್ಬರದ್ದೆ ಬಾಕಿ” ಅಂತಂದ ಸುನಯನ ಬಾಳೆ ಎಲೆ, ಮಣೆ, ನೀರಿನ ಲೊಟವನ್ನಿಟ್ಟು ಸುದೀಪನನ್ನ ಊಟಕ್ಕೆ ಕರೆದಳು.

“ನಿಮ್ಮದು…..” ಅಂತ ಕೇಳಿದ ಸುದೀಪ.
“ನಾನೂ ಊಟ ಮಾಡ್ತೇನೆ. ನಿಮಗೆ ಮೊದ್ಲು ಬಡಿಸಿ..”
“ನಮ್ಮ ಮಗಳು ಬಡಿಸ್ತಾಳೆ. ಸಂಕೋಚ ಬೇಡ. ನಮ್ಮಲ್ಲಿಯ ಅಡುಗೆ ನಿಮಗೆ ಇಷ್ಟವಾಗುತ್ತೋ ಇಲ್ವೋ…” ಆಕೆಯ ತಾಯಿ ಉಪಚಾರಕ್ಕೆ ಬಂದಿದ್ದರು….
“ನನಗೆ ದೊಡ್ಡಸ್ತಿಕೆಯಿಲ್ಲ. ಬೇಕಿದ್ರೆ ನಾನೇ ಕೇಳ್ತೀನಿ..ರಸ್ತೆಯಲ್ಲಿ ಅಲೆಯುತ್ತಿದ್ದ ನನ್ನನ್ನ ಕರೆದು ಊಟ ಹಾಕಿಸ್ತಿದೀರಿ. ತುಂಬ ಉಪಕಾರ ಆಯ್ತು” …ಸುದೀಪ ಒಳ್ಳೆ ಹುಡುಗನ ಪೋಸು ಕೊಡಲು ಆರಂಭಿಸಿದ…

” ನೀವು ಕೆಲಸ ಮಾಡ್ತಿದೀರಾ?” ಆಕೆಯ ತಂದೆಯ ಆಗಮನ…

“ಏನಪ್ಪಾ, ಏನು ಕೆಲಸ ಮಾಡ್ತಾ ಇದೀಯಾ ಅಂತ ನಾನು ಕೇಳಿದ್ದು. ನಿನ್ನ ನೋಡಿದ್ರೆ ಏನೋ ಭಾರಿ ಕನಸು ಕಾಣ್ತಾ ಇರೋ ಹಾಗಿದೆಯಲ್ಲಾ! ”
ಹಹ್ಹಹ್ಹ…. ಯಾರೋ ಜೋರಾಗಿ ನಕ್ಕಂತಾಗಿ ಸುದೀಪ ಬೆಚ್ಚಿ ಬಿದ್ದ. ಅರೇ, ‘ಇದ್ಯಾರೋ ಹಿರಿಯರು, ಎಲ್ಲಿದ್ದೇನೆಂದು’ ಎಚ್ಚರಗೊಂಡ ಸುದೀಪನಿಗೆ ತನ್ನನ್ನೇ ಪಿಳಿ-ಪಿಳಿ ನೋಡುತ್ತಿದ್ದ ಸೃಷ್ಟಿ ಕಾಣಿಸಿದಳು, ಹೌದು, ಥೇಟ ಸುನಯನನಳ ಕಂಗಳೇ!!! ಆ ಮುದ್ದು ಮರಿಯ ಸುಂದರ ಸಮ್ಮೋಹಕ ಕಣ್ಣುಗಳು, ಸುದೀಪನ ಮನಸ್ಸನ್ನು ನೀಲಿಕೇರಿಯ ನೆನಪಿನಂಗಳಕ್ಕೆ ಜಾರಿಸಿಬಿಟ್ಟಿದ್ದವು.
“ಇವರು ಸ್ವಲ್ಪ ಹಾಗೇ ಅಪ್ಪಾ, ಸ್ವಲ್ಪ ಕನಸು ಕಾಣೋದು ಜಾಸ್ತಿ” ಯಾಮಿನಿಯ ಮಾತುಗಳಿಂದ, ಆ ಹಿರಿಯರು ಅವಳ ತಂದೆ ಎಂದು ಅರಿವಾಗಿ ‘ನಮಸ್ಕಾರ’ ಹೇಳಿದ.

“ಬಾರಪ್ಪಾ, ನಿಧಾನಕ್ಕೇ ಕೂತ್ಕೊಂಡು ಮಾತಾದಡೋಣ. ಪಾಪ, ಆಗಲಿಂದ ಸುಮ್ನೇ ನಿಂತೇ ಇದೀಯಲ್ಲಾ” ಆತ್ಮೀಯವಾಗಿ ಕರೆದವರನ್ನಿ ಹಿಂಬಾಲಿಸಿ, ಒಳಗಿನ ಸೋಫಾ ಮೇಲೆ ಕುಳಿತ. ‘ಯಾಮಿನಿಗೇ ಮದುವೆ ಇಲ್ಲ, ಆದರೆ ಮಗಳಿದ್ದಾಳೆ’ ಎನ್ನುವ ಗೊಂದಲ, ಮತ್ತೆ ಮತ್ತೆ ಕಾಡುವ ಸುನಯನಳ ನೆನಪುಗಳಲ್ಲಿ ಮುಳುಗಿ ಮೂಕನಂತಿದ್ದ . ‘ಪಾಪ, ಬಹಳ ಸಂಕೋಚದ ಹುಡುಗ’ ಎಂದು ಭಾವಿಸಿದ ರಾಯರು “ನಮ್ಮ ಯಾಮಿನಿ ನಿನ್ನ ವಿಷಯ ಬಹಳ ಹೇಳ್ತಿರ್ತಾಳೆ. ಯಾವೂರು, ಅಪ್ಪ ಅಮ್ಮ ಏನು ಮಾಡ್ತಾರೆ?” ಎಂದು ಲೋಕಾಭಿರಾಮ ಶುರು ಮಾಡಿದರು. ಅವರ ಅಪ್ಯಾಯತೆಯಿಂದ ಚೇತರಿಸಿಕೊಂಡ ಸುದೀಪ “ಮಂಗಳೂರು ಹತ್ತಿರ ನಮ್ಮೂರು. ಅಪ್ಪ ಇಲ್ಲ, ಚಿಕ್ಕವನಾಗಿದ್ದಾಗಲೇ ಹೋಗಿಬಿಟ್ರು. ಅಮ್ಮ ಒಬ್ರೇ, ಊರಲ್ಲೆ ಇದಾರೆ” ಎಂದು ಪರಿಚಯ ಹೇಳಿಕೊಂಡ.

ಆಷ್ಟು ಹೊತ್ತಿಗೆ ಸೃಷ್ಟಿಯನ್ನೆತ್ತಿಕೊಂಡ ಯಾಮಿನಿ ಅಲ್ಲಿಗೆ ಬಂದಳು.

`ಬಾ ಪುಟ್ಟಿ…’ಸೃಷ್ಟಿಯೆಡೆಗೆ ಕೈ ಚಾಚಿ ಕರೆದ `ಇವನನ್ನು ನಂಬಬಹುದೇ…?’ ಎಂದು ತನ್ನ ಬಟ್ಟಲು ಕಂಗಳಲ್ಲಿ ಪ್ರಶ್ನೆ ತುಳುಕಿಸುತ್ತಾ ಸುದೀಪನನ್ನೇ ನಿರುಕಿಸಿದಳು ಸೃಷ್ಟಿ
ಸುನಯನಳಿಗೂ ನನ್ನ ಬಗ್ಗೆ ಇದೇ ಸಂದೇಹ ಇತ್ತಾ? ಒಂದುಕ್ಷಣ ಅವನ ಮನದಲ್ಲಿ ಸಂದೇಹ ಕಾಡಿತು `ಪುಟ್ಟೀ…ಅಂಕಲ್ ತುಂಬಾ ಒಳ್ಳೆಯವರಮ್ಮಾ…ಹೋಗು ..’
ಮಗಳನ್ನು ಪುಸಲಾಯಿಸುತ್ತಿದ್ದಳು ಯಾಮಿನಿ.`ಹೋಗು ಪುಟ್ಟಮ್ಮಾ..’ಯಾಮಿನಿಯ ತಂದೆಯೂ ದನಿಗೂಡಿಸಿದರು ಸೃಷ್ಟಿಯ ಮನದಲ್ಲಿನ್ನೂ ಸುದೀಪನ ಬಗ್ಗೆ ನಂಬಿಕೆ ಬಂದತಿಲ್ಲಾ…
ಅವನನ್ನೇ ನೆಟ್ಟದೃಷ್ಟಿಯಿಂದ ನೋಡುತ್ತಿದ್ದಳು.
ಯಾಮಿನಿಯ ತಂದೆ ಅಂದಿನ ಪೇಪರ್ ಕೈಗೆತ್ತಿಕೊಳ್ಳುತ್ತಾ `ಇಲ್ಲೇ ಊಟ ಮಾಡಿಕೊಂಡು ಹೋಗೀ…ಇಷ್ಟೊತ್ತಾಗಿದೆ ಇನ್ನು ರೂಮಿಗೆ ಹೋಗಿ ಏನು ಮಾಡ್ಕೋತೀರಾ…’ಅಂದರು
`ಪುಟ್ಟಿ ನೀನು ಅಂಕಲ್ ಹತ್ರ ಹೋಗ್ತೀಯಾ.. ಜಾಣೆ… ಬಂಗಾರಿ… ಅಮ್ಮ ಅಡುಗೆ ಮಾಡುತ್ತೆ..’ಯಾಮಿನಿಯ ಮಾತಿಗೆ ಸೃಷ್ಟಿ ಬರಿದೇ ತಲೆ ಆಡಿಸಿ ನಕಾರ ಸೂಚಿಸಿದಳು
`ಅಂಕಲ್ ನಿನ್ನ ಹೊರಗಡೆ ಕರ್ಕೊಂಡು ಹೋಗ್ತಾರೆ’ ಮೆಲ್ಲಗೆ ಬಾಣ ಬಿಟ್ಟಳು ಯಾಮಿನೀ.`ನಿಂಗೆ ಬಣ್ಣಬಣ್ಣದ ಹೂವು,ಕಾರು,ಅಂಗಡಿ ಎಲ್ಲಾ ತೋರುಸ್ತಾರೆ…’
ಈ ಬಾರಿ ಸೃಷ್ಟಿ ಹೊರಗಿನ ಬಣ್ಣದ ಜಗತ್ತಿನ ಆಕರ್ಷಣೆಯಿಂದ ತಪ್ಪಿಸಿಕೊಳ್ಳಲಾರದೇ ಹೋದಳು! ನಸು ನಗುತ್ತಾ ಸುದೀಪನ ಚಾಚಿದ ತೋಳುಗಳೊಳಗೆ ಬಂದುಬಿಟ್ಟಳು.

`ಇದೇನೋ ಮಗು… ಆದರೆ ದೊಡ್ಡವರಿಗೂ ಹೊರಗಿನ ಬಣ್ಣದ ಜಗತ್ತಿನ ಆಕರ್ಷಣೆಯಿಂದ ತಪ್ಸಿಸಿ ಕೊಳ್ಳುವುದು ಕಷ್ಟವೇನೋ…’ಸೃಷ್ಟಿಯನ್ನು ತೋಳಲ್ಲಿ
ತುಂಬಿಕೊಂಡು ಯೋಚಿಸಿದ ಸುದೀಪ. ಫಾರಿನ್ ಹುಡುಗ ನಾನು ತೋರಿಸಲಾಗದ ಹೊರಗಿನ ಬಣ್ಣದ ಜಗತ್ತನ್ನು ತೋರಿಸುವನೆಂದು ಅವನನ್ನು ಒಪ್ಪಿ ನಡೆದಳೇ ಸುನಯನಾ?
ಈಗ ಯಾಮಿನೀ`ನಿಂಗೆ ಬಣ್ಣಬಣ್ಣದ ಹೂವು,ಕಾರು,ಅಂಗಡಿ ಎಲ್ಲಾ ತೋರುಸ್ತಾರೆ’ ಎಂದು ಸೃಷ್ಟಿಗೆ ಹೇಳಿದ ರೀತಿಯಲ್ಲೇ ಸುನಯನಳ ಅಪ್ಪ
ನನ್ನ ಸುನೀ ಗೂ ಪುಸಲಾಯಿಸಿ ಮದುವೆಗೆ ಒಪ್ಪಿಸಿ ಬಿಟ್ಟರೇ?

ಯಾಮಿನಿಯ ದನಿಗೆ ಎಚ್ಚೆತ್ತ ಸುದೀಪ.

`ತುಂಬಾ ದೂರ ಕರ್ಕೊಂಡು ಹೋಗ್ ಬೇಡೀ…ಅವಳ ಊಟದ ಟೈಂ ಆಯಿತು… ಹತ್ತೇ ಹತ್ತು ನಿಮಿಷ ಅಡುಗೆ ಆಗಿ ಬಿಡುತ್ತೆ ಬೇಗ ಬಂದ್ಬಿಡಿ..’ ಅನ್ನುತ್ತಾ ಅಡುಗೆ ಮನೆಗೆ ನಡೆದಳು. ಯಾಮಿನಿ. ಯಾಮಿನಿಯ ಪುಟ್ಟ ಅಂಗಳದ ಹತ್ತೆಂಟು ಕುಂಡಗಳಲ್ಲಿ ಬಣ್ಣಬಣ್ಣದ ಹೂಗಳು ಅರಳಿದ್ದವು `ನೋಡು ಪುಟ್ಟೀ…ಕೆಂಪುಹೂ.. ಹಳದಿ ಹೂ..
ಇಲ್ ನೋಡೂ..ಎಷ್ಟ್ ಚೆನ್ನಾಗಿದೆ’ ಹೂಗಳನ್ನು ನೋಡಿ ಕಣ್ಣು ಅರಳಿಸಿ ನಕ್ಕಳು ಸೃಷ್ಟಿ.

“ಪ್ಯಾರೀ ಹೇ ಪೂಲೋಂಕಿ ಪಂಖುರಿಯಾ…
ಪರ್ ತೇರೀ ಫಲಕೋಂಸಿ ಪ್ಯಾರೀ ಕಹಾ…
ಸುನಯ್ ನಾ…”

ಯೇಸು ದಾಸ್ ಸುದೀಪನ ಕಿವಿಯಲ್ಲಿ ಗುಣುಗುಣಿಸಿದ…

5 thoughts on “ನೆನಪಾಗಿ ಕಾಡುವ ಸುನಯನಾ – 3”

  1. ಸುದೀಪನ ಮೈ ತುಂಬ ವಿದ್ಯುದ್ಸಂಚಾರ. ನಾನು ಇಂಥ ಚೆಲುವೆಯ ಜೊತೆ ಒಂದೇ ಕೊಡೆಯಡಿಯಲ್ಲಿ ಬಂದದ್ದಾ? ಆಗ ಮುಖನೋಡಬೇಕೆನ್ನಿಸಿದರೂ ಆಗಿರಲಿಲ್ಲ. ಆಗೊಮ್ಮೆ ಈಗೊಮ್ಮೆ ಭುಜಕ್ಕೆ ಭುಜ ತಾಕಿದಾಗ ವಿಚಿತ್ರ ಖುಶಿಯೆನ್ನಿಸುತ್ತಿತ್ತು ಅಷ್ಟೆ.

    “ಮನೆಯವರದ್ದೆಲ್ಲ ಊಟ ಆಯ್ತು. ನಮ್ಮಿಬ್ಬರದ್ದೆ ಬಾಕಿ” ಅಂತಂದ ಸುನಯನ ಬಾಳೆ ಎಲೆ, ಮಣೆ, ನೀರಿನ ಲೊಟವನ್ನಿಟ್ಟು ಸುದೀಪನನ್ನ ಊಟಕ್ಕೆ ಕರೆದಳು.

    “ನಿಮ್ಮದು…..” ಅಂತ ಕೇಳಿದ ಸುದೀಪ.
    “ನಾನೂ ಊಟ ಮಾಡ್ತೇನೆ. ನಿಮಗೆ ಮೊದ್ಲು ಬಡಿಸಿ..”
    “ನಮ್ಮ ಮಗಳು ಬಡಿಸ್ತಾಳೆ. ಸಂಕೋಚ ಬೇಡ. ನಮ್ಮಲ್ಲಿಯ ಅಡುಗೆ ನಿಮಗೆ ಇಷ್ಟವಾಗುತ್ತೋ ಇಲ್ವೋ…” ಆಕೆಯ ತಾಯಿ ಉಪಚಾರಕ್ಕೆ ಬಂದಿದ್ದರು….
    “ನನಗೆ ದೊಡ್ಡಸ್ತಿಕೆಯಿಲ್ಲ. ಬೇಕಿದ್ರೆ ನಾನೇ ಕೇಳ್ತೀನಿ..ರಸ್ತೆಯಲ್ಲಿ ಅಲೆಯುತ್ತಿದ್ದ ನನ್ನನ್ನ ಕರೆದು ಊಟ ಹಾಕಿಸ್ತಿದೀರಿ. ತುಂಬ ಉಪಕಾರ ಆಯ್ತು” …ಸುದೀಪ ಒಳ್ಳೆ ಹುಡುಗನ ಪೋಸು ಕೊಡಲು ಆರಂಭಿಸಿದ…

    ” ನೀವು ಕೆಲಸ ಮಾಡ್ತಿದೀರಾ?” ಆಕೆಯ ತಂದೆಯ ಆಗಮನ…

  2. ****************
    “ಏನಪ್ಪಾ, ಏನು ಕೆಲಸ ಮಾಡ್ತಾ ಇದೀಯಾ ಅಂತ ನಾನು ಕೇಳಿದ್ದು. ನಿನ್ನ ನೋಡಿದ್ರೆ ಏನೋ ಭಾರಿ ಕನಸು ಕಾಣ್ತಾ ಇರೋ ಹಾಗಿದೆಯಲ್ಲಾ! ”
    ಹಹ್ಹಹ್ಹ…. ಯಾರೋ ಜೋರಾಗಿ ನಕ್ಕಂತಾಗಿ ಸುದೀಪ ಬೆಚ್ಚಿ ಬಿದ್ದ. ಅರೇ, ‘ಇದ್ಯಾರೋ ಹಿರಿಯರು, ಎಲ್ಲಿದ್ದೇನೆಂದು’ ಎಚ್ಚರಗೊಂಡ ಸುದೀಪನಿಗೆ ತನ್ನನ್ನೇ ಪಿಳಿ-ಪಿಳಿ ನೋಡುತ್ತಿದ್ದ ಸೃಷ್ಟಿ ಕಾಣಿಸಿದಳು, ಹೌದು, ಥೇಟ ಸುನಯನನಳ ಕಂಗಳೇ!!! ಆ ಮುದ್ದು ಮರಿಯ ಸುಂದರ ಸಮ್ಮೋಹಕ ಕಣ್ಣುಗಳು, ಸುದೀಪನ ಮನಸ್ಸನ್ನು ನೀಲಿಕೇರಿಯ ನೆನಪಿನಂಗಳಕ್ಕೆ ಜಾರಿಸಿಬಿಟ್ಟಿದ್ದವು.
    “ಇವರು ಸ್ವಲ್ಪ ಹಾಗೇ ಅಪ್ಪಾ, ಸ್ವಲ್ಪ ಕನಸು ಕಾಣೋದು ಜಾಸ್ತಿ” ಯಾಮಿನಿಯ ಮಾತುಗಳಿಂದ, ಆ ಹಿರಿಯರು ಅವಳ ತಂದೆ ಎಂದು ಅರಿವಾಗಿ ‘ನಮಸ್ಕಾರ’ ಹೇಳಿದ.

    ***
    ಕೊಂಡಿ ಜೋಡಿಸಿದ್ದು ಸರಿಹೋಯಿತೇ ಃ-)

  3. “ಬಾರಪ್ಪಾ, ನಿಧಾನಕ್ಕೇ ಕೂತ್ಕೊಂಡು ಮಾತಾದಡೋಣ. ಪಾಪ, ಆಗಲಿಂದ ಸುಮ್ನೇ ನಿಂತೇ ಇದೀಯಲ್ಲಾ” ಆತ್ಮೀಯವಾಗಿ ಕರೆದವರನ್ನಿ ಹಿಂಬಾಲಿಸಿ, ಒಳಗಿನ ಸೋಫಾ ಮೇಲೆ ಕುಳಿತ. ‘ಯಾಮಿನಿಗೇ ಮದುವೆ ಇಲ್ಲ, ಆದರೆ ಮಗಳಿದ್ದಾಳೆ’ ಎನ್ನುವ ಗೊಂದಲ, ಮತ್ತೆ ಮತ್ತೆ ಕಾಡುವ ಸುನಯನಳ ನೆನಪುಗಳಲ್ಲಿ ಮುಳುಗಿ ಮೂಕನಂತಿದ್ದ . ‘ಪಾಪ, ಬಹಳ ಸಂಕೋಚದ ಹುಡುಗ’ ಎಂದು ಭಾವಿಸಿದ ರಾಯರು “ನಮ್ಮ ಯಾಮಿನಿ ನಿನ್ನ ವಿಷಯ ಬಹಳ ಹೇಳ್ತಿರ್ತಾಳೆ. ಯಾವೂರು, ಅಪ್ಪ ಅಮ್ಮ ಏನು ಮಾಡ್ತಾರೆ?” ಎಂದು ಲೋಕಾಭಿರಾಮ ಶುರು ಮಾಡಿದರು. ಅವರ ಅಪ್ಯಾಯತೆಯಿಂದ ಚೇತರಿಸಿಕೊಂಡ ಸುದೀಪ “ಮಂಗಳೂರು ಹತ್ತಿರ ನಮ್ಮೂರು. ಅಪ್ಪ ಇಲ್ಲ, ಚಿಕ್ಕವನಾಗಿದ್ದಾಗಲೇ ಹೋಗಿಬಿಟ್ರು. ಅಮ್ಮ ಒಬ್ರೇ, ಊರಲ್ಲೆ ಇದಾರೆ” ಎಂದು ಪರಿಚಯ ಹೇಳಿಕೊಂಡ.

  4. “ಬಾರಪ್ಪಾ, ನಿಧಾನಕ್ಕೇ ಕೂತ್ಕೊಂಡು ಮಾತಾದಡೋಣ. ಪಾಪ, ಆಗಲಿಂದ ಸುಮ್ನೇ ನಿಂತೇ ಇದೀಯಲ್ಲಾ” ಆತ್ಮೀಯವಾಗಿ ಕರೆದವರನ್ನಿ ಹಿಂಬಾಲಿಸಿ, ಒಳಗಿನ ಸೋಫಾ ಮೇಲೆ ಕುಳಿತ. ‘ಯಾಮಿನಿಗೇ ಮದುವೆ ಇಲ್ಲ, ಆದರೆ ಮಗಳಿದ್ದಾಳೆ’ ಎನ್ನುವ ಗೊಂದಲ, ಮತ್ತೆ ಮತ್ತೆ ಕಾಡುವ ಸುನಯನಳ ನೆನಪುಗಳಲ್ಲಿ ಮುಳುಗಿ ಮೂಕನಂತಿದ್ದ . ‘ಪಾಪ, ಬಹಳ ಸಂಕೋಚದ ಹುಡುಗ’ ಎಂದು ಭಾವಿಸಿದ ರಾಯರು “ನಮ್ಮ ಯಾಮಿನಿ ನಿನ್ನ ವಿಷಯ ಬಹಳ ಹೇಳ್ತಿರ್ತಾಳೆ. ಯಾವೂರು, ಅಪ್ಪ ಅಮ್ಮ ಏನು ಮಾಡ್ತಾರೆ?” ಎಂದು ಲೋಕಾಭಿರಾಮ ಶುರು ಮಾಡಿದರು. ಅವರ ಅಪ್ಯಾಯತೆಯಿಂದ ಚೇತರಿಸಿಕೊಂಡ ಸುದೀಪ “ಮಂಗಳೂರು ಹತ್ತಿರ ನಮ್ಮೂರು. ಅಪ್ಪ ಇಲ್ಲ, ಚಿಕ್ಕವನಾಗಿದ್ದಾಗಲೇ ಹೋಗಿಬಿಟ್ರು. ಅಮ್ಮ ಒಬ್ರೇ, ಊರಲ್ಲೆ ಇದಾರೆ” ಎಂದು ಪರಿಚಯ ಹೇಳಿಕೊಂಡ.

    ಆಷ್ಟು ಹೊತ್ತಿಗೆ ಸೃಷ್ಟಿಯನ್ನೆತ್ತಿಕೊಂಡ ಯಾಮಿನಿ ಅಲ್ಲಿಗೆ ಬಂದಳು.

  5. `ಬಾ ಪುಟ್ಟಿ…’ಸೃಷ್ಟಿಯೆಡೆಗೆ ಕೈ ಚಾಚಿ ಕರೆದ `ಇವನನ್ನು ನಂಬಬಹುದೇ…?’ ಎಂದು ತನ್ನ ಬಟ್ಟಲು ಕಂಗಳಲ್ಲಿ ಪ್ರಶ್ನೆ ತುಳುಕಿಸುತ್ತಾ ಸುದೀಪನನ್ನೇ ನಿರುಕಿಸಿದಳು ಸೃಷ್ಟಿ
    ಸುನಯನಳಿಗೂ ನನ್ನ ಬಗ್ಗೆ ಇದೇ ಸಂದೇಹ ಇತ್ತಾ? ಒಂದುಕ್ಷಣ ಅವನ ಮನದಲ್ಲಿ ಸಂದೇಹ ಕಾಡಿತು `ಪುಟ್ಟೀ…ಅಂಕಲ್ ತುಂಬಾ ಒಳ್ಳೆಯವರಮ್ಮಾ…ಹೋಗು ..’
    ಮಗಳನ್ನು ಪುಸಲಾಯಿಸುತ್ತಿದ್ದಳು ಯಾಮಿನಿ.`ಹೋಗು ಪುಟ್ಟಮ್ಮಾ..’ಯಾಮಿನಿಯ ತಂದೆಯೂ ದನಿಗೂಡಿಸಿದರು ಸೃಷ್ಟಿಯ ಮನದಲ್ಲಿನ್ನೂ ಸುದೀಪನ ಬಗ್ಗೆ ನಂಬಿಕೆ ಬಂದತಿಲ್ಲಾ…
    ಅವನನ್ನೇ ನೆಟ್ಟದೃಷ್ಟಿಯಿಂದ ನೋಡುತ್ತಿದ್ದಳು
    ಯಾಮಿನಿಯ ತಂದೆ ಅಂದಿನ ಪೇಪರ್ ಕೈಗೆತ್ತಿಕೊಳ್ಳುತ್ತಾ `ಇಲ್ಲೇ ಊಟ ಮಾಡಿಕೊಂಡು ಹೋಗೀ…ಇಷ್ಟೊತ್ತಾಗಿದೆ ಇನ್ನು ರೂಮಿಗೆ ಹೋಗಿ ಏನು ಮಾಡ್ಕೋತೀರಾ…’ಅಂದರು
    `ಪುಟ್ಟಿ ನೀನು ಅಂಕಲ್ ಹತ್ರ ಹೋಗ್ತೀಯಾ.. ಜಾಣೆ… ಬಂಗಾರಿ… ಅಮ್ಮ ಅಡುಗೆ ಮಾಡುತ್ತೆ..’ಯಾಮಿನಿಯ ಮಾತಿಗೆ ಸೃಷ್ಟಿ ಬರಿದೇ ತಲೆ ಆಡಿಸಿ ನಕಾರ ಸೂಚಿಸಿದಳು
    `ಅಂಕಲ್ ನಿನ್ನ ಹೊರಗಡೆ ಕರ್ಕೊಂಡು ಹೋಗ್ತಾರೆ’ ಮೆಲ್ಲಗೆ ಬಾಣ ಬಿಟ್ಟಳು ಯಾಮಿನೀ.`ನಿಂಗೆ ಬಣ್ಣಬಣ್ಣದ ಹೂವು,ಕಾರು,ಅಂಗಡಿ ಎಲ್ಲಾ ತೋರುಸ್ತಾರೆ…’
    ಈ ಬಾರಿ ಸೃಷ್ಟಿ ಹೊರಗಿನ ಬಣ್ಣದ ಜಗತ್ತಿನ ಆಕರ್ಷಣೆಯಿಂದ ತಪ್ಪಿಸಿಕೊಳ್ಳಲಾರದೇ ಹೋದಳು! ನಸು ನಗುತ್ತಾ ಸುದೀಪನ ಚಾಚಿದ ತೋಳುಗಳೊಳಗೆ ಬಂದುಬಿಟ್ಟಳು

    `ಇದೇನೋ ಮಗು… ಆದರೆ ದೊಡ್ಡವರಿಗೂ ಹೊರಗಿನ ಬಣ್ಣದ ಜಗತ್ತಿನ ಆಕರ್ಷಣೆಯಿಂದ ತಪ್ಸಿಸಿ ಕೊಳ್ಳುವುದು ಕಷ್ಟವೇನೋ…’ಸೃಷ್ಟಿಯನ್ನು ತೋಳಲ್ಲಿ
    ತುಂಬಿಕೊಂಡು ಯೋಚಿಸಿದ ಸುದೀಪ.
    ಫಾರಿನ್ ಹುಡುಗ ನಾನು ತೋರಿಸಲಾಗದ ಹೊರಗಿನ ಬಣ್ಣದ ಜಗತ್ತನ್ನು ತೋರಿಸುವನೆಂದು ಅವನನ್ನು ಒಪ್ಪಿ ನಡೆದಳೇ ಸುನಯನಾ?
    ಈಗ ಯಾಮಿನೀ`ನಿಂಗೆ ಬಣ್ಣಬಣ್ಣದ ಹೂವು,ಕಾರು,ಅಂಗಡಿ ಎಲ್ಲಾ ತೋರುಸ್ತಾರೆ’ ಎಂದು ಸೃಷ್ಟಿಗೆ ಹೇಳಿದ ರೀತಿಯಲ್ಲೇ ಸುನಯನಳ ಅಪ್ಪ
    ನನ್ನ ಸುನೀ ಗೂ ಪುಸಲಾಯಿಸಿ ಮದುವೆಗೆ ಒಪ್ಪಿಸಿ ಬಿಟ್ಟರೇ?

    ಯಾಮಿನಿಯ ದನಿಗೆ ಎಚ್ಚೆತ್ತ ಸುದೀಪ

    `ತುಂಬಾ ದೂರ ಕರ್ಕೊಂಡು ಹೋಗ್ ಬೇಡೀ…ಅವಳ ಊಟದ ಟೈಂ ಆಯಿತು… ಹತ್ತೇ ಹತ್ತು ನಿಮಿಷ ಅಡುಗೆ ಆಗಿ ಬಿಡುತ್ತೆ ಬೇಗ ಬಂದ್ಬಿಡಿ..’ ಅನ್ನುತ್ತಾ ಅಡುಗೆ ಮನೆಗೆ ನಡೆದಳು ಯಾಮಿನೀ..
    ಯಾಮಿನಿಯ ಪುಟ್ಟ ಅಂಗಳದ ಹತ್ತೆಂಟು ಕುಂಡಗಳಲ್ಲಿ ಬಣ್ಣಬಣ್ಣದ ಹೂಗಳು ಅರಳಿದ್ದವು `ನೋಡು ಪುಟ್ಟೀ…ಕೆಂಪುಹೂ.. ಹಳದಿ ಹೂ..
    ಇಲ್ ನೋಡೂ..ಎಷ್ಟ್ ಚೆನ್ನಾಗಿದೆ’
    ಹೂಗಳನ್ನು ನೋಡಿ ಕಣ್ಣು ಅರಳಿಸಿ ನಕ್ಕಳು ಸೃಷ್ಟಿ

    “ಪ್ಯಾರೀ ಹೇ ಪೂಲೋಂಕಿ ಪಂಖುರಿಯಾ…
    ಪರ್ ತೇರೀ ಫಲಕೋಂಸಿ ಪ್ಯಾರೀ ಕಹಾ…
    ಸುನಯ್ ನಾ…”
    ಯೇಸು ದಾಸ್ ಸುದೀಪನ ಕಿವಿಯಲ್ಲಿ ಗುಣುಗುಣಿಸಿದ…

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.